Nitya Bhakti: ಮನೆಯ ಬಾಗಿಲಿಗೆ ಪ್ಲಾಸ್ಟಿಕ್ ತೋರಣ ಕಟ್ಟುವುದರಿಂದಾಗುವ ಅಶುಭಗಳೇನು ತಿಳಿಯಿರಿ!
Daily Devotional: ಹಿಂದೂ ಸಂಪ್ರದಾಯದ ಪ್ರಕಾರ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣವನ್ನು ಕಟ್ಟುವುದರಿಂದ ಶುಭ ಕಾರ್ಯಗಳು ಅತ್ಯಂತ ಸುಗಮವಾಗಿ ನಡೆಯುತ್ತವೆ. ಯಾವುದೇ ರೀತಿಯ ದುಷ್ಟ ಅಥವಾ ನಕಾರಾತ್ಮಕ ಶಕ್ತಿಗಳಿಂದ ತೊಂದರೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗ ಈ ತೋರಣದ ಕುರಿತಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.
ಹಿಂದೂ ಸಂಪ್ರದಾಯದಲ್ಲಿ (Hindu tradition) ಆಹಾರ ಸೇವಿಸುವುದರಿಂದ ಹಿಡಿದು ಹಬ್ಬಗಳ ಆಚರಣೆಗಳಲ್ಲಿ ಸಾಕಷ್ಟು ಪದ್ಧತಿಗಳನ್ನು ಕಾಣುತ್ತೇವೆ. ಹೇಳಿ ಕೇಳಿ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ಕೊರತೆ ಇಲ್ಲ. ಪ್ರತಿಯೊಂದು ಹಬ್ಬಗಳಲ್ಲಿ ನಾವು ಸಿಂಗಾರಗೊಳ್ಳುವುದರಿಂದ ಹಿಡಿದು ನಿಮ್ಮ ಮನೆಯನ್ನು ಸಹ ಅಲಂಕರಿಸುತ್ತೇವೆ. ಅದರಲ್ಲಿ ಪ್ರಮುಖವಾಗಿ ಮನೆಯ ಬಾಗಿಲಿಗೆ ನಾವು ಮಾವಿನ ಎಲೆಯ ತೋರಣವನ್ನು ಕಟ್ಟುತ್ತೇವೆ. ಈ ಮಾವಿನ ಎಲೆಯ ತೋರಣ ಇಲ್ಲವಾದರೆ ಮನೆಯ ಅಲಂಕಾರ ಅಪೂರ್ಣವೆಂದೇ ಹೇಳಬೇಕು. ಆದರೆ ಕಾಲ ಬದಲಾದಂತೆಲ್ಲಾ ಪ್ಲಾಸ್ಟಿಕ್ (plastic) ತೋರಣಗಳ ಬಳಕೆ ಹೆಚ್ಚಾಗಿದೆ. ಈ ಪ್ಲಾಸ್ಟಿಕ್ ತೋರಣ ಮನೆಯ ಅಲಂಕರವನ್ನು ಹೆಚ್ಚಿಸಬಹುದೇ ಹೊರತು ಅದರ ಪ್ರಭಾವ ತಿಳಿಯುವುದಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣವನ್ನು ಕಟ್ಟುವುದರಿಂದ ಶುಭ ಕಾರ್ಯಗಳು ಅತ್ಯಂತ ಸುಗಮವಾಗಿ ನಡೆಯುತ್ತವೆ. ಯಾವುದೇ ರೀತಿಯ ದುಷ್ಟ ಅಥವಾ ನಕಾರಾತ್ಮಕ ಶಕ್ತಿಗಳಿಂದ ತೊಂದರೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗ ಈ ತೋರಣದ ಕುರಿತಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ಜ್ಯೋತಿಷ್ಯ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.