Weekly Horoscope: ಜುಲೈ 23 ರಿಂದ ಜುಲೈ 29ರ ವರೆಗಿನ ವಾರಭವಿಷ್ಯ
ದ್ವಾದಶ ರಾಶಿಗಳ ವಾರ ಭವಿಷ್ಯ: 2023ರ ಜುಲೈ 23 ರಿಂದ ಜುಲೈ 29ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜುಲೈ 23 ರಿಂದ ಜುಲೈ 29ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ: ಅನಪೇಕ್ಷಿತ ಒತ್ತಡವು ವಾರದ ಆರಂಭದಲ್ಲಿ ಇರಬಹುದು. ಕೆಲಸದ ಹೊರೆ ಕಡಿಮೆ ಇರುವುದು. ಆದರೆ ಶಾರೀರಿಕ ಬಳಲಿಕೆ ಅನುಭವಿಸುವಿರಿ. ವಾಹನದಿಂದ ಈ ವಾರ ಸಂತೋಷವು ಸಿಗಲಿದೆ. ನಿಶ್ಚಲವಾದ ಸಂಪತ್ತು ನಿಮ್ಮ ಕೈ ಸೇರಬಹುದು. ಹೊಸ ಮನೆ ನಿರ್ಮಾಣಕ್ಕೆ ವಿಘ್ನಗಳು ಬರುವುದು. ನೀವು ನಿಜವಾದ ಸಂತೋಷವನ್ನು ಪಡೆಯುತ್ತೀರಿ. ಆರ್ಥಿಕವಾಗಿ, ಈ ವಾರ ತುಂಬಾ ಉತ್ತಮವಾಗಿಲ್ಲ. ಹೆಚ್ಚುವರಿ ಖರ್ಚು ಇರುತ್ತದೆ. ಲಾಭದ ಚಕ್ರ ಹಠಾತ್ ತಿರು ನಷ್ಟವೂ ಸಂಭವಿಸಬಹುದು. ಸಂಬಂಧಿಕರಿಂದ ದೂರು ಇರಬೇಕಾಗಬಹುದು. ತಮಾಷೆಯಾಗಿ ಈ ವಾರವನ್ನು ಕಳೆಯುವಿರಿ.
ವೃಷಭ: ಈ ವಾರ ಸ್ಥಗಿತಗೊಂಡ ವ್ಯವಹಾರವು ಪುನಃ ಆರಂಭವಾಗಬಹುದು. ಹಣದಿಂದ ಸಮಸ್ಯೆಯು ಗೊಂದಲವಾಗಿಯೇ ಇರುವುದು. ರಾಜಕೀಯ ಪ್ರಭಾವವು ಸ್ಥಾನಮಾನವನ್ನು ಹೆಚ್ಚಿಸುತ್ತದೆ. ನೀವು ಭಯದೊಂದಿಗೆ ಕೆಲಸ ಮಾಡಿದರೆ ಕೆಲಸವು ಹದಗೆಡಬಹುದು. ಆಪ್ತರ ಅಪಕ್ವ ಸಲಹೆ ದೊಡ್ಡ ಹಾನಿಯನ್ನುಂಟು ಮಾಡುವುದು. ಕುಟುಂಬದಲ್ಲಿನ ಸಂಘರ್ಷವು ಹಿರಿಯರ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಿಕರ ಮಾತಿನಿಂದ ಉದ್ವೇಗಕ್ಕೆ ಸಿಲುಕಬಹುದು. ನೆರೆಹೊರೆಯವರು ನಿಮ್ಮ ಸಹಾಯಕ್ಕೆ ಬರಬಹುದು. ಈ ವಾರ ನಿಮ್ಮ ವಾಹನವನ್ನು ಅಪರಿಚಿತರಿಗೆ ನೀಡುವುದು ಬೇಡ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು.
