Weekly Horoscope in Kannada: ವಾರ ಭವಿಷ್ಯ: ಡಿ 15 ರಿಂದ 22 ರವರೆಗೆ ವಾರ ಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2024 | 1:02 AM

ಇದು ಡಿಸೆಂಬರ್ ತಿಂಗಳ ಮೂರನೇ ವಾರವಿದಾಗಿದೆ. ೧೫-೧೨-೨೦೨೪ರಿಂದ ೨೨-೧೨-೨೦೨೪ರವರೆಗೆ ಇರಲಿದೆ. ಸೂರ್ಯ ಮಿತ್ರನ ರಾಶಿಯಲ್ಲಿ ಇದ್ದರೂ ಶತ್ರುವಿನ ನವಾಂಶವನ್ನು ಪಡೆದುಕೊಂಡ ಕಾರಣ ಪೂರ್ಣ ಬಲವಿರದು. ಆದರೂ ತನ್ನ ಉತ್ತಮ‌ ಫಲವನ್ನು ನೀಡಲು ಸೂರ್ಯನು ಮುಂದಾಗುವನು.

Weekly Horoscope in Kannada: ವಾರ ಭವಿಷ್ಯ: ಡಿ 15 ರಿಂದ 22 ರವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಡಿ 15 ರಿಂದ 22 ರವರೆಗೆ ವಾರ ಭವಿಷ್ಯ
Follow us on

ಇದು ಡಿಸೆಂಬರ್ ತಿಂಗಳ ಮೂರನೇ ವಾರವಿದಾಗಿದೆ. ೧೫-೧೨-೨೦೨೪ರಿಂದ ೨೨-೧೨-೨೦೨೪ರವರೆಗೆ ಇರಲಿದೆ. ಸೂರ್ಯ ಮಿತ್ರನ ರಾಶಿಯಲ್ಲಿ ಇದ್ದರೂ ಶತ್ರುವಿನ ನವಾಂಶವನ್ನು ಪಡೆದುಕೊಂಡ ಕಾರಣ ಪೂರ್ಣ ಬಲವಿರದು. ಆದರೂ ತನ್ನ ಉತ್ತಮ‌ ಫಲವನ್ನು ನೀಡಲು ಸೂರ್ಯನು ಮುಂದಾಗುವನು.

ಧನುರ್ಮಾಸವೂ ಈ ವಾರದಲ್ಲಿ ಆರಂಭವಾಗುವ ಕಾರಣ ಸೂರ್ಯಾರಾಧನೆಯಿಂದ ವಿಶೇಷ ಫಲವಿದೆ. ಉಪವಾಸಾದಿಗಳಿಂದ ಸೂರ್ಯನ ಅನುಗ್ರಹ ಪಡೆದ ಆರೋಗ್ಯವನ್ನು ವರವಾಗಿ ಪಡೆಯಬಹುದು.

ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯಲ್ಲಿ ಡಿಸೆಂಬರ್ ತಿಂಗಳ ಮೂರನೇ ವಾರದಲ್ಲಿ ಶುಭಾಶುಭ ಫಲ. ಕೆಲವು ಸಮಸ್ಯೆಗಳು ಬರುತ್ತವೆ ಹೋಗುತ್ತವೆ.‌ ಅವುಗಳ ಕುರಿತು ಅತಿಯಾಗಿ ಆಲೋಚಿಸಿದಷ್ಟೂ ಸಮಸ್ಯೆಗಳು ಹಾಗೇ ಇರುತ್ತವೆ. ಹಣದ ವಿಚಾರವಾಗಿ ಸಣ್ಣ ಕಲಹಗಳು ಸಂಗಾತಿಯ ನಡುವೆ ನಡೆಯಬಹುದು. ವೃತ್ತಿಯಲ್ಲಿ ನಿಮಗೆ ಸಂತೋಷದ ವಾತಾವರಣವು ಇರಲಿದೆ. ನವಮದಲ್ಲಿ ಸೂರ್ಯನ ಸಾನ್ನಿಧ್ಯದಿಂದ ಕೆಲವು ಸಕಾರಾತ್ಮಕ ಪರಿವರ್ತನೆಗಳು ಆಗುವುದು. ಅರ್ಧಕ್ಕೆ ನಿಂತ ಕಾರ್ಯವು ಮುಂದುವರಿಯುವುದು. ದೈವ ಸಹಾಯದ ಫಲವನ್ನೂ ಪಡೆದುಕೊಳ್ಳುವಿರಿ. ಸಮಾರಂಭಗಳಿಗೆ ಹೋಗಿ ಆಪ್ತರ ಜೊತೆ ಸಮಾಲೋಚನೆ ನಡೆಸಲಿದ್ದೀರಿ. ಸ್ವಂತ ಉದ್ಯೋಗಿಗಳಿಗೆ ಶುಭವಾಗಲಿದೆ.

