
ಅಕ್ಟೋಬರ್ 07ರಿಂದ ಅಕ್ಟೋಬರ್ 11 ವರೆಗೆ ಈ ವಾರವಿದ್ದು (Weekly Love Horoscope) ಪ್ರೀತಿಯಲ್ಲಿ ಕೆಲವು ತಿರುವುಗಳು ಬರಲಿದ್ದು, ಅದನ್ನು ಸಮರ್ಥರಾದವರು ನಿಭಾಯಿಸುವಿರಿ. ಉತ್ತಮ ದಶೆಯಲ್ಲಿ ಸಮಸ್ಯೆಯನ್ನು ಅನಾಯಾಸವಾಗಿ ದಾಟಲು ಸಾಧ್ಯ. ದುಃಖದಿಂದ ಅನಾಹುತ ಮಾಡಿಕೊಳ್ಳದೇ ಧೈರ್ಯವಾಗಿ ಇರಿ.
ರಾಶಿ ಚಕ್ರದ ಮೊದಲ ರಾಶಿಯವರಿಗೆ ಈ ವಾರ ಪ್ರೀತಿಯು ಎಲ್ಲ ಕಾರ್ಯಗಳಿಗೆ ಉತ್ಸಾಹ ತಂದುಕೊಡುವುದು. ತತ್ಕ್ಷಣದ ಆಕರ್ಷಣೆಯಿಂದ ಅಪಾಯ ಸಾಧ್ಯತೆ. ಈ ವಾರ ಪ್ರೀತಿಯಲ್ಲಿ ಸ್ವಲ್ಪ ಮಟ್ಟಿನ ಅಹಂಕಾರ ಎದ್ದು ತೋರಿಸುವರು. ನಿಜವಾಗಿಯೂ ನಿಮ್ಮಲ್ಲಿ ಪ್ರೀತಿ ಇದ್ದರೆ ಅದು ಎಲ್ಲವನ್ನೂ ತೂಗಿಸುವುದು. ಸಂಗಾತಿಗೆ ಮೆಚ್ಚುಗೆ ನೀಡುವ ಅನಿವಾರ್ಯತೆ ಬರಲಿದೆ. ಆಗಾಗ ಕೋಪದಿಂದ ಸಂಬಂಧಕ್ಕೆ ಬಿರುಕು ಬರುವ ಸಾಧ್ಯತೆ.
ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಪ್ರೀತಿಯಲ್ಲಿ ನಿಷ್ಠೆ ಮತ್ತು ಅಗಾಧತೆ ಎದ್ದು ಕಾಣಿಸುವುದು. ಶಾರೀರಿಕ ಹಾಗೂ ಭಾವನಾತ್ಮಕ ಸಂಬಂಧಕ್ಕೆ ಮಹತ್ವವಿರಲಿದೆ. ಈ ವಾರ ಒಮ್ಮೆಲೇ ಈ ರಾಶಿಯವರ ಪ್ರೀತಿ ಸಿಗುತ್ತದೆ ಎಂದು ನಂಬಬೇಡಿ. ನಿಧಾನವಾಗಿ ಪ್ರೀತಿಗೆ ಕಟ್ಟುಬೀಳುವರು. ಆಮೇಲೆ ಬಲವಾಗುವುದು. ಇವರು ಸಂಗಾತಿಯಿಂದ ಪ್ರಾಮಾಣಿಕತೆಯನ್ನು ಬಯಸುವರು.
ಬುಧನ ಆಧಿಪತ್ಯದ ಈ ರಾಶಿಗೆ ಈ ವಾರ ಪ್ರೀತಿಯ ಚಟುವಟಿಕೆ, ಮಾತನಾಡುವಿಕೆ ಎಲ್ಲರ ಆಕರ್ಷಣೆಯಾಗುವುದು. ಪ್ರೀತಿಯಲ್ಲಿನ ವೈವಿಧ್ಯ ಮನೆಯವರಿಗೂ ಇಷ್ಟವಾಗಲಿದೆ. ಅತಿಯಾದ ಮುದ್ದು ಕೆಲವೊಮ್ಮೆ ಅಸ್ಥಿರತೆಯಿಂದ ಅನ್ಯ ಪರಿಣಾಮವನ್ನು ಬೀರುವುದು. ಈ ವಾರ ಪ್ರೀತಿಯ ಮಾತನಾಡದೇ ಸ್ನೇಹದ ಭಾವವೇ ಮುಂದುವರಿಯಲಿ.
