weekly horoscope: ಜುಲೈ 9 ರಿಂದ ಜುಲೈ 15 ರ ವರೆಗಿನ ವಾರಭವಿಷ್ಯ, ಈ ರಾಶಿಯವರು ಮೋಹಕ್ಕೆ ಸಿಲುಕಿ ಸಂಕಟಪಡಬೇಕಾದೀತು

ವಾರಭವಿಷ್ಯ: 2023ರ ಜುಲೈ 9 ರಿಂದ ಜುಲೈ 15 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

weekly horoscope: ಜುಲೈ 9 ರಿಂದ ಜುಲೈ 15 ರ ವರೆಗಿನ ವಾರಭವಿಷ್ಯ, ಈ ರಾಶಿಯವರು ಮೋಹಕ್ಕೆ ಸಿಲುಕಿ ಸಂಕಟಪಡಬೇಕಾದೀತು
ವಾರ ಭವಿಷ್ಯImage Credit source: Getty Images
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jul 09, 2023 | 12:45 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜುಲೈ 9 ರಿಂದ ಜುಲೈ 15ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ: ಮಾನಸಿಕ ಒತ್ತಡವು ಈ ವಾರದ ಅಂತ್ಯದಲ್ಲಿ ಕಾಣಿಸಲಿದೆ. ಕೆಲಸದ ಹೊರೆ ಇರುವುದಿಲ್ಲವಾದರೂ ಜವಾಬ್ದಾರಿಯನ್ನು ಹೊರಬೇಕಾದೀತು. ದೈಹಿಕ ಬಳಲಿಕೆ ಅನುಭವಿಸಬಹುದು. ವಾಹನದಿಂದ‌ ನಿಮಗೆ ಸಂತೋಷ ಸಿಗಲಿದೆ. ಮೋಹಕ್ಕೆ ಸಿಕ್ಕಿಕೊಂಡು ಸಂಕಟಪಡಬೇಕಾದೀತು. ಉದ್ಯೋದ ಅನುಭವವನ್ನು ಹಂಚಿಕೊಳ್ಳುವಿರಿ. ನಿಮ್ಮವರ ಬಗ್ಗೆ ಕಾಳಜಿ ಇದ್ದು ಅದನ್ನು ಮುಚ್ವಿಟ್ಟುಕೊಳ್ಳುವಿರಿ. ವಿದ್ಯಾರ್ಥಿಗಳ‌ ಓದಿನ‌ ಮಟ್ಟ ತಗ್ಗಲಿದೆ. ಈ ವಾರದಲ್ಲಿ ಹೆಚ್ಚು ಅನಾಯಾಸವಾಗಿ ಇರಲು ಪ್ರಯತ್ನಿಸುವಿರಿ. ಆರೋಗ್ಯವನ್ನು ಕಳೆದುಕೊಳ್ಳಬೇಕಾದೀತು.

ವೃಷಭ: ಈ ವಾರದಿಂದ ಸ್ಥಗಿತಗೊಂಡ ವ್ಯವಹಾರವು ಪುನಃ ಆರಂಭವಾಗಲಿದೆ. ಸಮಸ್ಯೆಯು ಗೊಂದಲವನ್ನುಂಟು ಮಾಡುತ್ತವೆ. ರಾಜಕೀಯಕ್ಕೆ ಪ್ರೇರಣೆ ನೀಡಬಹುದು. ನೀವು ಭಯದ ಜೊತೆ ಈ ವಾರ ಕೆಲಸ ಮಾಡುವಿರಿ. ಬಾಲಿಶ ಸಲಹೆಯು ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ನೆರೆಯವರ ಜೊತೆ ಆಸ್ತಿಯ ವಿಚಾರಕ್ಕೆ ಕಲಹವಾಗಲಿದೆ. ಶ್ರದ್ಧೆಯಿಂದ ದೇವತಾರಾಧನೆಯನ್ನು ಮಾಡಿ. ಲಾಭದಿಂದ ಹಠಾತ್ ನಷ್ಟವೂ ಸಂಭವಿಸಬಹುದು. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರು ಇರುತ್ತದೆ. ಖರ್ಚನ್ನು ಕಡಿಮೆ‌ ಮಾಡಿಕೊಳ್ಳುವುದು ಸೂಕ್ತ.