ವೃಷಭ ರಾಶಿ: ಇದು ಡಿಸೆಂಬರ್ ತಿಂಗಳ ಮೂರನೇ ವಾರವಾಗಿದ್ದು ನಿಮಗೆ ಮಧ್ಯಮ‌ಫಲ ಸಿಗುವುದು.‌ ಶುಕ್ರನು ನವಮದಲ್ಲಿ ನಿಮಗೆ ಅನಿರೀಕ್ಷಿತ ಆದಾಯವನ್ನು ತರುವನಿ. ಸ್ನೇಹಿತರ ಬೆಂಬಲವು ನಿಮ್ಮ ಕಾರ್ಯಕ್ಕೆ ಬಲವನ್ನು ತುಂಬಲಿದೆ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತನಾಡಿಕೊಳ್ಳಬಹುದು. ಯಾರಿಗೂ ಸಲಹೆಯನ್ನು ಕೊಡಲು ಇಂದು ಹೋಗಬೇಡಿ. ವಿದೇಶ ಪ್ರವಾಸಕ್ಕೆ ಅಡ್ಡಿಗಳು ಬರಲಿವೆ. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ದೂರದ ಪ್ರಯಾಣ ಸುಖಕರವಲ್ಲ. ಸಹೋದರರಿಂದ ನಿಮ್ಮ ಭೂಮಿಯ ವ್ಯವಹಾರದಲ್ಲಿ ನಷ್ಟವಾಗುವುದು.

ಮಿಥುನ ರಾಶಿ: ಡಿಸೆಂಬರ್ ತಿಂಗಳ ಮೂರನೇ ವಾರದಲ್ಲಿ ಸೂರ್ಯನ‌ ಬದಲಾವಣೆಯಿಂದ ನಿಮಲ್ಲಿಯೂ ಬದಲಾವಣೆ ಕಾಣಿಸಬಹುದು. ವಿಶೇಷವಾಗಿ ದಾಂಪತ್ಯದಲ್ಲಿ ಇದರ ವ್ಯತ್ಯಾಸ ಗೋಚರಿಸುವುದು. ಕೂಡಿಟ್ಟ ಹಣದಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಅನಾರೋಗ್ಯವು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡಬಹುದು. ಕೂಡಿಟ್ಟಿದ್ದನ್ನು ಕೆಳೆದುಕೊಳ್ಳುವ ಸಂದರ್ಭ ಬರಬಹುದು. ವಿದೇಶದ ವ್ಯವಹಾರದಲ್ಲಿ ಮಾಡಿದ ಪ್ರಯತ್ನಕ್ಕೆ ನಿಮಗೆ ಸಿಗಲಿದೆ. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕ ಮಾರ್ಗದಲ್ಲಿ ಹೋಗುವಂತೆ ನೋಡಿಕೊಳ್ಳಿ. ಬಲವಂತದಿಂದ ಯಾವ ಕಾರ್ಯವನ್ನೂ ಮಾಡಲು ಹೋಗದೇ ಇರುವುದು ಉತ್ತಮ. ಈ ವಾರ ಅಷ್ಟಮದ ಶುಕ್ರನೂ ನಿಮಗೆ ಪ್ರತಿಕೂಲನಾಗಿರುವನು. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರಬಹುದು.