ಚಂದ್ರನು ರಾಶಿಯ ಅಧಿಪತಿಯಾಗಿದ್ದು ಈ ವಾರ ಪ್ರೀತಿಯನ್ನು ತುಂಬಾ ಭಾವನಾತ್ಮಕವಾಗಿ ಕಾಣುವಿರಿ.
ಇಷ್ಟು ದಿನ ಕುಟುಂಬ ಕೇಂದ್ರಿತವಾಗಿದ್ದ ಪ್ರೀತಿ, ಪ್ರೇಯಸಿಯ ಮೇಲೆ ತಿರುಗುವುದು. ಈ ವಾರ ಪ್ರೀತಿ ಅತಿಯಾದರೆ ಸಣ್ಣ ತಪ್ಪಿಗೂ ನೋವಾಗುವುದು. ಸಂಗಾತಿಗೆ ತಾಯಿಯಂತೆ ನೋಡಿಕೊಳ್ಳುವರು.
ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ಪ್ರೀತಿಗೆ ಸಂಬಂಧಿಸಿದಂತೆ ನಾಟಕೀಯ ವ್ಯವಹಾರ ಕಾಣಿಸುವುದು. ಅನೇಕರ ಆಕರ್ಷಣೆಗೆ ನಿಮ್ಮ ವರ್ತನೆ ಇರುವುದು. ಸಂಗಾತಿಯ ಮನೆಯವರ ಮೇಲೆ ಮೆಚ್ಚುಗೆ, ಗೌರವ ಬರಲಿದೆ. ಈ ವಾರ ಪ್ರೀತಿಯಲ್ಲಿ ಸ್ವಲ್ಪ ಸ್ವಾಮಿತ್ವಭಾವ ನಿಮಗೆ ಗೊತ್ತಾಗದಂತೆ ಬೆಳೆಯುವುದು. ಎಲ್ಲದಕ್ಕೂ’ನಾನೇ’ ಎನ್ನುವ ಭಾವನೆ ಬರುವುದು.
ರಾಶಿ ಚಕ್ರದ ಆರನೇ ರಾಶಿಯವರಿಗೆ ಅಕ್ಟೋಬರ್ ತಿಂಗಳ ಮೊದಲನೇ ವಾರ ಪ್ರೀತಿಯಲ್ಲಿ ನಿಖರತೆ ಇರುವುದು. ಯಾರಲ್ಲಿಯೂ ಹೇಳಿಕೊಳ್ಳದೇ ನಿಮ್ಮೊಳಗೇ ಪ್ರೀತಿಸುವಿರಿ. ಈ ವಾರ ಸಂಗಾತಿಯ ಪ್ರತಿಯೊಂದು ವಿಚಾರದಲ್ಲಿಯೂ ಕಾಳಜಿಯನ್ನು ಅವರಿಗೆ ಗೊತ್ತಾಗದಂತೆ ನಟಿಸಿ, ಮಾಡುವಿರಿ.
ಆಪ್ತರಿಂದ ಕೆಲವೊಮ್ಮೆ ಟೀಕೆಗಳು ಬಂದು, ಮುಜುಗರವಾಗಬಹುದು. ಆ ಕ್ಷಣದಲ್ಲಿ ನಾಚಿದರೂ ಬದಲಾವಣೆಯ ಮಾತಿಲ್ಲ.
ಶುಕ್ರನ ಆಧಿಪತ್ಯದ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ತುಂಬಾ ರೋಮ್ಯಾಂಟಿಕ್ ಮಾನಸಿಕತೆ ಇರುವುದು. ಪ್ರೀತಿಯನ್ನೂ ಕುಟುಂಬವನ್ನೂ ಸಮತೋಲನದಲ್ಲಿ ನಿರ್ವಹಿಸುವಿರಿ. ಈ ವಾರ ಆಕರ್ಷಣೆಗೆ ಮತ್ತಷ್ಟು ಆಕರ್ಷಣೆ ಬರುವಂತೆ ಸಂಗಾತಿಗೆ ಐಡಿಯಾ ಕೊಡುವಿರಿ. ಸಂಗಾತಿಯ ಜೊತೆ ಪ್ರೀತಿಯನ್ನು ಸಮರ್ಥನೆ ಮಾಡಿಕೊಳ್ಳುವಿರಿ.