ಮಿಥುನ: ಜುಲೈ ಎರಡನೇ ವಾರವು ಕೆಲವು ಅನುಭವವನ್ನು ಕೊಡಲಿದೆ. ಆಪ್ತರ ಸಲಹೆಯು ವ್ಯವಹಾರದಲ್ಲಿ ಪ್ರಯೋಜನವಾಗುವುದು. ನಿಮ್ಮ ಕಾರ್ಯದಲ್ಲಿ ಹೊಸ ಆಲೋಚನೆಗಳು ಬರಬಹುದು. ಉನ್ನತ ಅಧಿಕಾರಿಗಳ ಸಹಕಾರವು ಸಿಗಲಿದೆ. ಯಾರ ಜೊತೆಯೂ ನೇರ ಮುಖಾಮುಖಿ ಬೇಡ.‌ ಉದ್ವೇಗದಿಂದ ನೀವು ಸಮಾಧಾನಗೊಳ್ಳಬಹುದು ಮುಖ್ಯವಾಗಿದೆ. ನಿಮ್ಮ ಭಾವನೆಯು ಹೊಸ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ.‌ ಹಲವು ಬಗೆಯ ಸಂದೇಶಗಳನ್ನು ಪರಿಹರಿಸಿಕೊಳ್ಳಲು ನೀವು ಬಲ್ಲವರನ್ನು ಭೇಟಿ ಮಾಡುವಿರಿ. ಈ ವಾರದ ಘಟನೆಗಳು ನಿಮಗೆ ಮಿಶ್ರ ಅನುಭವವನ್ನು ನೀಡುತ್ತವೆ.

ಕರ್ಕಾಟಕ: ಎರಡನೇ ವಾರವು ಪರಿಶ್ರಮದಿಂದ ಫಲವನ್ನು ಒಡೆಯುವ ವಾರವಾಗಿದೆ. ಒಂದು ಸಂಬದ್ಧ ಮಾತಿನಿಂದ ಪ್ರಯತ್ನಗಳು ವಿಫಲವಾಗಬಹುದು. ಮನಸ್ಸಿನ ಶಾಂತಿಯು ಕಡಿಮೆ ಇರುತ್ತದೆ. ದೈಹಿಕ ಸಮಸ್ಯೆಗಳು ಎದುರಿಸುವಿರಿ. ಆರೋಗ್ಯದ ಸಮಸ್ಯೆಗಳು ಎದುರಾಗಬಹುದು. ಹಿರಿಯರಲ್ಲಿ ವಿನಮ್ರತೆ ಇರಲಿ. ನಿಮ್ಮ ಸಾಧನೆಗೆ ಹೆಚ್ಚು ಮಹತ್ತ್ವವು ಬರಬಹುದು. ವಾರದ ಆರಂಭದಲ್ಲಿ ಮಾನಸಿಕವಾದ ಒತ್ತಡವು ಇರಲಿದ್ದು ನಿಧಾನವಾಗಿ ಕಡಿಮೆ ಆಗಲಿದೆ. ಸತ್ಯವು ಎಂದೂ ಕಹಿಯಾಗಿಯೇ ಇರುತ್ತದೆ. ಯಾವುದನ್ನೂ ಹಾನಿ ಮಾಡದೇ ಉಪಯೋಗಿಸುವುದು ಮುಖ್ಯ.

ಸಿಂಹ: ಈ ವಾರ ನಿಮ್ಮ ಇಚ್ಛೆ ಈಡೇರುವುದು. ಸ್ನೇಹಿತರಿಗೆ ಬೇಕಾದ ಬೆಂಬಲವನ್ನು ಕೊಡುವಿರಿ. ಹಳೆಯ ಮಾತುಕತೆಗಳನ್ನು ಮುರಿದು ನೀವು ಅಹಂಕಾರವನ್ನು ತೋರಿಸುವಿರಿ. ಈ ವಾರದ ಸದೀರ್ಘ ಪ್ರಯಾಣವನ್ನು ಮುಂದೆ ಹಾಕಿ. ಕುಟುಂಬ ವ್ಯವಹಾರವು ಸಾಕೆನಿಸಬಹುದು. ಕುಟುಂಬ ಸದಸ್ಯರ ಮಾತುಗಳು ನಿಮಗೆ ಹಿಡಿಸದೇ ಹೋದೀತು. ರಾಜಕೀಯದಿಂದ ಸ್ನೇಹವನ್ನು ಕಳೆದುಕೊಳ್ಳಬೇಕಾದೀತು. ಉನ್ನತ ಮಟ್ಟದ ಸ್ನೇಹಿತರ ಪ್ರಯೋಜನವನ್ನು ಪಡೆಯುವಿರಿ.‌ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಂಗಾತಿಯ ಪ್ರೀತಿಯನ್ನು ನೀವು ಈ ವಾರ ಕಳೆದುಕೊಳ್ಳಬಹುದು.