ಕರ್ಕಾಟಕ ರಾಶಿ: ಇದು ರಾಶಿ ಚಕ್ರದ ನಾಲ್ಕನೇ ರಾಶಿ. ವಿಶೇಷವಾಗಿ ಗುರುಬಲವು ಈ ರಾಶಿಗೆ ಇದೆ. ಹಾಗಾಗಿ ಅತಿಯಾದ ಚಿಂತೆ ಮಾಡುವ ಅವಶ್ಯಕತೆ ಇರದು. ಯಾರನ್ನೂ ಅಪಮಾನ ಮಾಡಲು ಹೋಗಬೇಡಿ. ಅದು ನಿಮಗೆ ಮುಳುವಾದೀತು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಇನ್ನು ಶುಕ್ರನೂ ಮಿತ್ರನ ರಾಶಿಯಲ್ಲಿ ಸಪ್ತಮದಲ್ಲಿ ಇರುವ ಕಾರಣ ವಿವಾಹಾಕಾಂಕ್ಷಿಗಳಿಗೆ ಆಸೆ ಪೂರ್ಣವಾಗಿವುದು. ಸುದ್ದಿಯನ್ನು ನೀವು ಕೇಳಬೇಕಾಗಬಹುದು. ಕುಟುಂಬದವರ ಜೊತೆ ಪ್ರೀತಿಯಿಂದ ಮಾತನಾಡಿ. ಉದ್ಯೋಗದ ಸ್ಥಳದಲ್ಲಿ ಸ್ವಲ್ಪ ಹಿನ್ನಡೆಯ ಸಾಧ್ಯತೆ ಇದೆ. ಉತ್ತಮ ಮಾತುಗಳು ನಿಮ್ಮ ನೆಮ್ಮದಿಗೆ ಸಹಾಯಕವಾಗಲಿದೆ.

ಸಿಂಹ ರಾಶಿ: ಇದು ಡಿಸೆಂಬರ್ ತಿಂಗಳ ಮೂರನೇ ವಾರವಾಗಿದ್ದು ರಾಶಿಯ ಅಧಿಪತಿ ಪಂಚಮದಲ್ಲಿ ಇರುವನು. ವಿದ್ಯಾಭ್ಯಾಸದಲ್ಲಿ ಪ್ರಖರತೆ ವೇಗ ಹೆಚ್ಚಾಗುವುದು. ಅನೇಕ ವಿಚಾರಗಳನ್ನು ಕಲಿಯು ಹಂಬಲದಲ್ಲಿ ನೀವಿರುವಿರಿ. ಆಯಾಸದ ದಿನವಾಗಲಿದೆ ಇಂದು. ಮನಸ್ಸು ಹಾಗು ದೇಹವು ವಿಶ್ರಾಂತಿಯನ್ನು ಬಯಸಲಿದೆ. ಮನೆಯಲ್ಲಿ ನಡೆಯುವ ಕಲಹದಿಂದ ನೀವು ಬೇಸರಗೊಳ್ಳಬಹುದು. ಬುಧನು ಚತುರ್ಥದಲ್ಲಿದ್ದು ನಿಮಗೆ ಕೆಲವು ಲಾಭವನ್ನು ಮಾಡಿಸುವನು. ನಿಮ್ಮ ಮಾತನ್ನೇ ಎಲ್ಲರೂ ಪಾಲಿಸಬೇಕು ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳುವುದು ಉತ್ತಮ. ಅನಿವಾರ್ಯದ ಪ್ರಯಾಣಗಳು ಈ ವಾರ ನಿಮ್ಮನ್ನು ಹೈರಾಣ ಮಾಡುವುದು. ಆರ್ಥಿಕವಾದ ಹೂಡಿಕೆಯತ್ತ ನಿಮ್ಮ ಗಮನ ಹರಿಸುವಿರಿ.