ಮಿಥುನ: ಈ ವಾರ ಹೊಸ ಸ್ನೇಹವು ಸಿಗಲಿದೆ. ಒಬ್ಬ ಅನುಭವಿಯ ಅನುಭವದ ಸಲಹೆಯು ವ್ಯವಹಾರದಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಕೆಲಸದಲ್ಲಿ ಹೊಸ ಆಲೋಚನೆಗಳು ಉಂಟಾಗುತ್ತದೆ. ಉನ್ನತ ಅಧಿಕಾರಿಗಳ ಸಹಕಾರವು ಮಧ್ಯಮವಾಗಿರುವುದು. ನಿಮ್ಮ ಕೌಶಲ್ಯವು ಹೆಚ್ಚಾಗುತ್ತದೆ ಮತ್ತು ಮಾತು ಹೆಚ್ಚಾಗುತ್ತದೆ. ಮನಃಸ್ಥಿತಿಯನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಿ. ಉದ್ವೇಗದಿಂದ ನೀವು ಅಸಮಾಧಾನಗೊಳ್ಳಬಹುದು. ಒಂದಕ್ಕೊಂದು ಸೇರಿಕೊಂಡು ಆಲೋಚನೆಯು ಬೆಳೆಯುತ್ತದೆ. ಅನಗತ್ಯ ವಿವಾದಗಳಿಂದ ದೂರವಿರಿ. ಮನಸ್ಸಿನಲ್ಲಿ ಹಲವು ಬಗೆಯ ಸಂದೇಹಗಳು ಹುಟ್ಟಿಕೊಳ್ಳುತ್ತವೆ. ಜನರು ನಿಮ್ಮನ್ನು ಇಷ್ಟ ಪಡುತ್ತಾರೆ.
ಕಟಕ: ಜುಲೈ ತಿಂಗಳ ಕೊನೆಯ ವಾರದ ಆರಂಭದಲ್ಲಿ ಕಾರ್ಯಕ್ಕೆ ಹೆಚ್ಚು ಶ್ರಮಿಸಿದರೆ ಪ್ರಯೋಜನವಿಲ್ಲ. ಅನೇಕ ಪ್ರಯತ್ನಗಳು ಕ್ಷಣಾರ್ಧದಲ್ಲಿ ವಿಫಲವಾಗಬಹುದು. ಮನಸ್ಸಿನ ಶಾಂತಿ ಕೂಡ ಕಡಿಮೆ ಇರುತ್ತದೆ ಮತ್ತು ದೈಹಿಕ ಸಮಸ್ಯೆಗಳು ಕಾಡಬಹುದು. ದೇಹದ ಕೆಳಭಾಗದಲ್ಲಿ ತೊಂದರೆಯು ಕಾಣಿಸಿಕೊಳ್ಳಬಹುದು. ನಮ್ರತೆ ನಿಮ್ಮನ್ನು ವಿಶೇಷ ವ್ಯಕ್ತಿಯನ್ನಾಗಿ ಮಾಡುತ್ತದೆ. ನಿಮ್ಮ ಸಾಮರ್ಥ್ಯವು ಇದಕ್ಕೆ ಕಾರಣವಾಗುತ್ತದೆ. ವಾರದ ಆರಂಭದಲ್ಲಿ ಚಂದ್ರನು ನಿಮ್ಮ ರಾಶಿಗೆ ಬಂದು ನಿಮ್ಮ ಕಲ್ಪನೆಗೆ ಹೊಸ ಅವಕಾಶವನ್ನು ಕೊಡುವನು. ಸತ್ಯವು ಕಹಿಯಾಗಿದ್ದರೂ ಅದು ನೋವುಂಟು ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತವೆ. ನಿಮ್ಮ ಅಂತಸ್ಸತ್ತ್ವವನ್ನು ಜಾಗರೂಕ ಗೊಳಿಸಿ.
ಸಿಂಹ: ಈ ವಾರ ಜುಲೈ ತಿಂಗಳ ಕೊನೆಯ ವಾರವಾಗಿದ್ದು ಗ್ರಹಗತಿಗಳಲ್ಲಿ ಸ್ವಲ್ಪ ಬದಲಾವಣೆ ಇರಲಿದೆ. ನಿಮ್ಮ ಇಚ್ಛೆಗಳು ಈಡೇರುವುದು. ಸ್ನೇಹಿತರಿಗೆ ಸಂಪೂರ್ಣ ಬೆಂಬಲ ಸಿಗುತ್ತದೆ ಪ್ರೀತಿ ಮತ್ತು ಸಂಬಂಧದಲ್ಲಿ ದುಃಖವನ್ನು ಅನುಭವಿಸುವಿರಿ. ಆದಾಯದಲ್ಲಿ ಗಮನಾರ್ಹ ವೃದ್ಧಿಯು ಇರಲಿದೆ. ದೀರ್ಘ ಪ್ರಯಾಣವನ್ನು ಮುಂದೂಡದಿರಿ. ಕುಟುಂಬ ವ್ಯವಹಾರವು ಆನಂದವನ್ನು ನೀಡುವುದು. ಯಾವ ಅಪಾಯವನ್ನೂ ತಂದುಕೊಳ್ಳುವುದು ಬೇಡ. ರಾಜಕೀಯ ಮಾತುಗಳು ಸಂಬಂಧವನ್ನು ಹಾಳುಮಾಡಬಹುದು. ಉನ್ನತ ಮಟ್ಟದ ಸ್ನೇಹಿತರು ಪ್ರಯೋಜನ ಪಡೆಯುತ್ತಾರೆ.
