ಗುರುವಿನ ಪರಿವರ್ತನೆಯಿಂದ ಯಾರಿಗೆ ಈ ವರ್ಷ ಅನುಕೂಲವಿದೆ? ಯಾವ ರಾಶಿಗೆ ಗುರುಬಲ?

ಪ್ರಸ್ತುತ, ಗುರುವಿನ ರಾಶಿ ಪರಿವರ್ತನೆಯ ಕಾಲ ಸಮೀಪಿಸುತ್ತಿದ್ದೆ. ಮೇಷ ರಾಶಿಯಲ್ಲಿ ಒಂದು ವರ್ಷಗಳಿಂದ ಇದ್ದು ಹನ್ನೆರೆಡು ರಾಶಿಯವರಿಗೆ ಶುಭಾಶುಭ ಫಲವನ್ನು ನೀಡಿದ್ದಾನೆ. ಇನ್ನು ಮೆರ ತಿಂಗಳಿನಿಂದ ವೃಷಭರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ. ಇನ್ನು ಒಂದು ವರ್ಷಗಳ ಕಾಲ ಇಲ್ಲಿಯೇ ಇದ್ದು ಶುಭಾಶುಭ ಫಲಗಳನ್ನು ನೀಡುವನು.

ಗುರುವಿನ ಪರಿವರ್ತನೆಯಿಂದ ಯಾರಿಗೆ ಈ ವರ್ಷ ಅನುಕೂಲವಿದೆ? ಯಾವ ರಾಶಿಗೆ ಗುರುಬಲ?
ಸಾಂದರ್ಭಿಕ ಚಿತ್ರ
Edited By:

Updated on: Apr 25, 2024 | 10:05 AM

ಖಗೋಳದಲ್ಲಿ ಅತ್ಯಂತ ದೊಡ್ಡ ಗ್ರಹವೆಂದರೆ ಗುರು.‌ ಅತ್ಯಂತ ಶುಭವನ್ನು ಕೊಡುವವನೂ ಗುರುವೇ ಆಗಿದ್ದಾನೆ. ಈ ಗುರುವು ಮೇಷ, ವೃಷಭ, ಮಿಥುನ ಮೊದಲಾದ ಹನ್ನೆರಡು ರಾಶಿಗಳಲ್ಲಿ ಸಂಚರಿಸುವಾಗ ಒಂದು ರಾಶಿಯಲ್ಲಿ ಸರಿಸುಮಾರು ಒಂದು ವರ್ಷಗಳ ಕಾಲ ಇರುತ್ತಾನೆ. ಹಾಗಾಗಿ ಗುರುವು ಒಂದು ರಾಶಿಚಕ್ರವನ್ನು ಪೂರ್ಣ ಮಾಡಲು ಅಥವಾ ಸೂರ್ಯ ಸುತ್ತ ಒಂದು ಸುತ್ತು ಬರಲು ಒಂದು ವರ್ಷ ಬೇಕಾಗುವುದು. ಇದನ್ನು ಬಾರ್ಹಸ್ಪತ್ಯ ವರ್ಷವೆಂದೂ ಬಾರ್ಹಸ್ಪತ್ಯ ಮಾನವೆಂದೂ ಕರೆಯುತ್ತಾರೆ.

ಪ್ರಸ್ತುತ, ಗುರುವಿನ ರಾಶಿ ಪರಿವರ್ತನೆಯ ಕಾಲ ಸಮೀಪಿಸುತ್ತಿದ್ದೆ. ಮೇಷ ರಾಶಿಯಲ್ಲಿ ಒಂದು ವರ್ಷಗಳಿಂದ ಇದ್ದು ಹನ್ನೆರೆಡು ರಾಶಿಯವರಿಗೆ ಶುಭಾಶುಭ ಫಲವನ್ನು ನೀಡಿದ್ದಾನೆ. ಇನ್ನು ಮೆರ ತಿಂಗಳಿನಿಂದ ವೃಷಭರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ. ಇನ್ನು ಒಂದು ವರ್ಷಗಳ ಕಾಲ ಇಲ್ಲಿಯೇ ಇದ್ದು ಶುಭಾಶುಭ ಫಲಗಳನ್ನು ನೀಡುವನು.

