Weekly Horoscope in Kannada: ವಾರ ಭವಿಷ್ಯ: ಆ.11ರಿಂದ ಆ.17 ರವರೆಗೆ ನಿಮ್ಮವರ ಭವಿಷ್ಯ ಹೀಗಿದೆ ತಿಳಿಯಿರಿ
ಆಗಸ್ಟ್ 11ರಿಂದ ಆಗಸ್ಟ್ 17 ರವರೆಗಿನ ರಾಶಿ ಫಲ ವಿವರ ಇಲ್ಲಿದೆ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಇರುವುದು ಮಾತಿನಿಂದ ಧನ, ಆರೋಗ್ಯ ಲಾಭವನ್ನೂ ಪಡೆಯಬಹುದು. ಮನೆಯವರಿಂದ ಧನಲಾಭವೂ ಆಗಲಿದೆ. ಸಂಗಾತಿಯ ವಿಷಯದಲ್ಲಿ ಮನಸ್ತಾಪ ಕಾಣಿಸುವುದು. ಸ್ನೇಹಿತ ಬಳಗ ದೊಡ್ಡದಾಗಲಿದೆ. ಆಗಸ್ಟ್ ತಿಂಗಳಲ್ಲಿ ಯಾವ ರಾಶಿಗೆ ಮಿಶ್ರ ಫಲವಿರಲಿದೆ ತಿಳಿಯಿರಿ.
ಆಗಸ್ಟ್ ತಿಂಗಳ ಎರಡನೇ ವಾರ 11-08- 2024ರಿಂದ 17-08-2024ರವರೆಗೆ ಇರಲಿದೆ. ಸೂರ್ಯನು ಸಿಂಹರಾಶಿಯನ್ನು ಪ್ರವೇಶ ಮಾಡುವನು. ಅದು ಸ್ವರಾಶಿಯೂ ಆಗಿದ್ದು, ಅನೇಕ ಶುಭಫಲಗಳನ್ನು ಕೆಲವು ರಾಶಿಯವರಿಗೆ ನೀಡುವನು. ವಿಶೇಷವಾಗಿ ಆರೋಗ್ಯವನ್ನು ನೀಡೆಂದು ಸೂರ್ಯನಲ್ಲಿ ಬೇಡುವುದು ಸೂಕ್ತ. ಆರೋಗ್ಯವೇ ಎಲ್ಲ ಸಂಪತ್ತಿನ್ನು ಪಡೆಯಲು ಮೂಲ ಕಾರಣವಾಗಿದೆ. ಜಗತ್ತಿನ ಆತ್ಮನಾದ ಸೂರ್ಯನ ಅನುಗ್ರಹ ಎಲ್ಲಿಗೂ ಲಭಿಸಲಿ.
ಮೇಷ ರಾಶಿ: ಇದು ಆಗಷ್ಟ್ ತಿಂಗಳ ಎರಡನೇ ವಾರವಾಗಿದ್ದು, ಸೂರ್ಯನು ಪಂಚಮ ರಾಶಿಯನ್ನು ಪ್ರವೇಶಿಸುವನು. ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಉತ್ತಮ ಕಾಲವಾಗಿದೆ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಇರುವುದು ಮಾತಿನಿಂದ ಧನ, ಆರೋಗ್ಯ ಲಾಭವನ್ನೂ ಪಡೆಯಬಹುದು. ಮನೆಯವರಿಂದ ಧನಲಾಭವೂ ಆಗಲಿದೆ. ಸಂಗಾತಿಯ ವಿಷಯದಲ್ಲಿ ಮನಸ್ತಾಪ ಕಾಣಿಸುವುದು. ಸ್ನೇಹಿತ ಬಳಗ ದೊಡ್ಡದಾಗಲಿದೆ. ಯಾರನ್ನಾದರೂ ಅಪಮಾನ ಮಾಡಿಸುವುದು ಬೇಡ. ಪುನಃ ನಿಮಗೇ ಬರುವುದು. ಕ್ಷಮಾಗುಣವೇ ನಿಮಗೆ ಭೂಷಣವಾಗಲಿದೆ. ಅದನ್ನು ಉಳಿಸಿಕೊಳ್ಳುವುದು ಮುಖ್ಯ.
