Daily Horoscope: ಇಂದು ಕರಕುಶಲ ವ್ಯಾಪಾರಿಗಳಿಗೆ ಅಧಿಕ ಲಾಭ
15 ಡಿಸೆಂಬರ್ 2024: ಭಾನುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು. ಮನಸ್ಸಿನ ನೋವಿಗೆ ಒಳ್ಳೆಯ ಮದ್ದನ್ನು ಮಾಡಬೇಕಿದೆ. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ಸಾಹವನ್ನು ವರ್ಧಿಸುವುದು. ಹಾಗಾದರೆ ಡಿಸೆಂಬರ್ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಸಂಜೆ 04:41 ರಿಂದ 08:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:28 ರಿಂದ 01:52 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:17 ರಿಂದ 04:41 ರವರೆಗೆ.
ಮೇಷ ರಾಶಿ: ಅಲ್ಪವನ್ನು ಕಳೆದುಕೊಂಡಾದರೂ ಒಳ್ಳೆಯದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗದ ಸ್ಥಳದಲ್ಲಿ ಇಂದು ನಿಮಗೆ ಒಳ್ಳೆಯವರಾಗುವುದೂ ಕಷ್ಟವೆನಿಸಬಹುದು. ಈ ದಿನ ತಂತ್ರಜ್ಞರಿಗೆ ಒತ್ತಡದ ದಿನವಾಗಲಿದೆ. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ಅಪರೂಪದ ವಸ್ತು ಲಾಭವಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ಊಹಿಸದ ಬದಲಾವಣೆಯು ನಿಮ್ಮಿಂದಾಗಬಹುದು. ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವಿರಿ. ಒತ್ತಡದಿಂದ ಹೊರ ಬರಲು ವೃತ್ತಿಯಲ್ಲಿ ವಿರಾಮವನ್ನು ಪಡೆಯುವಿರಿ. ಉಪಕಾರದ ವಿಸ್ಮರಣೆಯಾಗಿ ಪಶ್ಚಾತ್ತಾಪ ಪಡುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು.
ವೃಷಭ ರಾಶಿ: ಇರುವುದನ್ನು ಇರುವಂತೆ ಹೇಳಿ. ಅದಕ್ಕೆ ಕಾಲು ಬಾಲ ಸೇರಿಸಿ ಮತ್ತೇನನ್ನೋ ಮಾಡುವುದು ಬೇಡ. ನಿಮ್ಮ ಸಾಲ ಕೊಟ್ಟವರು ಪೀಡಿಸುವ ಸಾಧ್ಯತೆ ಇದೆ. ಹೊಸ ಜವಾಬ್ದಾರಿಯ ಬಗ್ಗೆ ಕಾತರರಾಗಿರುವಿರಿ. ಯಾರ ಮೇಲೇ ಇಡುವ ವಿಶ್ವಾಸವೂ ನಿಮಗೆ ಸಮಾಧಾನವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಕಾಣಿಸುವುದು. ಬರಬೇಕಾದ ಪೂರ್ಣವಾಗಿ ಬಾರದು. ಇಂದು ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಲು ಹೆಚ್ಚು ಗಮನಹರಿಸುವಿರಿ.
ಮಿಥುನ ರಾಶಿ: ಇಷ್ಟವಿಲ್ಲದಿದ್ದರೂ ಕೆಲವು ಕಾರ್ಯಗಳನ್ನು ಮಾಡಲೇಬೇಕಾಗುವುದು. ದಾಂಪತ್ಯದ ಕಲಹಕ್ಕೆ ಬೇಕೆಂದು ಮಾಡದಿದ್ದರೂ ನಿಮ್ಮ ಮೇಲೆ ಕೆಲವು ಆರೋಪಗಳು ಬರುವುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ. ಇನ್ನೊಬ್ಬರನ್ನು ನೋಡಿ ಕಲಿಯುವುದು ಬಹಳಷ್ಟು ನಿಮಗಿರುವುದು. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುವಿರಿ. ಎಲ್ಲರನ್ನೂ ಮೆಚ್ಚಿಸಿ ನಿಮಗೆ ಕಷ್ಟದ ಕೆಲಸ. ಗೌರವದ ಅಪೇಕ್ಷೆಯು ಇಲ್ಲದಿದ್ದರೂ ನಿಮಗೆ ಸುಕೃತದಿಂದ ಸಿಗುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಗಬೇಕಾದ ಕಾರ್ಯಗಳ ಬಗ್ಗೆ ನಿಮಗೆ ಗಮನವು ಕಡಿಮೆ ಇರುವುದು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು.
