Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 16ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 16ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಸವಿಸ್ತಾರ ಮಾಹಿತಿ ಇಲ್ಲಿದೆ. ನಿಮ್ಮ ಕೆಲಸಗಳು, ಹಣಕಾಸಿನ ಹರಿವು, ಸಂಬಂಧಗಳು ಮತ್ತು ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ವಿವರವಾದ ಒಳನೋಟಗಳನ್ನು ಕಂಡುಕೊಳ್ಳಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಯಾವುದೇ ವಿಚಾರದಲ್ಲೂ ಅತುರ ಮಾಡಬೇಡಿ. ನಿಮ್ಮ ಎದುರಿಗೆ ಇರುವಂಥವರು ಪೂರ್ಣವಾಗಿ ಮಾತು ಮುಗಿಸುವ ತನಕ ಕೇಳಿಸಿಕೊಳ್ಳಿ. ಹೇಳಿದ್ದನ್ನೇ ಹೇಳುತ್ತಾ ಇದ್ದಾರೆ ಎಂದೆನಿಸಿದರೂ ಮಧ್ಯೆ ಮಾತಾಡುವುದಕ್ಕೋ ಹೋಗಬೇಡಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಸಮಸ್ಯೆ ತೀವ್ರವಾಗಲಿದೆ. ಈಗ ಔಷಧ ತೆಗೆದುಕೊಳ್ಳುತ್ತಾ ಇದ್ದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇಲ್ಲ ಎಂಬ ಕಾರಣಕ್ಕೆ ಬದಲಾವಣೆ ಸಲಹೆ ನೀಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮಗಿಂತ ಕಿರಿಯ ವಯಸ್ಸಿನವರಿಗೆ ಹೊಸ ಬಟ್ಟೆಗಳನ್ನು ಕೊಡಿಸಲಿದ್ದೀರಿ. ನಿರ್ದಿಷ್ಟ ಸಮಯದೊಳಗೆ ಕೆಲವು ಕಾರ್ಯಗಳನ್ನು ಮುಗಿಸಿಕೊಡುವ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆ ಇದೆ. ಒಂದೇ ಕೆಲಸಕ್ಕೆ ನಾಲ್ಕಾರು ಸಲ ಓಡಾಡುವಂತೆ ಆಗಲಿದ್ದು, ನೀವು ಯಾವ ಕಾರ್ಯಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅದರ ಎಲ್ಲ ದಾಖಲೆ- ಪತ್ರಗಳು ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ತೀವ್ರ ಬಗೆಯಲ್ಲಿ ಹಲ್ಲು ನೋವು ಕಾಡಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಹಣಕಾಸು ವಿಚಾರದಲ್ಲಿ ವೇಗವಾಗಿ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳ ಬಾರದು. ಷೇರು- ಮ್ಯೂಚುವಲ್ ಫಂಡ್ ಹೂಡಿಕೆಗೆ ಸಲಹೆ ನೀಡುವಂಥ ಫೈನಾನ್ಷಿಯಲ್ ಅಡ್ವೈಸರ್- ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಆಗಿರುತ್ತದೆ. ಕಣ್ತಪ್ಪಿನಿಂದ ಆದ ಸಮಸ್ಯೆಯನ್ನು ಬಗೆಹರಿಸಲು ಕಲಿತ ವಿದ್ಯೆ- ಬುದ್ಧಿಯನ್ನೆಲ್ಲ ಖರ್ಚು ಮಾಡುವಂತೆ ಆಗಲಿದೆ. ನಿಮ್ಮ ಜವಾಬ್ದಾರಿ ಇತರರಿಗೆ ವರ್ಗಾಯಿಸಬೇಡಿ. ಸಂಖ್ಯೆಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷೆ ಮಾಡಿದ ನಂತರದಲ್ಲಿ ವ್ಯವಹಾರ ಮಾಡಿ.
ಲೇಖನ- ಸ್ವಾತಿ ಎನ್.ಕೆ.
