Weekly Love Horoscope: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ

ಜನವರಿ 18-24ರ ಈ ವಾರ ಶುಕ್ರನ ಸ್ಥಾನದಿಂದ ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಪ್ರತಿಯೊಂದು ರಾಶಿಫಲವೂ ಪ್ರೀತಿ, ಸಂಬಂಧಗಳಲ್ಲಿ ಸವಾಲು, ಸಾಹಸ ಅಥವಾ ಸಂತೋಷವನ್ನು ತರಬಹುದು. ಭಾವನಾತ್ಮಕ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಮಾತುಕತೆ ಮತ್ತು ತಾಳ್ಮೆಯಿಂದ ಯಾವುದೇ ಅಸಮಾಧಾನಗಳನ್ನು ನಿವಾರಿಸಿ, ಈ ವಾರವನ್ನು ಪ್ರೀತಿಮಯವಾಗಿಸಿಕೊಳ್ಳಿ.

Weekly Love Horoscope: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ
ಸಾಂದರ್ಭಿಕ ಚಿತ್ರ
Edited By:

Updated on: Jan 15, 2026 | 10:31 AM

ಜನವರಿ 18ರಿಂದ ಜನವರಿ 24ರ ವರೆಗೆ ಮೂರನೇ ವಾರವಾಗಿದ್ದು ಶುಕ್ರನು ಶನಿಯ ರಾಶಿಯಲ್ಲಿ ಬುಧ, ರವಿ, ಕುಜ, ಬುಧ ಈ ನಾಲ್ಕು ಗ್ರಹರ ಜೊತೆ ಇರುವನು. ಪ್ರೇಮ ಕೆಲವರಿಗೆ ಸವಾಲು, ಸಾಹಸ, ಸಂತೋಷ, ಸಿಹಿ, ಸಂಕಟ ಎಲ್ಲವೂ ಆಗಲಿದೆ. ಯಾವ ಸನ್ನಿವೇಶವನ್ನೂ ಅತಿಯಾದ ಹಂತಕ್ಕೆ ಕೊಂಡೊಯ್ಯದೇ ಮನೋ ಬುದ್ಧಿಗಳನ್ನು ನಿಮ್ಮ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿ.

ಮೇಷ:

ಮೂರನೇ ವಾರದಲ್ಲಿ ಹೃದಯ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಪ್ರೇಮದಲ್ಲಿ ವೇಗ ಜಾಸ್ತಿ. ತಾಳ್ಮೆ ಕಳೆದುಕೊಂಡರೆ ಮಾತುಗಳು ನೋವು ನೀಡಬಹುದು. ಮೃದುತನವೇ ಪರಿಹಾರವಾಗುತ್ತದೆ ಈ ವಾರ.

ವೃಷಭ:

ಜನವರಿಯ ಈ ವಾರ ಪ್ರೇಮಕ್ಕೆ ಸ್ಥಿರತೆ ಬೇಕೆಂಬ ಆಸೆ ಹೆಚ್ಚುತ್ತದೆ. ಸಂಗಾತಿಯಿಂದ ಭರವಸೆ ನಿರೀಕ್ಷೆ. ಸಣ್ಣ ಅಸಮಾಧಾನಗಳು ಮಾತುಕತೆಯಿಂದ ನಿವಾರಣೆಯಾಗುತ್ತವೆ. ಭಾವನಾತ್ಮಕ ಬಂಧನ ಗಟ್ಟಿಯಾಗುತ್ತದೆ.

ಮಿಥುನ:

ವರ್ತನೆಯಿಂದ ಈ ವಾರ ಪ್ರೇಮದಲ್ಲಿ ಚಂಚಲತೆ. ಮಾತುಗಳು ಹತ್ತಿರ ತರುತ್ತವೆ. ಆದರೆ ನಿರ್ಧಾರ ಬದಲಾವಣೆ ಗೊಂದಲ ಸೃಷ್ಟಿಸಬಹುದು. ಸ್ಪಷ್ಟತೆ ಇದ್ದರೆ ಹೊಸ ಸಂಬಂಧ ಶುಭಾರಂಭವಾಗುತ್ತದೆ.

ಕರ್ಕಾಟಕ:

ಮನಸ್ಸು ಪ್ರೇಮದ ಆಳಕ್ಕೆ ಇಳಿಯಲು ಪ್ರಯತ್ನಿಸುವುದು. ಈ ವಾರ ಭದ್ರತೆ ಬೇಕೆಂಬ ಭಾವನೆ ಹೆಚ್ಚುತ್ತದೆ. ಅನುಮಾನ ಕಡಿಮೆ ಮಾಡಿದರೆ ಸಂಬಂಧದಲ್ಲಿ ನಂಬಿಕೆ ಮತ್ತು ನೆಮ್ಮದಿ ಲಭಿಸುತ್ತದೆ.

ಸಿಂಹ:

ನಿಮಗೆ ಈ ವಾರ ಪ್ರೇಮದಲ್ಲಿ ಗಮನ, ಗೌರವ ಸಿಗುತ್ತದೆ. ಆಕರ್ಷಣೆ ನಿಮ್ಮತ್ತ. ಆದರೆ ಅತಿಯಾದ ಸ್ವಾಭಿಮಾನ ಸಂಘರ್ಷ ತರಬಹುದು. ಪ್ರೀತಿಯನ್ನು ಆಜ್ಞೆಯಾಗಿ ಅಲ್ಲ, ಭಾವನೆಯಾಗಿ ಬಳಸಿ.