ಕನ್ಯಾ: ಈ ವಾರ ನಿಮ್ಮ ಶ್ರಮವೆಲ್ಲ ವ್ಯರ್ಥವಾದಂತೆ ಕಾಣುವುದು. ಕಲಾಸಕ್ತಿಯನ್ನು ಬೆಳೆಸಿಕೊಂಡು ನೆಮ್ಮದಿಯನ್ನು ಪಡೆಯುವಿರಿ. ವೃತ್ತಿಜೀವನದಲ್ಲಿ ಹೊಸ ಸಾಧ್ಯತೆಗಳಿವೆ. ಹುಡಕಿಕೊಳ್ಳಿ. ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಳ್ಳಬೇಡಿ. ನಕಾರಾತ್ಮಕವಾದ ಮಾತುಗಳು ನಿಮ್ಮನ್ನು ಕುಗ್ಗಿಸಬಹುದು. ದಣಿವರಿಯದೇ ಕೆಲಸದಲ್ಲಿ ಮುನ್ನುಗ್ಗುವಿರಿ. ಸಂಗಾತಿಯು ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಡಬಹುದು. ಬಿಡಿಸಿಕೊಳ್ಳಲು ನಿಮಗೆ ಕಷ್ಟವಾದೀತು. ಹೊಸ ಸಂಬಂಧಗಳನ್ನು ಇಷ್ಟಪಡುವಿರಿ. ಹಳೆಯ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ.

ತುಲಾ: ಈ ವಾರದ ನಿಮ್ಮ ಉದ್ಯಮಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಇರಲಿದೆ. ವ್ಯಕ್ತಿಯ ಪ್ರತಿಷ್ಠೆಯು ನಿಮಗೆ ಸಮಸ್ಯೆ ಆಗಬಹುದು. ಧೈರ್ಯವು ನಿಮ್ಮನ್ನು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ನೀವು ಪ್ರತಿಕೂಲವಾದ ಸಂದರ್ಭವನ್ನು ಸಮರ್ಥವಾಗಿ ಎದುರಿಸುವಿರಿ. ವ್ಯಾಪಾರದಲ್ಲಿ ಗ್ರಾಹಕರ ಜೊತೆ ಸಂಬಂಧಗಳು ಚೆನ್ನಾಗಿಟ್ಟುಕೊಳ್ಳುವುದು ಅಗತ್ಯ. ಬಂಧುಗಳ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಿ. ಸ್ಪಷ್ಟವಾದ ನಿರ್ಧಾರವನ್ನು ತಿಳಿಸಿ, ಇಲ್ಲದಿದ್ದರೆ ಗೊಂದಲ ಹೆಚ್ಚಾಗಬಹುದು. ಆರ್ಥಿಕತೆಯು ಅಪಾಯದಿಂದ ಮುಕ್ತವಾಗಲಿದೆ. ವಿರೋಧಿಗಳ ವರ್ತನೆಯು ನಿಮ್ಮನ್ನು ವೃತ್ತಿಜೀವನದಲ್ಲಿ ಹಿನ್ನಡೆಯಾಗುವಂತೆ ಮಾಡುತ್ತದೆ. ಸಾಲವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ: ನಿಮ್ಮ ಸ್ವಾಭಿಮಾನವು ಹೆಚ್ಚಾಗಿದರಲಿದೆ‌‌. ರಾಜಕೀಯ ಮತ್ತು ಕಾನೂನು ಸಂಘರ್ಷಗಳು ಬರಬಹುದು. ಪೂರ್ಣ ಸಂತೋಷದಿಂದ‌ ವಂಚಿತರಾಗುವಿರಿ. ಸ್ಥಿರ ಆಸ್ತಿಗೆ ಸಂಬಂಧಿಸಿದ ವಿವಾದವು ಇರಲಿದೆ. ಸ್ನೇಹಿತರಿಂದ ಬೆಂಬಲದ ಕೊರತೆ ಇರುತ್ತದೆ. ಈ ವಾರದಲ್ಲಿ ಆರ್ಥಿಕತೆಯು ಉತ್ತಮವಾಗಿಲ್ಲ. ಅಪಾಯಕಾರಿ ಹೂಡಿಕೆಯಿಂದ ನಷ್ಡವಾಗಲಿದೆ. ಆಯಾಸವು ನಿಮ್ಮ ವಿರಾಮವನ್ನು ಕೆಡಿಸುವುದು. ವಾರದ ಮಧ್ಯದಲ್ಲಿ ಶುಭಸೂಚನೆಯು ಇರಲಿದೆ. ಅಸಹನೆಯಿಂದ ಕೆಲಸವು ಮುಂದೆ ಸಾಗದು. ತಾಳ್ಮೆಯೇ ನಿಮಗೆ ಇಂದು ಅತ್ಯವಶ್ಯಕ. ವೃತ್ತಿಜೀವನದಲ್ಲಿನ ಬೌದ್ಧಿಕ ಕೌಶಲ್ಯಗಳಿಂದ ನೀವು ಹೊಸದನ್ನು ಪಡೆದುಕೊಳ್ಳುವಿರಿ. ನಿಮ್ಮವರ ಅಸಮಾಧಾನವು ನಿಮಗೆ ತೊಂದರೆಯನ್ನು ಉಂಟುಮಾಡೀತು.‌

