2021-22ರಲ್ಲಿ ಭಾರತಕ್ಕೆ ಬರುವಂಥ 10 ಲಕ್ಷ ರೂಪಾಯಿಯೊಳಗಿನ ಕಾಂಪ್ಯಾಕ್ಟ್ ಕಾರುಗಳಿವು

|

Updated on: May 20, 2021 | 6:46 PM

Cars Under 10 Lakhs: ಭಾರತದಲ್ಲಿ 2021- 2022ರಲ್ಲಿ ಬರಲಿರುವ ರೂ. 10 ಲಕ್ಷದೊಳಗಿನ ಕಾಂಪ್ಯಾಕ್ಟ್ ಕಾರುಗಳಿವು. ಇವುಗಳ ಫೀಚರ್ ಆಕರ್ಷಕವಾಗಿವೆ.

2021-22ರಲ್ಲಿ ಭಾರತಕ್ಕೆ ಬರುವಂಥ 10 ಲಕ್ಷ ರೂಪಾಯಿಯೊಳಗಿನ ಕಾಂಪ್ಯಾಕ್ಟ್ ಕಾರುಗಳಿವು
ಸಾಂದರ್ಭಿಕ ಚಿತ್ರ
Follow us on

ಪೆಟ್ರೋಲ್​- ಡೀಸೆಲ್ ಎರಡೂ ಪರಮ ದುಬಾರಿಯಾಗಿ ಯಾವುದೋ ಕಾಲವಾಯಿತು. ಈ ಹಿಂದೆಲ್ಲ ಅಲ್ಲೊಂದು- ಇಲ್ಲೊಂದು ಅನ್ನೋ ಹಾಗೆ ಎಲೆಕ್ಟ್ರಿಕ್ ಸ್ಕೂಟರ್ ಕಾಣಿಸಿಕೊಳ್ಳುತ್ತಿತ್ತು. ಈಗ ಹೇಗಾಗಿದೆ ಅಂದರೆ ಎಲೆಕ್ಟ್ರಿಕ್ ಸ್ಕೂಟರ್​ಗೆ ಭರ್ಜರಿ ಮಾರ್ಕೆಟ್ ಸೃಷ್ಟಿಯಾಗುತ್ತಿದೆ. ಹಾಗಂತ ಪೆಟ್ರೋಲ್- ಡೀಸೆಲ್ ಕಾರು ಮಾರಾಟ ಹಿಂದುಳಿದಿದೆಯಾ? ಖಂಡಿತಾ ಇಲ್ಲ. ಭಾರತದಲ್ಲಿ ಮುಂಬರುವ ದಿನಗಳಲ್ಲಿ 10 ಲಕ್ಷ ರೂಪಾಯಿಯೊಳಗೆ ಬರುವಂಥ ಕಾಂಪ್ಯಾಕ್ಟ್ ಕಾರುಗಳ ಪಟ್ಟಿಯೊಂದು ನಿಮ್ಮೆದುರಿಗೆ ಇದೆ.

CITROEN C3 ಕಾಂಪ್ಯಾಕ್ಟ್ ಎಸ್​ಯುವಿ
CITROENನಿಂದ ನಾಲ್ಕು ಮೀಟರ್​ನ ಎಸ್​ಯುವಿ ಬಿಡುಗಡೆ ಮಾಡಲಾಗುವುದು. ಇದು 2021ರ ಕೊನೆಗೆ ಭಾರತೀಯ ಮಾರುಕಟ್ಟೆಗೆ ಬರಬಹುದು. ಅಂದ ಹಾಗೆ ಈ ಎಸ್​ಯುವಿ ಹೊಸ ಸಿಎಂಪಿ ಪ್ಲಾಟ್​ಫಾರ್ಮ್​ ಮೇಲೆ ಆಧಾರಪಟ್ಟಿರುತ್ತದೆ. ರೆನೋ ಕೈಗರ್, ನಿಸಾನ್ ಮ್ಯಾಗ್ನೈಟ್ ಮತ್ತಿತರ ವಾಹನಗಳಿಗೆ ವಿರುದ್ಧವಾಗಿ ಈ ಮಾಡೆಲ್ ನಿಲ್ಲಲಿದೆ. ಇದು ಬಹುಶಃ ಭಾರತದ ಮೊದಲ ಫ್ಲೆಕ್ಸಿಫ್ಯುಯೆಲ್ ಮಾಡೆಲ್ ಆಗಲಿದೆ. 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜತೆಗೆ ಎಥನಾಲ್ ಕೂಡ ಇದೆ. ಇದು 118 ಬಿಎಚ್​ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮಾಮೂಲಿ ಮಾಡೆಲ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಜತೆಗೆ ಬರುತ್ತದೆ.ಅದು 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು DCT (ಡ್ಯುಯಲ್ ಕ್ಲಚ್ ಟ್ರಾನ್ಸ್​ಮಿಷನ್) ಆಟೋಮೆಟಿಕ್ ಗೇರ್​ ಬಾಕ್ಸ್ ಜತೆ ಬರುತ್ತದೆ.

