ಗಮನ ಸೆಳೆಯಿತು ನಿವೇದಿತಾ ಗೌಡ ಮಿರರ್ ಸೆಲ್ಫಿ; ಫ್ಯಾನ್ಸ್ ಗಮನ ಹೋಗಿದ್ದು ಯಾವುದರ ಮೇಲೆ?
ನಿವೇದಿತಾ ಹಂಚಿಕೊಂಡಿರೋ ಫೋಟೋ ನೋಡಿದ ಫ್ಯಾನ್ಸ್ ಗಮನ ಅವರ ಬಟ್ಟೆಯ ಮೇಲೆ ಹೋಗಿದೆ. ನಿವೇದಿತಾ ಅವರು ಸರಿಯಾಗಿ ಬಟ್ಟೆ ಧರಿಸಬೇಕು ಎಂದು ನೀತಿ ಪಾಠ ಹೇಳುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ.
Updated on: Apr 22, 2024 | 11:32 AM

ನಿವೇದಿತಾ ಗೌಡ ಅವರ ಹೊಸ ಫೋಟೋ ವೈರಲ್ ಆಗಿದೆ. ಮಿರರ್ ಎದುರು ನಿಂತು ಅವರು ಸೆಲ್ಫಿ ತೆಗೆದುಕೊಂಡಿದ್ದಾರೆ. ಅವರ ಫೋಟೋಗೆ ಸಾವಿರಾರು ಲೈಕ್ಸ್ ಸಿಕ್ಕಿದೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್ ಬಂದಿದೆ.

ನಿವೇದಿತಾ ಗೌಡ ಅವರು ಈ ರೀತಿಯ ಫೋಟೋ ಹಾಗೂ ರೀಲ್ಸ್ಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಈಗ ನಿವೇದಿತಾ ಹಂಚಿಕೊಂಡಿರೋ ಫೋಟೋ ನೋಡಿದ ಫ್ಯಾನ್ಸ್ ಗಮನ ಅವರ ಬಟ್ಟೆಯ ಮೇಲೆ ಹೋಗಿದೆ. ನಿವೇದಿತಾ ಅವರು ಸರಿಯಾಗಿ ಬಟ್ಟೆ ಧರಿಸಬೇಕು ಎಂದು ನೀತಿ ಪಾಠ ಹೇಳುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ.

ಇದಕ್ಕೆಲ್ಲ ನಿವೇದಿತಾ ಗೌಡ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅವರು ಈ ರೀತಿಯ ಟ್ರೋಲ್ಗಳಿಗೆ ಉತ್ತರಿಸೋ ಗೋಜಿಗೆ ಹೋಗಿಲ್ಲ. ಹೀಗಾಗಿ, ಅವರು ಸೈಲೆಂಟ್ ಆಗಿದ್ದಾರೆ.

ನಿವೇದಿತಾ ಗೌಡ ಅವರು ಬಿಗ್ ಬಾಸ್ಗೆ ಹೋಗಿ ಗಮನ ಸೆಳೆದರು. ಆ ಬಳಿಕ ಅವರು ಚಂದನ್ ಶೆಟ್ಟಿ ಅವರನ್ನು ಮದುವೆ ಆದರು. ಈಗ ಚಂದನ್ ಶೆಟ್ಟಿ-ನಿವೇದಿತಾ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ.

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



