Horoscope: ಈ ನಾಲ್ಕು ರಾಶಿಯವರಿಗೆ ಈ ವರ್ಷ ಹೆಚ್ಚು ಶುಭ
ಗುರು ಗ್ರಹವು ತನ್ನ ಸ್ಥಾನವನ್ನು ಬದಲಿಸುತ್ತಿದೆ. ರಾಶಿ ಚಕ್ರದ ಎರಡನೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುವ ಕಾಲವು ಸಮೀಪಿಸುತ್ತಿದ್ದೆ. ಇನ್ನು ಒಂದು ವರ್ಷ ಕೆಲವು ರಾಶಿಯವರಿಗೆ ಶುಭ. ಯಾವೆಲ್ಲ ರಾಶಿಯವರಿಗೆ ಶುಭ ಇದೆ. ಇಲ್ಲಿದೆ ನೋಡಿ.

ಗುರು ಗ್ರಹವು ತನ್ನ ಸ್ಥಾನವನ್ನು ಬದಲಿಸುತ್ತಿದೆ. ರಾಶಿ ಚಕ್ರದ ಎರಡನೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುವ ಕಾಲವು ಸಮೀಪಿಸುತ್ತಿದ್ದೆ. ಇನ್ನು ಒಂದು ವರ್ಷ ಕೆಲವು ರಾಶಿಯವರಿಗೆ ಶುಭ.
ಮೇಷ ರಾಶಿ :
ಈ ರಾಶಿಯವರಿಗೆ ದ್ವೀತೀಯ ಸ್ಥಾನದಲ್ಲಿ ಗುರುವು ಇರಲಿದ್ದಾನೆ. ಸಂಪತ್ತಿನ ಸ್ಥಾನವಾಗಿದ್ದರಿಂದ ಅಲ್ಪ ಪ್ರಮಾಣದಲ್ಲಿ ಪೂರ್ವಾರ್ಜಿತವಾದ ಸಂಪತ್ತು ಬರಲಿದೆ. ನೀವಾಡಿದ ಮಾತುಗಳು ಸತ್ಯವಾಗುವುದು. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಮುನ್ನಡೆಯೂ ಯಶಸ್ಸೂ ಸಿಗಲಿದೆ.
ಕರ್ಕಟಕ ರಾಶಿ :
ಇದು ಗುರುವಿನ ಉಚ್ಚಸ್ಥಾನದ ರಾಶಿಯಾಗಿದೆ. ರಾಶಿ ಚಕ್ರದ ನಾಲ್ಕನೇ ರಾಶಿಯೂ ಹೌದು. ಏಕಾದಶ ಸ್ಥಾನವು ನಿಮ್ಮ ಪರಿಶ್ರಮದಿಂದ ಸಿಗುವ ಸಂಪತ್ತಿನ ಸ್ಥಾನವಾಗಿದೆ. ಉದ್ಯಮಗಳಲ್ಲಿ ನಡೆಸುತ್ತಿದ್ದರೆ ಅಧಿಕ ಹಣದ ಹರಿವು ಇರಲಿದೆ. ಅಷ್ಟು ಮಾತ್ರವಲ್ಲದೇ ಉದ್ಯಮದ ವಿಸ್ತಾರವನ್ನೂ ಮಾಡಲು ಅವಕಾಶವು ಪ್ರಾಪ್ತವಾಗುವುದು. ಹೈನು ಉದ್ಯಮ, ಕೃಷಿ, ಆಲಂಕಾರಿಕ ವಿಚಾರಕ್ಕೆ ಸಂಬಂಧಿಸಿದ ಉದ್ಯಮ, ವಿನ್ಯಾಸಕ್ಕೆ ಸಂಬಂಧಿಸಿದ ಕಾರ್ಯಗಳು ಹಾಗೂ ಕಲಾವಿದರು ಹೆಚ್ಚಿ ಸಂಪತ್ತು ಕೀರ್ತಿಯನ್ನು ಪಡೆಯುವರು.
ವೃಶ್ಚಿಕ ರಾಶಿ :
ಇದು ರಾಶಿ ಚಕ್ರದ ಎಂಟನೇ ರಾಶಿಯು ಇದಾಗಿದ್ದು, ಗುರುವಿನ ರಾಶಿಗೆ ಏಳನೇ ರಾಶಿಯಾಗುತ್ತದೆ. ಪರಸ್ಪರರಿಗೂ ಏಳನೇ ರಾಶಿಯಾಗುವುದಿಂದ ಅನೇಕ ಶುಭಫಲವನ್ನು ಈ ರಾಶಿಯವರು ಪಡೆಯುವರು. ಅವಿವಾಹಿತರಿಗೆ ವಿವಾಹಯೋಗವು ಬರುವುದು. ಒಳ್ಳೆಯ ಕುಲದ ವಧೂ ಅಥವಾ ವರರು ಸಿಗಲಿದ್ದಾರೆ. ದಾಂಪತ್ಯದಲ್ಲಿ ಕಲಹಗಳು ಇದ್ದಿದ್ದರೆ, ಅದು ಅನ್ಯೋನ್ಯತೆಯನ್ನು ಕಾಣಲಿವೆ. ಮನಸ್ಸು ಪರಿವರ್ತನೆ ಆಗುವುದು.
ಇದನ್ನೂ ಓದಿ: ಗುರುವಿನ ಪರಿವರ್ತನೆಯಿಂದ ಯಾರಿಗೆ ಈ ವರ್ಷ ಅನುಕೂಲವಿದೆ? ಯಾವ ರಾಶಿಗೆ ಗುರುಬಲ?
ಮಕರ ರಾಶಿ :
ಇದು ರಾಶಿ ಚಕ್ರದ ಹತ್ತನೇ ರಾಶಿಯಾಗಲಿದೆ. ಗುರುವಿನ ಸ್ಥಾನದಿಂದ ಇದು ಒಂಭತ್ತನೇ ರಾಶಿಯೂ ಆಗುವುದು. ಇದು ಗೌರವ ಸ್ಥಾನಮಾನಗಳು ಪ್ರಾಪ್ತಿಯಾಗುವ ಸ್ಥಾನವಾಗಿದೆ. ಬೇರೆ ಬೇರೆ ಕಡೆಗಳಿಂದ ಸಮ್ಮಾನಗಳು ಆಗುವುದು. ಹಿರಿಯರ ಆಶೀರ್ವಾದವನ್ನು ಪಡೆಯುವಿರಿ. ಪೂರ್ವಪುಣ್ಯವು ಫಲಿಸುವ ವರ್ಷವು ಇದಾಗಲಿದೆ. ಇಷ್ಟು ದಿನ ಉಂಟಾದ ದುಃಖಕ್ಕೆ ಸಂತೋಷದ ಹೂ ಮಳೆ ನಿಮ್ಮ ಪಾಲಿಗೆ ಸಿಗಲಿದ್ದು, ಬಯಸಿದ್ದನ್ನು ಅನಾಯಾಸವಾಗಿ ಪಡೆದುಕೊಳ್ಳುವಿರಿ. ಎಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯಿತ್ತಿರುವುದು ನಿಮ್ಮ ನೆಮ್ಮದಿಯನ್ನು ಇಮ್ಮಡಿ ಮಾಡುವುದು.
ಇಷ್ಟು ರಾಶಿಯವರು ಈ ವರ್ಷದ ಹೆಚ್ಚು ಸುಖಿಗಳು, ಸಂಪತ್ತಿನಿಂದ ಕೂಡಿದವರು.
– ಲೋಹಿತ ಹೆಬ್ಬಾರ್, ಇಡುವಾಣಿ




