3 ದಿನ ಮದ್ಯದಂಗಡಿ ಬಂದ್: ಖರೀದಿಗೆ ಓಡೋಡಿ ಬಂದ್ರೂ ಎಣ್ಣೆ ಸಿಗ್ಲಿಲ್ಲ, ನಿರಾಸೆಗೊಂಡ ಮದ್ಯಪ್ರಿಯರು
ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ, ಹೀಗಾಗಿ ಇಂದು (ಏಪ್ರಿಲ್ 24) ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ಇಂದಿನಿಂದ (ಏಪ್ರಿಲ್ 24) ಏ.26ರ ವರೆಗೆ 14 ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು, ಸಂಜೆ ಬಾರ್ಗಳು ಬಂದ್ ಆಗುವ ಸಮಯ ಹತ್ತಿರ ಆಗ್ತಿದ್ದಂತೆ ಮದ್ಯ ಪ್ರಿಯರು ಓಡೋಡಿ ಬಂದು ಮೂರು ದಿನಕ್ಕೆ ಆಗವಷ್ಟು ಮದ್ಯ ಖರೀದಿಗೆ ಮುಗಿಬಿದಿದ್ರು.
ಬೆಂಗಳೂರು, ಏಪ್ರಿಲ್ 24): ಕರ್ನಾಟಕದಲ್ಲಿ (Karnataka) ಮೊದಲ ಹಂತದ (ದೇಶದ 2ನೇ ಹಂತ) ಲೋಕಸಭಾ (Loksabha Elections 2024) ಸಮರದ ಅಬ್ಬರ ಬಹಿರಂಗ ಪ್ರಚಾರಕ್ಕೆ ಇಂದು (ಏಪ್ರಿಲ್ 24) ತೆರೆ ಬಿದ್ದಿದೆ. ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ, ಹೀಗಾಗಿ ಇಂದು (ಏಪ್ರಿಲ್ 24) ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ಇಂದಿನಿಂದ (ಏಪ್ರಿಲ್ 24) ಏ.26ರ ವರೆಗೆ 14 ಜಿಲ್ಲೆಗಳಲ್ಲಿ ಮದ್ಯ ಮಾರಾಟ (Liquor) ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯಿಂದಲೇ ಲಿಕ್ಕರ್ ಶಾಪ್ಗಳು ಕ್ಲೋಸ್ ಆಗಿದ್ದು, ಶುಕ್ರವಾರದ ತನಕ ಮದ್ಯ ಮಾರಂಗಿಲ್ಲ. ಇನ್ನು, ಸಂಜೆ ಬಾರ್ಗಳು ಬಂದ್ ಆಗುವ ಸಮಯ ಹತ್ತಿರ ಆಗ್ತಿದ್ದಂತೆ ಮದ್ಯ ಪ್ರಿಯರು ಓಡೋಡಿ ಬಂದು ಮೂರು ದಿನಕ್ಕೆ ಆಗವಷ್ಟು ಮದ್ಯ ಖರೀದಿಗೆ ಮುಗಿಬಿದಿದ್ರು. ಇನ್ನು ಕೆಲವರು ಓಡೋಡಿ ಬಂದರೂ ಸಹ ಮದ್ಯ ಸಿಗದಿದ್ದಕ್ಕೆ ನಿರಾಸೆಗೊಂಡಿದ್ದಾರೆ.
Latest Videos