ಧನುಸ್ಸು: ಈ ವಾರವು ಸತ್ಕಾರ್ಯದಲ್ಲಿ ಆಸಕ್ತಿ ಇರಲಿದೆ. ಉತ್ತಮ ಕಾರ್ಯಕ್ರಮಗಳಿಗೆ ಸೇರಲು ಅವಕಾಶವಿದೆ. ಅದು ಮನಸ್ಸನ್ನು ಮೆಚ್ಚಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುವುದು.‌ ನಿಮ್ಮ ಸಾಮರ್ಥ್ಯದಿಂದ ಪ್ರತಿಕೂಲವನ್ನೂ ಎದುರಿಸುವಿರಿ. ಕುಟುಂಬದಲ್ಲಿ ಸಂತೋಷವು ಕಂಡುಬರುತ್ತದೆ. ಸಂಗಾತಿಯ ಮೇಲೆ ಕೆಲಸದ ಹೊರೆ ಹೆಚ್ಚಾಗುವುದು.‌ ಮಾನಿಕವಾಗಿ ಕುಗ್ಗುವಿರಿ. ಉತ್ತಮ ಫಲಿತಾಂಶವನ್ನು ಪಡೆಯಲು ನೀವು ಇಚ್ಛಿಸುವಿರಿ. ಆಧ್ಯಾತ್ಮದಲ್ಲಿ ಪ್ರವೃತ್ತಿಯು ಹೆಚ್ಚಾಗಬಹುದು. ಅದೃಷ್ಟವು ನಿಮ್ಮ ಕೈಯಲ್ಲಿದೆ. ಇನ್ನೊಬ್ಬರ ಮಾತುಗಳು ನಿಮ್ಮ ಜೀವನದ ದಿಕ್ಕನ್ನು ಬದಲಿಸುವುದು. ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳಿ.

ಮಕರ: ಈ ವಾರ ಆರ್ಥಿಕಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರಿ. ತೊಂದರೆಗಳು ನಿಮಗೆ ದೊಡ್ಡದಾಗಿ ಕಾಣಿಸುತ್ತದೆ. ಈ ವಾರವು ನಿಮ್ಮ ಆದಾಯಕ್ಕೂ ಕೆಲವು ತೊಂದರೆಗಳು ಕಾಣಿಸಬಹುದು. ಕುಟುಂಬದಲ್ಲಿ ನಿಮ್ಮಿಂದ ನಿರೀಕ್ಷೆ ಹೆಚ್ಚಿದ್ದು ಒತ್ತಡವೂ ಹೆಚ್ಚಿರುವುವುದು. ಹೊಸ ಉದ್ಯೋಗಕ್ಕೆ ಸೇರುವಿರಿ. ತಂದೆಯ ಆರೋಗ್ಯ ಉತ್ತಮವಾಗಲಿದೆ.‌ ನಿಮ್ಮ ಸುತ್ತಮುತ್ತಲಿನ ಜನರ ನೋವುಗಳನ್ನು ಆಲಿಸುವಿರಿ. ಯಾರೊಬ್ಬರಿಂದ ಕೆಲಸಗಳು ಆಗುವುದಿಲ್ಲ. ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗಲಿದೆ.‌ ಹೊಸ ಒಪ್ಪಂದವನ್ನು ಮಾಡಿಕೊಂಡು ಲಾಭ ಗಳಿಸುವಿರಿ. ವಾರಾಂತ್ಯದ ವೃತ್ತಿಜೀವನದ ಒತ್ತಡವು ಬರಬಹುದು. ಪರರ ಸಹಾಯದಿಂದ ಅಗತ್ಯ ಕೆಲಸವನ್ನು ಮಾಡುವಿರಿ.