ವೃಷಭ ರಾಶಿ: ಆಗಸ್ಟ್ ತಿಂಗಳ ಎರಡನೇ ವಾರ ನಿಮಗೆ ಮಿಶ್ರಫಲವಿದೆ. ಸ್ವರಾಶಿಯಲ್ಲಿ ಗುರು ಕುಜರು ಇದ್ದರೂ ನೆಮ್ಮದಿಯನ್ನು ಕಾಣುವುದು ಕಷ್ಟವಾಗುವುದು. ನಿರಂತರ ಪರಿಶ್ರಮದಿಂದ ಮತ್ತೆ ಮತ್ತೆ ಆಯಾಸಗೊಳ್ಳಬೇಕಾಗುವುದು. ನಿಮ್ಮ ನಡೆಯಲ್ಲಿ ಧೈರ್ಯವಿರುವುದು. ಯಾವುದೇ ಅಮೂಲ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಕಷ್ಟವಾಗುವುದು. ಬೇರೆಯವರಿಗೆ ಗೌರವವನ್ನು ಕೊಟ್ಟು ನೀವು ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ವಿದೇಶದಿಂದ ಮರಳಿ ಬರಬಹುದು. ಸಂಗಾತಿಯಿಂದ ಕ್ಲೇಶವನ್ನು ಅನುಭವಿಸಬೇಕಾದೀತು. ಮಹಾದೇವಿಯನ್ನು ನಾನಾಪ್ರಕಾರವಾಗಿ ಆರಾಧಿಸಿ.
ಮಿಥುನ ರಾಶಿ: ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭವು ಹೆಚ್ಚು ಕಾಣಿಸುವುದು. ಏನೋ ಮಾಡಲು ಹೋಗಿ ಕೊನೆಗೆ ನಿಮ್ಮ ಬುಡಕ್ಕೆ ಬರುವುದು. ಯಾವುದನ್ನೂ ಸಹಿಸುವ ಮನಃಸ್ಥಿತಿ ನಿಮಗೆ ಇಲ್ಲ. ತಾಳ್ಮೆ ಕೊರತೆ ಬಹುವಾಗಿ ಕಾಣಿಸುವುದು. ಕುಟುಂಬದಲ್ಲಿ ನಿಮ್ಮನ್ನು ಆದರಿಸಲಾರರು. ನಿಮ್ಮ ಬಗ್ಗೆ ನಿಮಗೆ ಪೂರ್ಣವಾದ ಭರವಸೆ ಇರದೇ ಎಲ್ಲದಕ್ಕೂ ಹಿಂದೇಟು ಹಾಕುವಿರಿ. ಉದ್ಯೋಗದಲ್ಲಿ ನಿಮಗೆ ಖುಷಿ ಸಿಗದು. ಉದ್ವೇಗದಲ್ಲಿ ಸಂಬಂಧವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೇ ಕೀಳರಮೆ ಕಾಣಿಸುವುದು. ವಿಷ್ಣುವಿನ ಆರಾಧನೆ ನಿಮಗೆ ಉತ್ಸಾಹವನ್ನು ತಂದುಕೊಡುವುದು.
ಕರ್ಕಾಟಕ ರಾಶಿ: ಈ ತಿಂಗಳ ಎರಡನೇ ವಾರ ನಿಮಗೆ ಶುಭ ಫಲ. ದಶಮಾಧಿಪತಿಯು ಏಕಾದಶದಲ್ಲಿ ಇದ್ದು ಉದ್ಯೋಗದಲ್ಲಿ ನೆಮ್ಮದಿಯನ್ನು ಆದಾಯವನ್ನೂ ಹೆಚ್ಚಿಸುವನು. ಶತ್ರಗಳಿಂದ ನೀವು ದೂರವಿರಬೇಕಾಗುವುದು. ಚಿಂತಿತ ಕಾರ್ಯವನ್ನು ಸಫಲ ಮಾಡಿಕೊಳ್ಳುವಿರಿ. ತಂದೆಯಿಂದ ಆರ್ಥಿಕ ಸಹಕಾರ ಸಿಗಲಿದೆ. ನಿಮ್ಮ ಆತ್ಮಬಲವು ತಗ್ಗುವುದು. ಸಂಗಾತಿಯ ಮಾತನ್ನು ನೀವು ಕೇಳಲಾರಿರಿ. ಯಾರಿಂದಲೂ ಗೌರವ ಸಿಗದೇ ಇರುವುದು ನಿಮ್ಮನ್ನು ಕುಗ್ಗಿಸಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗುವುದು. ಬೇಡದಿರುವ ವಸ್ತುಗಳನ್ನು ದೂರಮಾಡುವಿರಿ. ಅಂಬಿಕೆಯ ಉಪಾಸನೆ ಮಾಡಿ.