ಕನ್ಯಾ ರಾಶಿ: ಡಿಸೆಂಬರ್ ತಿಂಗಳ ಮೂರನೇ ವಾರದಲ್ಲಿ ನಿಮಗೆ ಶುಭ. ಈ ನಿಮ್ಮ ಪ್ರಯತ್ನವು ಎಷ್ಟೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ ಎನ್ನುವ ಸತ್ಯವು ಅರಿವಿಗೆ ಬರಲಿದೆ. ದುಃಖಿಸುವ ಅಗತ್ಯವಿಲ್ಲ. ತಾಯಿಯಿಂದ ಸೌಖ್ಯವಿದೆ. ಬಂಧುಗಳ ವಿಚಾರದಲ್ಲಿ ಇದ್ದ ಮನಸ್ತಾಪ ದೂರಾಗುವುದು. ಅವನ ಸೃಷ್ಟಿಯಲ್ಲಿ ಎಲ್ಲವೂ ಸಹಜವೇ. ತಂದೆಯಿಂದ ಧನಸಹಾಯವಾಗಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಶುಭಸುದ್ದಿಯು ಸಿಗಲಿದೆ‌. ಸಂಗಾತಿಯ ಅನ್ವೇಷಣೆಯಲ್ಲಿ ನೀವು ತೊಡಗಿಕೊಳ್ಳುವಿರಿ. ಯಾರ ಮೇಲಾದರೂ ಪ್ರೀತಿಯು ಉಂಟಾಗಬಹುದು. ಈ ಕುರಿತು ಪೂರ್ವಾಪರ ಜ್ಞಾನವು ನಿಮ್ಮಲ್ಲಿ ಇರಲಿ.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಅಶುಭ. ವ್ಯಸನಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ಸೂರ್ಯನು ತೃತೀಯದಲ್ಲಿ ಇದ್ದು ಸಹೋದರರ ನಡುವೆ ಮನಸ್ತಾಪಕ್ಕೆ ಎಡೆ ಮಾಡಿಕೊಡುವನು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಯಾರನ್ನೋ ನಂಬಿ ಮೋಸಹೋಗುವ ಸಾಧ್ಯತೆ ಇರುತ್ತದೆ. ಈ ವಾರ ಗಳಿಕೆಯ ಭರದಲ್ಲಿ ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಲು ಶ್ರಮವನ್ನು ವಹಿಸಬೇಕು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು.

ವೃಶ್ಚಿಕ ರಾಶಿ: ಡಿಸೆಂಬರ್ ಮಾಸದ ಈ ವಾರದಲ್ಲಿ ನಿಮಗೆ ಶುಭ. ಬಂಧುಗಳ ಆಗಮನದಿಂದ ನಿಮ್ಮ ಯೋಜಿತವಾದ ಕಾರ್ಯಗಳು ಸಲೀಸಾಗಿ ಸಾಗದು. ನಿಮ್ಮ ಲಾಭಕ್ಕೆ ಇದರಿಂದಾಗಿ ಸ್ವಲ್ಪ ತೊಂದರೆಯಾಗಬಹುದು. ದ್ವಂದ್ವಗಳು ಇತ್ಯರ್ಥವಾಗುವುದು ಕಷ್ಟ. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ಈ ವಾರದಲ್ಲಿ ಬರುವ ವೈವಾಹಿಕ ಸಂಬಂಧವನ್ನು ಸುಮ್ಮನೇ ಬಿಟ್ಟುಕೊಡುವುದು ಬೇಡ. ಸ್ನೇಹದಲ್ಲಿ ಉತ್ತಮ ಬಾಂಧವ್ಯ ಕಾಣಿಸಲಿದೆ. ಹಣದ ಹರಿವು ಇಂದು ಇರಲಿದೆ. ನಾಲ್ಕು ಜನರ ಮಾತುಗಳನ್ನು ಕೇಳಿ ಸರಿ ಯಾವುದು ಎನ್ನುವ ಗೊಂದಲಕ್ಕೆ ನೀವು ಬರಬಹುದು.

ಧನು ರಾಶಿ: ಡಿಸೆಂಬರ್ ತಿಂಗಳ ಈ ವಾರದಲ್ಲಿ ನಿಮಗೆ ಅಶುಭ. ಏಕಾಗ್ರತೆಯ ಕೊರತೆ ನಿಮ್ಮನ್ನು ಬಹಳವಾಗಿ ಕಾಡಬಹುದು. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ರಾಹುವು ಚತುರ್ಥಲ್ಲಿ ಇದ್ದು ನಿಮ್ಮ ತಾಯಿಯ ಆರೋಗ್ಯವು ಕೆಡುವುದು. ಕುಟುಂಬದಲ್ಲಿ ಅತೃಪ್ತಿಕರ ವಾತಾವರಣ ಕಾಣಿಸುವುದು. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ‌ ಮುಂದಿನ ಯೋಜನೆಗೆ ಸಹಕಾರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಸಭೆಗಳಿಗೆ ಭಾಗವಹಿಸಲು ಆಹ್ವಾನವು ಬರಬಹುದು. ಸಂಗಾತಿಯಿಂದ ಹಣವನ್ನು ಪಡೆಯಲಿದ್ದೀರಿ.