ಕುಂಭ: ಜುಲೈ ಎರಡನೇ ವಾರವು ಶಾರೀರಿಕ ದೌರ್ಬಲ್ಯವು ಇರಲಿದೆ. ನಿಮಗೆ ಶ್ರೇಷ್ಠವಾದ ಕಾರ್ಯವನ್ನು ಮಾಡಲು ದಿಕ್ಕು ಕಾಣುವುದು. ಸಹೋದರನಿಂದ ಒಳ್ಳೆಯ ಸುದ್ದಿಯು ನಿಮಗೆ ಸಿಗಲಿದೆ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ. ಅಧ್ಯಾತ್ಮದ ಕಡೆ ಒಲವು ಹೆಚ್ಚಬಹುದು. ನಿಮ್ಮ ಸುಪ್ತಪ್ರಜ್ಞೆಯು ಜಾಗರೂಕವಾಗಬಹುದು. ನಿಮ್ಮ ಪ್ರಯತ್ನಗಳು ಉದ್ಯೋಗಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು. ಯಾವ ದೂರನ್ನೂ ಈ ವಾರ ನಂಬಬೇಡಿ. ವಿಶಿಷ್ಟ ಗುಣಗಳ ಪರಿಚಯವು ಇತರರಿಗೆ ಆಗಲಿದೆ‌. ಬೌದ್ಧಿಕ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳುವಿರಿ. ಅಪಾಯದ ಸನ್ನಿವೇಶಗಳು ಎದುರಾದಾಗ ನೀವು ಗಟ್ಟಿಯಾಗಿ ಇರಬೇಕಾದೀತು. ಈ ವಾರ ಖರ್ಚು ಹೆಚ್ಚಾಗಬಹುದು. ವಿರೋಧಿಗಳು ನಿಮ್ಮನ್ನು ಅಪಹಾಸ್ಯ ಮಾಡುವರು.

ಮೀನ: ಜುಲೈ ತಿಂಗಳ ಎರಡನೇ ವಾರವು ಇದಾಗಿದ್ದು ಗ್ರಹಗತಿಗಳಲ್ಲಿ ಸಣ್ಣ ಬದಲಾವಣೆ ಇರಲಿದೆ. ಕುಜನು ಷಷ್ಠದಲ್ಲಿದ್ದು ಇರಮಗೆ ಧೈರ್ಯ ಮತ್ತು ಉಗ್ರತೆಯನ್ನು ನೀಡುಕೊಡುತ್ತಾನೆ. ಈ ವಾರ ಶುಕ್ರನೂ ಷಷ್ಟದಲ್ಲಿದ್ದು ಆಕರ್ಷಣೆಯನ್ನು ಕಡಿಮೆ ಮಾಡುವನು. ಮನಸ್ಸು ಸಂತೋಷವಾಗಿರುತ್ತದೆ. ನಿಮ್ಮ ಖ್ಯಾತಿಯು ಹೆಚ್ಚಾಗುವುದು. ನಿಮ್ಮ ಭಾಷಣದಿಂದ ಒಳ್ಳೆಯ ಪರಿಣಾಮವು ಉಂಟಾಗಬಹುದು. ವೃತ್ತಿಜೀವನದಲ್ಲಿ ಹೊಸ ಹೆಜ್ಜೆಗಳನ್ನು ಏರಲು ಈ ವಾರ ಒಂದು ಮಾರ್ಗವು ತೆರೆದುಕೊಳ್ಳುವುಸು. ಮಾತಿನಲ್ಲಿ ಮಾಧುರ್ಯ ಇದ್ದು ಎಲ್ಲ ಕೆಲಸವನ್ನೂ ಮಾಡಿಸಿಕೊಳ್ಳುವಿರಿ. ಸಹೋದರ ಸಹೋದರಿಯರಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಆನಂದಿಸುವಿರಿ. ಪೋಷಕರ ಜೊತೆಗಿನ ಸಂಬಂಧವು ಬಲವಾಗುವುದು. ಸೊಂಟ, ಬೆನ್ನು ನೋವು ಹೆಚ್ಚಾಗಬಹುದು ಈ ವಾರ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