ಸಿಂಹ ರಾಶಿ: ಈ ತಿಂಗಳ ಎರಡನೇ ವಾರ ಮಿಶ್ರ ಫಲದ ಪ್ರಾಪ್ತಿಯಾಗಲಿದೆ. ಸೂರ್ಯನು ಸ್ವಗೃಹಕ್ಕೆ ಆಗಮಿಸುವ ಕಾರಣ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಚಿಕಿತ್ಸೆಯ ಮೂಲಕ ಪರಿಹಾರ ಮಾಡಿಕೊಳ್ಳಬೇಕಾಗುವುದು. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡುವಿರಿ. ವೃತ್ತಿಯಲ್ಲಿ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಅಮೂಲ್ಯ ವಸ್ತುಗಳನ್ನು ಹಾಳು ಮಾಡಿಕೊಳ್ಳುವಿರಿ. ಸುಂದರ ಸ್ಥಳಗಳಿಗೆ ಪ್ರವಾಸ ಹೋಗುವ ನಿರ್ಧಾರದ ಮಾಡುವಿರಿ. ನಿಮ್ಮ ಮಾತು ಒರಟು ಹಾಗೂ ಅಸತ್ಯಂದ ಕೂಡಿರಲಿದೆ. ಆದ ಕಾರಣ ಯಾರೂ ನಿಮ್ಮನ್ನು ಆದರಿಸಲು ಇಷ್ಟಪಡುವುದಿಲ್ಲ. ಸೂರ್ಯ ನಮಸ್ಕಾರವನ್ನು ಶ್ರದ್ಧಾಭಕ್ತಿಯಿಂದ ಮಾಡಿ.
ಕನ್ಯಾ ರಾಶಿ: ನಿಮಗೆ ಈ ವಾರ ಶುಭಾಶುಭ. ಸೂರ್ಯನು ದ್ವಾದಶ ಸ್ಥಾನ ಹಾಗೂ ಸ್ವಕ್ಷೇತ್ರಕ್ಕೆ ಬರಲಿದ್ದಾನೆ. ರಾಶಿಯ ಅಧಿಪತಿಯೂ ದ್ವಾದಶದಲ್ಲಿ ಇರುವನು. ಭಯ, ಯಾವುದನ್ನೂ ಮಾಡುವುದಿದ್ದರೂ ಆತ್ಮವೇ ಹಿಂಜರಿಯುತ್ತದೆ. ಆದರೆ ಏನನ್ನೂ ಮಾಡಬಹುದು ಎಂಬ ವಿಶ್ವಾಸವೂ ಇರಲಿದೆ. ವೈವಾಹಿಕ ಜೀವನವನ್ನು ನಡೆಸಲು ಕಸರತ್ತು ಮಾಡಬೇಕಾಗುವುದು. ಸಂಗಾತಿಯನ್ನು ಸಮಾಧಾನದಿಂದ ಕರೆದೊಯ್ಯುವುದೇ ನಿಮಗೆ ಸವಾಲು. ಬಂಧುಗಳನ್ನು ಉಪಾಯದಿಂದ ಮನವೊಲಿಸುವಿರಿ. ಉದ್ಯಮದಲ್ಲಿ ಹಿನ್ನಡೆ, ಆರ್ಥಿಕ ನಷ್ಟವೂ ಆಗುವುದು. ಭೂಮಿಯ ವ್ಯವಹಾರ ಅಥವಾ ಖರೀದಿಗೆ ಒಳ್ಳೆಯದಲ್ಲ ಅವಕಾಶವಿದೆ. ವಾಹನ ಬಗ್ಗೆ ಸುಮ್ನಿರುವುದು ಸೂಕ್ತ. ಗುರುಸೇವಯಿಂದ ಆಪತ್ತು ದೂರಾಗುವುದು.
