ಎರಡನೇ ಬಾರಿ ಕಿವಿ ಚುಚ್ಚಿಸಿಕೊಂಡು, ಅನುಭವ ಹಂಚಿಕೊಂಡ ನಿವೇದಿತಾ ಗೌಡ

ಎರಡನೇ ಬಾರಿ ಕಿವಿ ಚುಚ್ಚಿಸಿಕೊಂಡು, ಅನುಭವ ಹಂಚಿಕೊಂಡ ನಿವೇದಿತಾ ಗೌಡ

ರಾಜೇಶ್ ದುಗ್ಗುಮನೆ
|

Updated on: Apr 25, 2024 | 8:14 AM

ನಿವೇದಿತಾ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಈಗ ಕಿವಿಗೆ ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ನೋವಿನಿಂದ ನರಳಿದ್ದಾರೆ. ಆದರೆ, ಅಂದುಕೊಂಡಷ್ಟು ನೋವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ನಿವೇದಿತಾ ಗೌಡ.

ನಿವೇದಿತಾ ಗೌಡ (Niveditha Gowda) ಅವರು ಟಿಕ್​ ಟಾಕ್​ ಮಾಡಿ, ರೀಲ್ಸ್ ಮಾಡಿ ಫೇಮಸ್ ಆದವರು. ಅವರು ‘ಬಿಗ್ ಬಾಸ್ ಕನ್ನಡ’ಕ್ಕೆ ಎಂಟ್ರಿ ಕೊಟ್ಟು ಫೇಮಸ್ ಆದರು. ಆ ಬಳಿಕ ಚಂದನ್ ಶೆಟ್ಟಿ ಜೊತೆಗಿನ ಲವ್​​ಸ್ಟೋರಿ ಕಾರಣಕ್ಕೂ ಸುದ್ದಿ ಆದರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಈಗ ಕಿವಿಗೆ ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ನೋವಿನಿಂದ ನರಳಿದ್ದಾರೆ. ಆದರೆ, ಅಂದುಕೊಂಡಷ್ಟು ನೋವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ನಿವೇದಿತಾ ಗೌಡ. ‘ಎರಡನೇ ಬಾರಿಗೆ ಕಿವಿ ಚುಚ್ಚಿಸಿಕೊಳ್ಳುವ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ. ನಾನು ತುಂಬಾ ಹೆದರುತ್ತಿದ್ದೆ. ಏನನ್ನಿಸಿತೋ ಏನೋ ನಾನು ಅದನ್ನು ಮಾಡಲು ಯೋಚಿಸಿದೆ. ನನಗೆ ತುಂಬಾ ಸಂತೋಷವಾಗಿದೆ. ನಿರೀಕ್ಷಿಸದ್ದಷ್ಟು ನೋವಾಗಿಲ್ಲ’ ಎಂದು ಬರೆದುಕೊಂಡಿದ್ದಾರೆ ನಿವೇದಿತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.