ಮಕರ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಮಿಶ್ರಫಲ. ಸೂರ್ಯನು ಮಿತ್ರನ ರಾಶಿಯನ್ನು ಪ್ರವೇಶ ಮಾಡಿದರೂ ಸ್ಥಾನವು ದ್ವಾದಶವಾದ ಕಾರಣ ಯಾವ ನಿರೀಕ್ಷೆಗಳೂ ಫಲಿಸಲಾರವು. ನಿಮಗೆ ಓದಿನ ಬಗ್ಗೆ ಆಸಕ್ತಿ ಕೆರಳಲಿದೆ. ನಿಮಗೇ ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹಿಂಜರಿಕೆ ಉಂಟಾಗಬಹುದು.‌ ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಏಕಾದಶದಲ್ಲಿ ಬುಧನ ಕಾರಣ ಬಂಧುಗಳ ಸಮಾಗಮ, ನೂತನ ಸಂಬಂಧ ಏರ್ಪಡಬಹುದು. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಒಳ್ಳೆಯವರ ಸಂಗ ಸಿಗುವುದು ಕಷ್ಟ.

ಕುಂಭ ರಾಶಿ: ರಾಶಿ ಚಕ್ರದ ಹನ್ಮೊಂದನೇ ರಾಶಿಯವರಿಗೆ ಈ ವಾರದಲ್ಲಿ ಶುಭಾಶುಭವೆಂದೇ. ರವಿಯು ಏಕಾದಶದಲ್ಲಿ ಇದ್ದರೂ ಪೂರ್ಣಪ್ರಮಾಣದ ಶುಭವನ್ನು ಉಂಟುಮಾಡಲಾರ. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳನ್ನೂ ನಿರಾತಂಕವಾಗಿ ಎದುರಿಸುವಿರಿ. ಹೊಸತನವನ್ನು ರೂಢಿಸಿಕೊಳ್ಳುವ ನಿಮ್ಮ ಆಸಕ್ತಿಯನ್ನು ಕಂಡ ಜನರಿಂದ ಮೆಚ್ಚುಗೆಯನ್ನು ಗಳಿಸುವಿರಿ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಮಿತ್ರರಿಗೆ ಸಾಲವನ್ನು ಕೊಡುವ ಸಂದರ್ಭ ಬರುವುದು. ಮಾತಿನಿಂದ ಗೌರವಗಳು ಹಾಳುಮಾಡಿಕೊಳ್ಳುವಿರಿ.

ಮೀನ ರಾಶಿ: ಇದು ಡಿಸೆಂಬರ್ ತಿಂಗಳ ಮೂರನೇ ವಾರ. ಈ ವಾರದಲ್ಲಿ ಸೂರ್ಯನು ನಿಮ್ಮ ರಾಶಿಯಿಂದ ಹತ್ತನೇ ರಾಶಿಯಲ್ಲಿ ಇರುವನು. ಸರ್ಕಾರದ ಕಾರ್ಯದಲ್ಲಿ ಯಶಸ್ಸನ್ನು ಕಾಣಬಹುದು. ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಕುಟುಂಬದ ಕುರಿತು ನಿಮಗೆ ಕಾಳಜಿ ಇರಲಿದೆ. ನಿಮ್ಮ ವಿವಾಹ ಸಂಬಂಧವನ್ನು ಬೆಳೆಸಲು ಉತ್ತಮವಾಗಿದೆ. ಮಕ್ಕಳ ವಿಚಾರಕ್ಕೆ ಹಣವನ್ನು ಖರ್ಚು ಮಾಡಬೇಕಾಗುವುದು. ನಿದ್ರಾಹೀನತೆಯಿಂದ ಆರೋಗ್ಯ ಹದಗೆಡುವುದು. ಸ್ನೇಹಿತರೊಂದಿಗೆ ಪ್ರಯಾಣವನ್ನು ಮಾಡುವಿರಿ. ಸ್ತ್ರೀರಿಂದ ಅಪಮಾನವಾಗಬಹುದು. ಉದ್ಯಮದಲ್ಲಿ ಆದಾಯವಿಲ್ಲ ಎಂದುಕೊಂಡವರಿಗೆ ಸಿಹಿ ಸುದ್ದಿ ಸಿಗುವುದು. ಬರಬೇಕಾದ ಸಂಪತ್ತು ಬರಲಿದೆ.

ಲೋಹಿತ ಹೆಬ್ಬಾರ್ – 8762924271 (what’s app only)