ತುಲಾ ರಾಶಿ: ಈ ರಾಶಿಯವರಿಗೆ ಆಗಷ್ಟ್ ತಿಂಗಳ ಎರಡನೇ ವಾರದಲ್ಲಿ ಅಶುಭ. ಸೂರ್ಯನು ಏಕಾದಶ ಸ್ಥಾನಕ್ಕೆ ಬಂದು ಸ್ಥಾನಮಾನ, ಗೌರವ, ಉದ್ಯೋಗದಲ್ಲಿ ಪ್ರಗತಿ, ಸರ್ಕಾರದ ಕಾರ್ಯದಲ್ಲಿ ಸಲೀಸಾಗಿ ಎಲ್ಲವೂ ಆದರೂ ನೆಮ್ಮದಿ ಪಡೆಯುವುದು ಕಷ್ಟವಾಗಿದೆ. ಎಲ್ಲಿಗೆ ಹೋದರೂ ಮಾನಸಿಕ ಕಿರಿಕಿರಿ ನಿಮ್ಮನ್ನು ಬಾಧಿಸುವುದು. ಎಲ್ಲರ ಮಾತುಗಳೂ ನಿಮಗೇ ಹೇಳಿದಂತೆ ಅನ್ನಿಸುವುದು. ಆದರೆ ಯಾರನ್ನೂ ದ್ವೇಷಿಸುವಂತಿಲ್ಲ. ಜಗಪಡಿಕೆಯಲ್ಲಿ ಇರುವಿರಿ. ಸತ್ಕಾರ್ಯಕ್ಕೆ ಸಂಪತ್ತು ವ್ಯಯವಾಗದು. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಲಕ್ಷ್ಮೀನಾರಾಯಣರ ಉಪಾಸನೆ ಅಗತ್ಯ.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಶುಭ. ವೃತ್ತಿಯಲ್ಲಿ ತೊಡಗಿಕೊಳ್ಳಲು ಕಷ್ಟವಾದೀತು. ಆರ್ಥಿಕ ಸ್ಥಿತಿಯ ಬಗ್ಗೆ ಚೆಂತೆ ಕಾಡುವುದು. ಭಕ್ತಿಯು ಕಡಿಮೆ ಆಗಿದ್ದು, ಬೇರೆ ಚಟುವಟಿಕೆ ಹೆಚ್ಚಾಗುವುದು. ಸಂಗಾತಿಯನ್ನು ಅನುಸರಿಸುವಿರಿ. ಕಲಹಗಳು ದಾಂಪತ್ಯದಲ್ಲಿ ಕಡಿಮೆ ಆಗಲಿದೆ. ಸರ್ಕಾರದ ಉದ್ಯೋಗದಲ್ಲಿ ಕಾರ್ಯದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ನಿಮ್ಮ ಯೋಜನೆಗಳಿಗೆ ಸರಿಯಾದ ರೂಪ ಸಿಗಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ನಿರ್ಲಕ್ಷ್ಯ ಬೇಡ. ವಿದೇಶದಿಂದ ಒಳ್ಳೆಯ ಸುದ್ದಿ ಸಿಗಲಿದೆ. ವಾಹನದಿಂದ ಶರೀರಕ್ಕೆ ತೊಂದರೆ ಆಗುವುದು. ಮಹಾಗೌರಿಯನ್ನು ಆರಾಧಿಸಿ.
ಧನು ರಾಶಿ: ಈ ರಾಶಿಯವರಿಗೆ ಆಗಷ್ಟ್ ತಿಂಗಳ ಎರಡನೇ ವಾರದಲ್ಲಿ ಅಶುಭ. ನಿಮ್ಮ ನೆಮ್ಮದಿ ಸುಖಕ್ಕೆ ಬಂಧುಗಳಿಂದ ತೊಂದರೆ ಬರಲಿದೆ. ಒರಟು ಮಾತುಗಳನ್ನು ಆಡಬೇಕಾಗುವುದು. ಸಜ್ಜನರ ವೈರವನ್ನು ಬೆಳೆಸಿಕೊಳ್ಳುವಿರಿ. ವೈವಾಹಿಕ ಸಂಬಂಧವು ಬಂಧುಗಳಿಂದ ತಪ್ಪಿಹೋಗುವುದು. ವೃತ್ತಿಯಲ್ಲಿ ನಿಮಗೆ ಅಸಮಾಧಾನ, ಯಾರ ಮಾತನ್ನು ಕೇಳ ಬೇಕು ಎನ್ನುವ ಗೊಂದಲ. ಮನೆಯಲ್ಲಿಯೂ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುವುದು. ದೈವಾನುಗ್ರಹ ಕಡಿಮೆ ಇರವುದು. ಧಾರ್ಮಿಕ ಆಚರಣೆಗಳನ್ನು ಬುದ್ಧಿಪೂರ್ವಕವಾಗಿ ಮಾಡಬೇಕಾಗುವುದು. ಗುರುಚರಿತ್ರೆಯನ್ನು ಗುರುವಾರದಂದು ಪಠಿಸಿ.
