ಸಾಂದರ್ಭಿಕ ಚಿತ್ರ
ಅಕ್ಷಯ ತೃತೀಯದ (Akshaya Tritiya) ದಿನದಂದು ಚಿನ್ನ, ಬೆಳ್ಳಿಯಂತಹ ದುಬಾರಿ ಲೋಹಗಳನ್ನು ಖರೀದಿಸುವ ಸಂಪ್ರದಾಯವಿದೆ. ಅಕ್ಷಯ ತೃತೀಯದಂದು ಲೋಹದ ರೂಪದಲ್ಲಿ ತಮ್ಮ ಮನೆಗಳಿಗೆ ಲಕ್ಷ್ಮಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಇದರಿಂದ ಈ ದಿನದಂದು ಪಡೆದ ಸಂಪತ್ತು, ದಾನದ ಫಲ ನಾಶ ಆಗುವುದಿಲ್ಲ. ಈ ವರ್ಷ ಅಕ್ಷಯ ತೃತೀಯವನ್ನು ಮೇ 3ರ ಮಂಗಳವಾರದಂದು ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನ, ಬೆಳ್ಳಿ ಅಥವಾ ಇತರ ಲೋಹ- ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ ಅಕ್ಷಯ ತೃತೀಯ ಸಂದರ್ಭದಲ್ಲಿ ನಿಮ್ಮ ರಾಶಿಚಕ್ರದ ಚಿಹ್ನೆಯ ಪ್ರಕಾರ ಯಾವ ಲೋಹವನ್ನು ಖರೀದಿಸಬೇಕು, ಅದರಿಂದ ನಿಮ್ಮ ಪ್ರಗತಿಗೆ ಸಹಕಾರಿಯಾಗುತ್ತದೆಯೇ ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿದೆ. ರಾಶಿಚಕ್ರದ ಪ್ರಕಾರ ಯಾವ ಲೋಹವನ್ನು ಖರೀದಿಸಲು ಲಾಭದಾಯಕ ಎಂಬ ವಿವರಣೆ ಇಲ್ಲಿದೆ.
- ಮೇಷ : ಮೇಷ ರಾಶಿಯ ಜನರು ಅಕ್ಷಯ ತೃತೀಯದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸುವುದು ಶುಭಪ್ರದ. ನಿಮ್ಮ ರಾಶಿಯ ಅಧಿಪತಿ ಮಂಗಳ ಗ್ರಹಕ್ಕೆ ಮಂಗಳಕರ ಲೋಹ ತಾಮ್ರವಾಗಿದೆ.
- ವೃಷಭ: ನಿಮ್ಮ ರಾಶಿಯ ಅಧಿಪತಿ ಶುಕ್ರ. ಅಕ್ಷಯ ತೃತೀಯದಲ್ಲಿ ಬೆಳ್ಳಿಯನ್ನು ಖರೀದಿಸುವುದು ನಿಮಗೆ ಶುಭಕರ. ವಜ್ರವನ್ನು ಶುಕ್ರನ ಮುಖ್ಯ ರತ್ನವೆಂದು ಪರಿಗಣಿಸಲಾಗಿದೆ.
- ಮಿಥುನ: ಮಿಥುನ ರಾಶಿಯ ಜನರ ಅಧಿಪತಿ ಬುಧ. ಈ ಕಾರಣದಿಂದಾಗಿ ಮಿಥುನ ರಾಶಿಯ ಜನರು ಅಕ್ಷಯ ತೃತೀಯದಂದು ಕಂಚಿನ ಪಾತ್ರೆಗಳನ್ನು ಅಥವಾ ಆಭರಣಗಳನ್ನು ಖರೀದಿಸಬಹುದು.
- ಕರ್ಕಾಟಕ: ಕರ್ಕಾಟಕ ರಾಶಿಯವರು ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದು. ಈ ರಾಶ್ಯಾಧಿಪತಿ ಚಂದ್ರ, ಆದ್ದರಿಂದ ಬೆಳ್ಳಿಯು ಮಂಗಳಕರವಾಗಿರುತ್ತದೆ.
- ಸಿಂಹ: ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸಬೇಕು.
- ಕನ್ಯಾ: ಕನ್ಯಾರಾಶಿಯ ಅಧಿಪತಿ ಗ್ರಹ ಬುಧ. ಈ ರಾಶಿಯ ಜನರು ಅಕ್ಷಯ ತೃತೀಯದಂದು ಕಂಚನ್ನು ಖರೀದಿಸುವುದು ಮಂಗಳಕರ.
- ತುಲಾ: ತುಲಾ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ಬೆಳ್ಳಿಯನ್ನು ಖರೀದಿಸಬೇಕು. ಈ ರಾಶಿಯ ಅಧಿಪತಿ ಶುಕ್ರ.
- ವೃಶ್ಚಿಕ: ಅಕ್ಷಯ ತೃತೀಯದಂದು ವೃಶ್ಚಿಕ ರಾಶಿಯವರಿಗೆ ತಾಮ್ರವನ್ನು ಖರೀದಿಸುವುದು ಒಳ್ಳೆಯದು. ಈ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದ್ದು, ಮಂಗಳಕರ ಲೋಹ ತಾಮ್ರವಾಗಿದೆ.
- ಧನು: ಧನು ರಾಶಿಯ ಅಧಿಪತಿ ಗುರು. ಅಕ್ಷಯ ತೃತೀಯ ದಿನದಂದು ನಿಮ್ಮ ರಾಶಿಯ ಜನರು ಹಿತ್ತಾಳೆ ಅಥವಾ ಚಿನ್ನವನ್ನು ಖರೀದಿಸುವುದು ಉತ್ತಮ.
- ಮಕರ: ಅಕ್ಷಯ ತೃತೀಯದಂದು ಮಕರ ರಾಶಿಯವರು ಸ್ಟೀಲ್ ಅಥವಾ ಕಬ್ಬಿಣ ಖರೀದಿಸುವುದು ಒಳ್ಳೆಯದು. ಏಕೆಂದರೆ ಈ ರಾಶಿಯ ಅಧಿಪತಿ ಶನೈಶ್ಚರ.
- ಕುಂಭ: ಈ ರಾಶಿಯ ಜನರು ಮಕರ ರಾಶಿಯಂತೆಯೇ ಸ್ಟೀಲ್ ಅಥವಾ ಕಬ್ಬಿಣ ಖರೀದಿಸಬೇಕು. ಈ ರಾಶಿಯ ಅಧಿಪತಿಯೂ ಶನಿಯೇ.
- ಮೀನ: ಈ ರಾಶಿಯ ಅಧಿಪತಿ ಗುರು. ಮೀನ ರಾಶಿಯವರಿಗೆ ಅಕ್ಷಯ ತೃತೀಯ ಸಂದರ್ಭದಲ್ಲಿ ಹಿತ್ತಾಳೆಯನ್ನು ಖರೀದಿಸುವುದು ಶುಭಕರ. ಅವರು ಬಯಸಿದರೆ ಚಿನ್ನವನ್ನೂ ಖರೀದಿಸಬಹುದು.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Akshaya Trutheeya: ಅನ್ನಪೂರ್ಣೇಶ್ವರಿ ಜನಿಸಿದ ದಿನ -ಅನಂತ ಶುಭವನ್ನು ತರುವ ಅಕ್ಷಯ ತದಿಗೆ ದಿನದ ನಾನಾ ಮಹತ್ವ, ವಿವರ