ಕನ್ಯಾ: ಈ ವಾರ ಸಂಗೀತ, ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚುವುದು. ಉತ್ತಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವಿರಿ. ನಿಮ್ಮೊಳಗೆ ಭಯವು ಇರಲಿದೆ. ವೃತ್ತಿಯಲ್ಲಿ ಆತಂಕದ ವಾತಾವರಣವು ಸೃಷ್ಟಿಯಾಗುವುದು. ವಾಹನದಿಂದ ನಿಮಗೆ ನಷ್ಟವಾಗುವುದು. ವಿವಾಹವೂ ವಿಳಂಬವಾಗುವುದು. ಸ್ನೇಹಿತರ ಸಹವಾಸವು ನಿಮಗೆ ಅಪವಾದವನ್ನು ತಂದು ಕೊಡುವುದು. ಉದ್ಯೋಗದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಪಾಲುದಾರಿಕೆಯಲ್ಲಿ ಉದ್ಯಮವನ್ನು ತಯಾರಿಸಿ.
ತುಲಾ: ಈ ವಾರ ಗೌರವಾದಿಗಳು ಲಭಿಸಬಹುದು. ನಿಮ್ಮ ವರ್ತನೆಯು ಹೆಚ್ಚು ಪರಿಣಾಮಕಾರಿಯಾಗಿ ಇರಲಿದೆ. ಬಂಧುವಿಯೋಗವನ್ನು ಸಹಿಸುವುದು ಕಷ್ಟವಾದೀತು. ನಿಮ್ಮ ಬಳಿ ಧನಸಹಾಯವನ್ನು ಬಯಸಿಬರಬಹುದು. ಇಲ್ಲವೆನದೇ ಸ್ವಲ್ಪವನ್ನೇ ಕೊಡಿ. ಬುದ್ಧಿವಂತ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಂದರೆಯಾಗಿ ಹತಾಶರಾಗುವರು. ಉದ್ಯೋಗದಲ್ಲಿ ಉನ್ನತ ಸ್ಥಾನದ ಆಕಾಂಕ್ಷಿಗಳು ನೀವಾಗಿದ್ದೀರಿ. ಕೆಲಸಕ್ಕಾಗಿ ಯಾರನ್ನೋ ಆಶ್ರಯಿಸಿ ಅವರಿಂದ ಪ್ರಯೋಜನವನ್ನು ಪಡೆಯುವಿರಿ. ಕೃತಜ್ಞತೆ ಇರಲಿದೆ.
ವೃಶ್ಚಿಕ: ಜುಲೈ ತಿಂಗಳ ನಾಲ್ಕನೆಯ ವಾರ ಕೆಲವು ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಿದ್ದಾರೆ. ರಾಹುವು ರವಿಯ ಮೆನಯಲ್ಲಿದ್ದಕಾರಣ ರಾಜಕೀಯ ಮತ್ತು ಕಾನೂನು ಸಂಘರ್ಷಗಳಿಗೆ ಕಾರಣವಾಗುವುದು. ಸಂತೋಷ ಕಡಿಮೆಯಾಗುತ್ತದೆ. ವಾಹನದಿಂದ ಬಳಲುವ ಸಾಧ್ಯತೆ ಇದೆ. ಸ್ನೇಹಿತರಿಂದ ಬೆಂಬಲದ ಕೊರತೆ ಪ್ರತಿಫಲಿಸುತ್ತದೆ. ಈ ಸಮಯ ಆರ್ಥಿಕವಾಗಿ ಉತ್ತಮವಾಗಿಲ್ಲ. ಉದ್ಯೋಗವನ್ನು ಬದಲಿಸುವ ಯೋಚನೆ ಮಾಡಿ. ತಂತ್ರಜ್ಞರಿಗೆ ಲಾಭ. ಕಾನೂನಿ ಸಮಸ್ಯೆಯನ್ನು ಬಗೆಹರಿಕೊಳ್ಳುವಿರಿ. ಸಮಯದ ಮಿತಿಯಲ್ಲಿ ವ್ಯವಹರಿಸಿ.