ವೃಷಭರಾಶಿಗೆ ಪ್ರವೇಶ

ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಮತ್ತು ಗುರು ಇವರ ನಡುವೆ ಶತ್ರುತ್ವ ಮತ್ತು ಮಿತ್ರತ್ವವನ್ನು ನೋಡುವುದಾದರೆ ಶುಕ್ರನಿಗೆ ಗುರುವು ಮಿತ್ರನಾದರೆ, ಗುರುವಿಗೆ ಶುಕ್ರನು ಶತ್ರು.‌ ಹಾಗಾಗಿ ಶತ್ರುವಿನ ಮನೆಯಲ್ಲಿದ್ದರೂ ರಾಶಿಯ ಅಧಿಪತಿಗೆ ಗುರುವು ಶತ್ರುವಲ್ಲದೇ ಇರುವ ಕಾರಣ ಗುರುವಿನಿಂದ ಅಶುಭವಲ್ಲದೇ ಇದ್ದರೂ ಅತ್ಯಂತ ಶುಭವನ್ನು ನಿರೀಕ್ಷಿಸುವುದು ಬೇಡ.

ಇದನ್ನೂ ಓದಿ: ಮನೆಯ ಬಾಗಿಲಿಗೆ ಪ್ಲಾಸ್ಟಿಕ್ ತೋರಣ ಕಟ್ಟುವುದರಿಂದಾಗುವ ಅಶುಭಗಳೇನು ತಿಳಿಯಿರಿ!

ಯಾವ ರಾಶಿಗೆ ಗುರುಬಲ ಆರಂಭ?

ಗುರುಬಲವು ಅನೇಕ ಮಂಗಲ ಕಾರ್ಯಗಳಿಗೆ ಬೇಕು.‌ ಯಾವ ರಾಶಿಯವರಿಗೆ ಅನುಕೂಲ ಎನ್ನುವುದನ್ನು ನೋಡುಬುದಾದರೆ,

ವಟುಕನ್ಯಾ ಜನ್ಮರಾಶೇಃ

ತ್ರಿಕೋಣಾಯದ್ವಿಸಪ್ತಗಃ |

ಶ್ರೇಷ್ಠೋ ಗುರುಃ ಖಷಟ್ತ್ರ್ಯಾದ್ಯೇ

ಪೂಜಾಯಾನ್ಯತ್ರ ನಿಂದಿತಃ ||

ಗುರುವು ಎರಡು, ಐದು, ಏಳು, ಹನ್ನೊಂದನೆ ರಾಶಿಯವರಿಗೆ ಶುಭ. ಒಂದು, ಮೂರು, ಆರು ಹಾಗೂ ಹಾಗೂ ಹತ್ತನೇ ರಾಶಿಯವರಿಗೆ ಮಿಶ್ರ. ಉಳಿದ ನಾಲ್ಕು, ಎಂಟು ಮತ್ತು ಹನ್ನೆರಡನೇ ರಾಶಿಯವರಿಗೆ ಅಶುಭ.

ಮಂಗಲ ಕಾರ್ಯವನ್ನು ಮಾಡಲು ಬಯಸುವವರು ಶುಭರಾಶಿಯವರು ಧೈರ್ಯದಿಂದ ಮಾಡಬಹುದು. ಮಿಶ್ರಫಲದ ರಾಶಿಯವರು ಪುರೋಹಿತರಿಂದ ಕೇಳಿಕೊಂಡು, ಅನಿವಾರ್ಯವಾದರೆ ಮಾತ್ರ ಪರಿಹಾರ ಮಾಡಿಕೊಂಡು ಮಾಡಬೇಕು. ಆದರೆ ಅಶುಭ ರಾಶಿಯವರು ಯಾವ ಕಾರಣಕ್ಕೂ ಮಂಗಲ ಕಾರ್ಯವನ್ನು ಮಾಡಬಾರದು.

ಇಲ್ಲಿಯೂ ಗುರು ಅಸ್ತವನ್ನು ನೋಡಿಕೊಂಡು ಶುಭ ಕಾರ್ಯವನ್ನು ಮಾಡಬೇಕಾಗಿದೆ.

– ಲೋಹಿತ ಹೆಬ್ಬಾರ್, ಇಡುವಾ

ಮತ್ತಷ್ಟು ಜ್ಯೋತಿಷ್ಯ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.