ಕನ್ಯಾ:

ಈ ವಾರ ನಿಮ್ಮ ಹೃದಯಕ್ಕಿಂತ ಬುದ್ಧಿ ಹೆಚ್ಚು ಕೆಲಸ ಮಾಡುತ್ತದೆ. ಪ್ರೇಮದಲ್ಲಿ ಲೆಕ್ಕಾಚಾರ ಹೆಚ್ಚಾಗುತ್ತದೆ. ಭಾವನೆಗಳನ್ನು ಮುಚ್ಚಿಡದೆ ಹೇಳಿದರೆ ಸಂಬಂಧದಲ್ಲಿ ಸಮಾಧಾನ ತರುವ ಬದಲಾವಣೆ ಕಾಣಿಸುತ್ತದೆ.

ತುಲಾ:

ಎಷ್ಟೇ ಪ್ರಯತ್ನಿಸಿದರೂ ಪ್ರೇಮ ಜೀವನದಲ್ಲಿ ಅಸಮತೋಲನ ಎಂದು ಅನಿಸುತ್ತದೆ. ಅರಿರೇಕ ಮಾಡದೇ ಇದ್ದರೆ ಅಸಮಾಧಾನಗಳು ನಿಧಾನವಾಗಿ ಕರಗುತ್ತವೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂಬಂಧಕ್ಕೆ ಹೊಸ ಉಸಿರು ನೀಡುತ್ತದೆ.

ವೃಶ್ಚಿಕ:

ಅತಿಯಾಗಿ ಇಳಿದರೆ ಪ್ರೇಮದಲ್ಲಿ ತೀವ್ರತೆ, ಆಕರ್ಷಣೆ ಗಾಢವಾದ ಅನುಭವ. ರಹಸ್ಯ ಭಾವನೆಗಳು ಮನಸ್ಸಿನಲ್ಲಿ ಚಲನೆ ಉಂಟುಮಾಡುತ್ತವೆ. ಕಪಿಮುಷ್ಟಿಯಂತಿರುವ ಹಿಡಿತ ತಪ್ಪಿಸಿದರೆ ಪ್ರೀತಿ ಸುಂದರವಾಗುತ್ತದೆ.

ಧನು:

ಸಂಗಾತಿಯ ನಡವಳಿಮೆಯಿಂದ ಪ್ರೇಮಕ್ಕಿಂತ ಸ್ವಾತಂತ್ರ್ಯ ಮುಖ್ಯವೆನಿಸುತ್ತದೆ. ಈ ವಾರ ಸಂಗಾತಿಗೆ ನೀವು ಸಮಯ ಕಡಿಮೆಯಾಗಬಹುದು. ಮನದಾಳದ ಭಾವನೆ ಹಂಚಿಕೊಂಡರೆ ದೂರದ ಭಯ ನಿವಾರಣೆಯಾಗುತ್ತದೆ ಈ ವಾರ.

ಮಕರ:

ಕೆಲವು ಮಾತುಗಳಿಂದ ಪ್ರೇಮ ಗಂಭೀರ ದಿಕ್ಕಿಗೆ ಸಾಗುತ್ತದೆ. ಭವಿಷ್ಯದ ಚಿಂತನೆಗಳು ಹೆಚ್ಚಾಗುತ್ತವೆ. ಆದರೆ ಕೆಲಸದ ಒತ್ತಡ ಹೃದಯವನ್ನು ಕಠಿಣಗೊಳಿಸಬಹುದು. ಪೂರ್ವನಿರ್ಧಾರದಲ್ಲಿ ವ್ಯತ್ಯಾಸ, ಸಮತೋಲನ ಕಾಪಾಡಿಕೊಳ್ಳುವಲ್ಲಿ ಅಲ್ಪ ವಿಫಲ.

ಕುಂಭ:

ಅನ್ಯರ ಮೇಲೆ ಅನಿರೀಕ್ಷಿತ ಭಾವನೆಗಳು ಮೂಡುತ್ತವೆ. ಈ ವಾರ ಸಹವಾಸ ಅತಿಯಾಗಿ ಸ್ನೇಹವೇ ಪ್ರೇಮದ ರೂಪ ಪಡೆಯಬಹುದು. ಬಂಧನಕ್ಕಿಂತ ಸಹಭಾಗಿತ್ವ ಬೇಕೆನಿಸುತ್ತದೆ. ಸ್ಪಷ್ಟತೆ ಇದ್ದರೆ ಸಂಬಂಧ ಸುಗಮವಾಗುತ್ತದೆ.

ಮೀನ:

ಹಠದಿಂದ ಪಡೆಯಲಾಗದ್ದನ್ನು ಪ್ರೀತಿಯಲ್ಲಿ ತ್ಯಾಗ, ಮೃದುತ್ವದಿಂದ ಸಾಧ್ಯ. ಹಳೆಯ ನೋವುಗಳು ಕರಗುತ್ತವೆ. ಸಂಗಾತಿಯೊಂದಿಗಿನ ಆತ್ಮೀಯ ಕ್ಷಣಗಳು ಮನಸ್ಸಿಗೆ ಆಳವಾದ ತೃಪ್ತಿ ನೀಡುತ್ತವೆ. ಸಮಯವಿದೆ ಎಂದು ಕಿರಿಕಿರಿ ಮಾಡಲು ಹೋಗುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)