ಕರ್ಕಾಟಕ ರಾಶಿ: ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಇಂದು ನಿಮ್ಮ ಉದ್ಯೋಗವನ್ನು ನಿರ್ವಹಣೆ ಮಾಡುವುದು ಕಷ್ಟವಾದೀತು. ಯಾರಾದರೂ ನಿಮ್ಮನ್ನೇ ಗುರಿ ಮಾಡಿಕೊಂಡು ಇರಬಹುದು. ಸಹೋದ್ಯೋಗಿಗಳ ಕಾರಣದಿಂದ ನಿಮ್ಮ ಮೇಲೆ ಒತ್ತಡ ನಿರ್ಮಾಣವಾಗಲಿದ್ದು ಇದರಿಂದ ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ನಿಮ್ಮ ನಾಯಕತ್ವವನ್ನು ಇತರರು ಒಪ್ಪಿಕೊಳ್ಳುವುದು ಕಷ್ಟ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಆರ್ಥಿಕ ತೊಂದರೆಯನ್ನು ನೀವು ಸಂಗಾತಿಯ ಬಳಿ ಹೇಳಿಕೊಳ್ಳುವುದು ಬೇಡ.
ಸಿಂಹ ರಾಶಿ: ಅನಿರೀಕ್ಷಿತವಾಗಿ ಬರುವ ಹಣನ್ನು ಒಪ್ಪಿಕೊಳ್ಳಲಾರಿರಿ. ನಿರಂತರ ಪ್ರಯತ್ನಕ್ಕೆ ಫಲವು ಸಿಗುವುದು. ಇಂದಿನ ತಪ್ಪು ಕಾರ್ಯಗಳಿಗೆ ಆತ್ಮ ಸಾಕ್ಷಿ ಅಡ್ಡ ಬರಬಹುದು. ಸಾಹಿತ್ಯಾಸಕ್ತರಿಗೆ ಕಲಾವಿದರಿಗೆ ಸಮ್ಮಾನಾದಿಗಳು ಸಿಗುವುದು. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ. ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ನಿಮ್ಮ ಕೈ ನಿಲುಕುವಷ್ಟು ಪ್ರಯತ್ನವನ್ನು ಮಾಡಿ. ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಉದ್ಯೋಗವು ಸಿಗುವುದು. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮಗೆ ಚಿಂತೆಯಾಗುವುದು. ಕೃಷಿಯಲ್ಲಿ ಆಸಕ್ತಿ ಇರುವವರು ಏನಾದರೂ ಹೊಸತನ್ನು ಮಾಡುವಿರಿ. ಬಹಳ ಕೆಲಸವಿದ್ದರೂ ಒತ್ತಡದಲ್ಲಿ ತೋರಿಸಿಕೊಳ್ಳಲಾರಿರಿ.
ಕನ್ಯಾ ರಾಶಿ: ನಿಯಂತ್ರಣವನ್ನು ತಪ್ಪದೇ ಹೆಜ್ಜೆ ಇಡುವುದು ಕಷ್ಟ. ಹಣಕಾಸಿನ ವ್ಯವಹಾರದಿಂದ ನಿಮಗೆ ಶುಭವಾಗಲಿದೆ. ಹೊಸ ಯೋಜನೆಗಳು ನಿಮ್ಮನ್ನು ಹಿಡುಕಿ ಬರಬಹುದು. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು. ಮನಸ್ಸಿನ ನೋವಿಗೆ ಒಳ್ಳೆಯ ಮದ್ದನ್ನು ಮಾಡಬೇಕಿದೆ. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ಸಾಹವನ್ನು ವರ್ಧಿಸುವುದು. ಸಹೋದರಿಯ ವಿವಾಹದ ಜವಾಬ್ದಾರಿಯು ಇರಲಿದೆ. ಅಪರಿಚಿತ ಕರೆಗಳಿಂದ ನಿಮಗೆ ಹಿಂಸೆ ಆಗಬಹುದು. ಹಣದ ವಿಚಾರಕ್ಕೆ ದಾಂಪತ್ಯದಲ್ಲಿ ಮುಸುಕಿನ ಗುದ್ದಾಟವು ಇರಲಿದೆ. ಶತ್ರುಗಳ ಜೊತೆ ವ್ಯವಹಾರವನ್ನು ಮಾಡಲು ಕಲಿಯಬೇಕಾಗುವುದು. ಇಂದು ಮಾನಸಿಕವಾಗಿ ದುರ್ಬಲರಾದಂತೆ ಕಾಣುವಿರಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇದ್ದಷ್ಟು ಉತ್ತಮ. ಸರಿಯಾಗಿ ಮಿತ್ರರನ್ನು ಬಳಸಿಕೊಳ್ಳುವಿರಿ.