ಮಕರ ರಾಶಿ: ಈ ತಿಂಗಳ ಎರಡನೇ ವಾರ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಉಚ್ಚಸ್ಥಾನದಲ್ಲಿ ಇದ್ದು ಆರ್ಥಿಕ ತೊಂದರೆಯನ್ನು ನಿಭಾಯಿಸುವನು. ಸರ್ಕಾರದಿಂದ ಬರುವ ಆದಾಯವು ನಿಮಗೆ ಸಿಗಲಿದೆ. ಶುಕ್ರನು ಅಸ್ತನಾದ ಕಾರಣ ಸಂಗಾತಿಯವ ಜೊತೆ ಹೊಂದಾಣಿಕೆ ಕಷ್ಟವೆನಿಸುವುದು. ಉದ್ಯೋಗದಲ್ಲಿ ನೀವು ಖುಷಿಯಿಂದ ಕೆಲಸ ಮಾಡಲಾಗದು. ಏನಾದರೂ ಕಿರಿಕಿರಿ ನಿಮ್ಮಲ್ಲಿ ಇರುವುದು. ಮಕ್ಕಳಿಂದ ಆರ್ಥಿಕ ನೆರವನ್ನು ಪಡೆಯುವುದೂ ಆಗುತ್ತದೆ. ನೀವು ಅಂದುಕೊಂಡಷ್ಟು ಆದರಾತಿಥ್ಯ ಸಿಗದು. ಶಿವನನ್ನು ಅಭಿಷೇಕದಿಂದ ಆರಾಧಿಸಿ.
ಕುಂಭ ರಾಶಿ: ಆಗಸ್ಟ್ ತಿಂಗಳ ಎರಡನೇ ವಾರ ನಿಮಗೆ ಅಧಿಕ ಶುಭವಿದ್ದರೂ ತಂದೆ ಮಕ್ಕಳ ಮೇಲೆ ವೈಷಮ್ಯ ಬರುವುದು. ಸ್ವಪ್ರತಿಷ್ಠೆಯಿಂದ ಸಂಬಂಧವು ಕೆಡುವುದು. ಸೂರ್ಯನು ಈ ವಾರ ಸ್ವರಾಶಿಗೆ ವರ್ಷಗಳ ಅನಂತರ ಪ್ರವೇಶಿಸಿದ್ದಾನೆ. ಗುರುಬಲವೂ ಪೂರ್ಣವಾಗಿ ನಿಮಗೆ ಇಲ್ಲ. ಆದ ಕಾರಣ ಯಾವುದೇ ನಕಾರಾತ್ಮಕ ಅಂಶಗಳನ್ನು ಬೆಳೆಯಲು ಬಿಡುವುದು ಬೇಡ. ದಾಂಪತ್ಯದಲ್ಲಿ ಕೂಡ ಮನಸ್ತಾಪ ಬರುವುದು. ತಾಳ್ಮೆಯಿಂದ ಒಂದೊಂದಾಗಿ ದಾಟಲು ಪ್ರಯತ್ನಿಸಿ. ಹನುಮಾನ್ ಚಾಲಿಸ್ ಪಠಣವು ನಿಮ್ಮಲ್ಲಿ ಧೈರ್ಯವನ್ನು ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
ಮೀನ ರಾಶಿ: ಈ ತಿಂಗಳ ಎರಡನೇ ವಾರ ನಿಮಗೆ ಮಿಶ್ರಫಲ. ಸೂರ್ಯನು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಶುಕ್ರ ಹಾಗು ಬುಧರೂ ಇದೇ ರಾಶಿಯಲ್ಲಿ ಇರುವುದರಿಂದ ಶುಕ್ರಾಸ್ತವಾದ ಕಾರಣ ಸಂಗಾತಿಯ ಮಾತಿಗೆ ಅನಾದರ ತೋರಿಸುವಿರಿ. ಬುದ್ಧಿವಂತಿಕೆಯಿಂದ ನಿಭಾಯಿಸುವ ಅವಶ್ಯಕತೆ ಇರುವುದು. ವಿವಾಹ ಕಾರ್ಯದಲ್ಲಿ ಹಿನ್ನಡೆಯಾಗಲಿದೆ. ಅನಗತ್ಯ ಆಲೋಚನೆಯನ್ನು ಪ್ರಯತ್ನ ಪೂರ್ವಕವಾಗಿ ಬಿಡಬೇಕಾದೀತು. ಭೂ ವಿವಾದವನ್ನು ಹೋರಾಟದ ಮೂಲಕ ಗೆಲ್ಲುವಿರಿ. ಉತ್ತಮ ಸ್ನೇಹಿತರು ನಿಮಗೆ ಸಿಗುವರು. ಆರೋಗ್ಯವು ವ್ಯತ್ಯಾಸವಾಗುತ್ತಲೇ ಇರುವುದು. ನಾಗ ದೇವರ ಉಪಾಸನೆಯನ್ನು ಮಾಡಿ.
ಲೋಹಿತ ಹೆಬ್ಬಾರ್ – 8762924271 (what’s app only)