ಧನುಸ್ಸು: ನಿಮ್ಮ ರಾಶಿಯ ಅಧಿಪತಿಯಾದ ಬೃಹಸ್ಪತಿಯ ಪಂಚಮದಲ್ಲಿ ರಾಹುವಿನ ಜೊತೆ ಇರುವನು. ಮಕ್ಕಳಿಂದ ತೊಂದರೆ ಹಾಗೂ ವಿದ್ಯಾಭ್ಯಾಸವು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಶುಭಕಾರ್ಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೆಲವು ಉತ್ತಮ ಕಾರ್ಯಕ್ರಮಗಳಿಗೆ ಸೇರಲು ಅವಕಾಶವಿರುತ್ತದೆ, ಅದು ಮನಸ್ಸನ್ನು ಮೆಚ್ಚಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ. ಯಂತ್ರೋಪಕರಣಗಳಿಂದ ಲಾಭವನ್ನು ಗಳಿಸುವಿರಿ. ಆಂತರಿಕ ಸಾಮರ್ಥ್ಯದಿಂದ, ನೀವು ಪ್ರತಿಕೂಲ ಸಂದರ್ಭಗಳಿಗೆ ಸಹ ಹೊಂದಿಕೊಳ್ಳುತ್ತೀರಿ. ಕುಟುಂಬದಲ್ಲಿ ಸಂತೋಷವು ಕಂಡುಬರುವುದು. ಸಂಗಾತಿಯ ಮೇಲೆ ಕೆಲಸದ ಹೊರೆ ಹೆಚ್ಚಾಗುವುದರಿಂದ ಖಿನ್ನತೆಗೆ ಒಳಗಾಗಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶಗಳನ್ನು ಪಡೆಯುವರು. ಆಧ್ಯಾತ್ಮಿಕದತ್ತ ನೀವು ಆಸಕ್ತರಾಗುವಿರಿ. ಅದೃಷ್ಟ ನಿಮ್ಮ ಕೈಯಲ್ಲಿದೆ. ಬಳಕೆಯ ವಿಚಾರದಲ್ಲಿ ನೀವು ಸೋಲುವಿರಿ.
ಮಕರ: ಜುಲೈ ತಿಂಗಳ ಕೊನೆಯ ವಾರದಂದು ನಿಮಗೆ ಶುಭವನ್ನು ನಿರೀಕ್ಷಿಸಬಹುದು. ನವಮದಲ್ಲಿ ಬುಧ, ಕುಜ ಹಾಗೂ ಶುಕ್ರರ ಸಂಯೋಗದಿಂದ ನಿಮಗೆ ಪೂರ್ವಾರ್ಜಿತ ಕರ್ಮದ ಫಲವು ದೊರೆಯುವುದು. ತಂದೆಯ ಕಡೆಯಿಂದ ನಿಮ್ಮ ವಿವಾಹದ ಮಾತುಕತೆ ಇರಲಿದೆ. ಶತ್ರುಗಳ ಕಾಟವು ಗಳಿಕೆಯ ಮೇಲೆ ಪರಿಣಾಮ ಬೀರಬಹುದು. ಕುಟುಂಬದ ನಿರೀಕ್ಷೆ ಹೆಚ್ಚಿದ ಕಾರಣ ಒತ್ತಡವೂ ಹೆಚ್ಚಾಗುವ ಸಾಧ್ಯತೆ ಇದೆ. ಈಗ ಹೊಸ ಉದ್ಯಮಗಳಿಗೆ ಸೇರಿಕೊಳ್ಳುವುದು ಬೇಡ. ಸುತ್ತಮುತ್ತಲಿನ ಜನರ ನೋವುಗಳು ನಿಮ್ಮ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತವೆ. ಇನ್ನೊಬ್ಬರ ತಂತ್ರವು ನಿಮ್ಮ ಉದ್ಯಮಕ್ಕೆ ಪುಷ್ಟಿಯನ್ನು ಕೊಡಬಹುದು. ಉಂಟುಮಾಡಬಹುದು. ಹೊಸ ಒಪ್ಪಂದವು ಲಾಭಕ್ಕೆ ಕಾರಣವಾಗುವುದು. ಸಾಲಗಾರರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ವಾರಾಂತ್ಯದ ವೃತ್ತಿಜೀವನದಲ್ಲಿ ಸಣ್ಣ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಕುಂಭ: ಕೊನೆಯ ವಾರವಾಗಿದ್ದು ಶುಭಾಶುಭ ಮಿಶ್ರಫಲಗಳು ಇರಲಿವೆ. ಸಪ್ತಮದಲ್ಲಿ ಕುಜ ಹಾಗೂ ಶುಕ್ರ ಜೊತೆ ಬುಧನೂ ಬರುವ ಕಾರಣ ಪ್ರೇಮ ವಿವಾಹವು ಆಗಲಿದ್ದು ಬುದ್ಧಿವಂತೆಯಾದವಳು ಸಂಗಾತಿಯು ಬರುವಳು. ಸಹೋದರನಿಂದ ಬಂದ ಸುದ್ಧಿ ಸಂತೋಷವನ್ನು ಕೊಡುವುದು. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ. ಆಧ್ಯಾತ್ಮಿಕತೆಯ ಕಡೆಗೆ ಸೆಳೆತ ಹೆಚ್ಚಾಗುವುದು. ನಿಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸುವಿರಿ. ಮನಸ್ಸು ಚಂಚಲವಾಗಿರುತ್ತದೆ. ಬೌದ್ಧಿಕ ಸಾಮರ್ಥ್ಯದ ಪ್ರದರ್ಶನವಾಗಲಿದೆ. ಅಪಾಯದಿಂದ ನೀವು ಹೊರಬರಲು ಅವಕಾಶಗಳು ತೆರೆದುಕೊಳ್ಳಬಹುದು. ವಿರೋಧಿಗಳು ನಿಮ್ಮನ್ನು ಅಪಹಾಸ್ಯ ಮಾಡುವ ಸಂಭವವಿದೆ.
ಮೀನ: ಜುಲೈ ತಿಂಗಳ ಕೊನೆಯ ವಾರವು ಇದಾಗಿದ್ದು ಮಿಶ್ರಫಲಗಳನ್ನು ನೀವು ಅನುಭವಿಸುವಿರಿ. ಈ ವಾರ ನಿಮಗೆ ಧೈರ್ಯವು ಹೆಚ್ಚಾಗಿರಲಿದೆ. ಷಷ್ಠದ ಕುಜನು ಧೈರ್ಯವನ್ನು ಕೊಡುವನು. ಕುಜ ಹಾಗೂ ಶುಕ್ರರ ಸಂಯೋಗದ ಜೊತೆ ಬುಧನೂ ಸೇರಿಕೊಳ್ಳುವನು. ಆರೋಗ್ಯದ ಬಗ್ಗೆ ಗಮನವು ಅತ್ಯಗತ್ಯ. ಸೃಷ್ಟಿಶೀಲ ವಿಚಾರದಿಂದ ಪ್ರಯೋಜನವಾಗಕಿದೆ. ವಸ್ತು ಸಮೃದ್ಧಿ ಹೆಚ್ಚಾಗುತ್ತದೆ. ಕುಶಾಗ್ರಮತಿ ಮತ್ತು ಜ್ಞಾನದಿಂದ, ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಜೀವನ ಸಂಗಾತಿಯಿಂದಾಗಿ ಅದೃಷ್ಟ ಬರಲಿದೆ. ಪೋಷಕರೊಂದಿಗಿನ ಸಂಬಂಧ ಬಲಗೊಳ್ಳುತ್ತದೆ. ಶನೈಶ್ಚರನಿಗೆ ಎಳ್ಳಿನ ದೀಪವನ್ನು ಬೆಳಗಿ.
Published On - 6:40 am, Sun, 23 July 23