ಅಕ್ಟೋಬರ್ ತಿಂಗಳ ಈ ವಾರದಲ್ಲಿ ಕುಜನ ಆಧಿಪತ್ಯದ ಈ ರಾಶಿಗೆ ಗಾಢವೂ ತೀವ್ರವೂ ಆದ ಪ್ರೀತಿ ಅನ್ಯರ ಮೇಲೆ ಬರಲಿದೆ. ನಿಮಗೆ ಗೊತ್ತಾಗದಂತೆ ಪ್ರೀತಿಯಲ್ಲಿ ಅತಿ ಆಳಕ್ಕೆ ಹೋಗುವಿರಿ. ಅನ್ಯರಿಂದ ನಿಮ್ಮ ಪ್ರೀತಿಗೆ ಅಸೂಯೆ ಬರಲಿದೆ. ಯಾವುದಾದರೂ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ.
ಗುರುವಿನ ಆಧಿಪತ್ಯದ ಈ ರಾಶಿಗೆ ಮೊದಲ ವಾರ ಪ್ರೀತಿಯನ್ನು ಸಾಹಸದ ಮೂಲಕ ಪ್ರದರ್ಶಿಸುವಿರಿ. ಸಂಗಾತಿಗೆ ಸ್ವಾತಂತ್ರ್ಯ ಕೊಡುವಿರಿ. ಹೊಸ ವಿಚಾರಗಳನ್ನು ಮಾತನಾಡಲು ಬಯಸಿ ಸಂಗಾತಿ ಜೊತೆ ಹಂಚಿಕೊಳ್ಳುವಿರಿ. ಬಂಧನ ಇಷ್ಟವಿಲ್ಲ, ಬಿಗಿಯಾಗಿ ಹಿಡಿದರೆ ದೂರ ಹೋಗುವರು. ಹಾಡಿನ ಮೂಲಕ ಆಕರ್ಷಿಸುವಿರಿ.
ಶನಿ ಅಧಿಪತಿಯಾದ ಈ ರಾಶಿಗೆ ಈ ವಾರ ಗಂಭೀರವೂ ಜವಾಬ್ದಾರಿಯುತವೂ ಆದ ಪ್ರೀತಿ ಇರುವುದು. ಪ್ರೀತಿಯನ್ನು ತಮಾಷೆಯಾಗಿ ತೆಗೆದುಕೊಳ್ಳುವಿರಿ. ಈ ವಾರ ಉದ್ಯೋಗದಲ್ಲಿ ಹೊಸ ಪ್ರೇಮ ಹುಟ್ಟುವುದು. ಉಡುಗೊರೆಯನ್ನು ಕೊಟ್ಟು ವಶಮಾಡಿಕೊಳ್ಳುವಿರಿ. ಮನೆಯವರಿಗೆ ಅರ್ಥಮಾಡಿಸುವುದು ಆಗದು.
ಇದನ್ನೂ ಓದಿ: ಮೇಷದಿಂದ ಮೀನದ ತನಕ 2025- 26ರ ದೀಪಾವಳಿ ಹಣಕಾಸು ವರ್ಷ ಭವಿಷ್ಯ
ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಪ್ರೀತಿಯನ್ನು ವಿಭಿನ್ನವಾಗಿ ತಿಳಿಸುವಿರಿ. ಸಂಗಾತಿಯ ವಿರೋಧವನ್ನು ತಡೆಯಲಾಗದು. ಆರೋಗ್ಯದ ಸಹಾಯಕ್ಕೆ ಹೋಗುವಿರಿ. ಈ ವಾರ ಸ್ವಾತಂತ್ರ್ಯವನ್ನು ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ. ಪ್ರೀತಿಯಲ್ಲಿ ಬುದ್ಧಿವಂತಿಕೆ ಮುಖ್ಯ.
ಇದನ್ನೂ ಓದಿ: ಮೇಷದಿಂದ ಮೀನದ ತನಕ 2025- 26ರ ದೀಪಾವಳಿ ಹಣಕಾಸು ವರ್ಷ ಭವಿಷ್ಯ
ಗುರುವಿನ ಆಧಿಪತ್ಯದ ಈ ರಾಶಿಗೆ ಪ್ರೀತಿಯ ಕಾಲ್ಪನಿಕತೆಯ ಜಗತ್ತು ತೆರೆಯುವುದು. ನಿಮ್ಮ ಸಂಗಾತಿಗೆ ಹೆಚ್ಚು ಸಮಯ ಕೊಡುವಿರಿ. ಕಲಾವಿದರಿಗೆ ಮತ್ತೊಬ್ಬ ಕಲಾವಿದರ ಮೇಲೆ ಪ್ರೀತಿಯ ಆರಂಭವಾಗಲಿದೆ. ಯಾರಾದರೂ ಕಿವಿಕಚ್ಚಿ ಮನಸ್ಸನ್ನು ಬದಲಾಯಿಸುವಿರಿ.
– ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Fri, 3 October 25