Nexr- Gen ಮಾರುತಿ ವಿಟಾರಾ ಬ್ರೆಜಾ
ಮಾರುತಿ ಸುಜುಕಿಯಿಂದ 2021ರ ಕೊನೆಗೆ ಮುಂದಿನ ತಲೆಮಾರಿನ ಬ್ರೆಜಾ ಬಿಡುಗಡೆ ಮಾಡಲಾಗುತ್ತದೆ. ಈ ಹೊಸ ಮಾಡಲ್ HEARTECT ಪ್ಲಾಟ್​ಫಾರ್ಮ್ ಅತ್ಯಾಧುನಿಕ ವರ್ಷನ್ ಮೇಲೆ ಆಧಾರವಾಗಿದೆ. ಮೇಲ್ದರ್ಜೆಗೇರಿದ ಇನ್ಫೋಟೇನ್​ಮೆಂಟ್ ಸಿಸ್ಟಮ್, ಡಿಜಿಟಲ್ ಇನ್​ಸ್ಟ್ರುಮೆಂಟ್ ಕನ್​ಸೋಲ್, ಆಟೋಮೆಟಿಕ್ ಏಸಿ, ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್​ರೂಫ್​ನಂಥ ಫೀಚರ್​ನೊಂದಿಗೆ ಬರುತ್ತದೆ. ಈ ಎಸ್​ಯುವಿ 1.5 ಲೀಟರ್ ಪ್ರಬಲ ಮಧ್ಯಮ- ಹೈಬ್ರಿಡ್ ಸಿಸ್ಟಮ್ ಜತೆಗೆ ಬರುತ್ತದೆ. ಟ್ರಾನ್ಸ್​ಮಿಷನ್ ಆಯ್ಕೆಯು 6- ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್​ಮಿಷನ್ ಮತ್ತು 6- ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್​ಮಿಷನ್​ನೊಂದಿಗೆ ಬರುತ್ತದೆ.

Nexr- Gen ಮಾರುತಿ ಸೆಲೆರಿಯೋ
ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೋ 2021ರ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು. ಅದೀಗ ಮೂರನೇ ತ್ರೈಮಾಸಿಕಕ್ಕೆ ಮುಂದಕ್ಕೆ ಹೋಗಿದೆ. ಇದು ಕೂಡ HEARTECT ಪ್ಲಾಟ್​ಫಾರ್ಮ್​ನೊಂದಿಗೆ ಬರುತ್ತದೆ. ಎರಡು ಬಗೆಯ ಎಂಜಿನ್​ ಆಯ್ಕೆಯೊಂದಿಗೆ ಬರುವ ಸಾಧ್ಯತೆ ಇದೆ. 1.2 ಲೀಟರ್- 4 ಸಿಲಿಂಡರ್ ಪೆಟ್ರೋಲ್ ಮತ್ತು 1.0 ಲೀಟರ್- 3 ಸಿಲಿಂಡರ್ ಪೆಟ್ರೋಲ್ ಹೀಗೆ ಎರಡಿದೆ. ಟ್ರಾನ್ಸ್​ಮಿಷನ್ ಆಯ್ಕೆಯಲ್ಲಿ 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು ಎಎಂಟಿ ಆಯ್ಕೆಗಳಿವೆ.

Nexr- Gen ಆಲ್ಟೋ
ಈ ವರ್ಷಕ್ಕೆ ಮಾರುತಿಯಿಂದ ಮುಂದಿನ ತಲೆಮಾರಿನ ಆಲ್ಟೋ ಬಿಡುಗಡೆ ಆಗಲಿದೆ. ಜಪಾನ್ ಮಾಧ್ಯಮಗಳ ಪ್ರಕಾರ, ಹೊಸ ಸುಜುಕಿ ಆಲ್ಟೋ ಹಗುರ ತೂಕದ HEARTECT ಪ್ಲಾಟ್​ಫಾರ್ಮ್ ಬದಲಾವಣೆಯ ವರ್ಷನ್ ಆಗಿರುತ್ತದೆ. ಈಗಿರುವ ಮಾಡೆಲ್​ಗಿಂತ ಹಗುರವಾಗಿ ಇರಲಿದೆ. ಪವರ್ ಟು ವೇಯ್ಟ್ ರೇಷಿಯೋ ಉತ್ತಮವಾಗಿ ಇರಲದೆ. ಭಾರತದಲ್ಲಿ ವೈಶಿಷ್ಟ್ಯಕ್ಕೆ ಬಂದರೆ ಹೊಸ ಸುಜುಕಿ ಆಲ್ಟೋ 800ನಲ್ಲಿ ಈಗಿರುವ 796 ಸಿಸಿ ಪೆಟ್ರೋಲ್ ಎಂಜಿನ್​ನನ್ನೇ ಬಳಸಲಾಗುತ್ತದೆ. ಅದು 48 ಬಿಎಚ್​ಪಿ ಮತ್ತು 69ಎನ್​ಎಂ ಟಾರ್ಕ್ ಸೃಷ್ಟಿಸುತ್ತದೆ. ಈ ಎಂಜಿನ್​ನಲ್ಲಿ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಇರಲಿದೆ. ಮ್ಯಾನ್ಯುಯೆಲ್ ಮತ್ತು ಆಟೋಮೆಟಿಕ್ ಎರಡೂ ಟ್ರಾನ್ಸ್​ಮಿಷನ್ ಇರುತ್ತದೆ.

ಹುಂಡೈ AX1
ಕೋಡ್​ ಹೆಸರು AX1 ಜತೆಗೆ ಸೇರಿ ಹುಂಡೈನಿಂದ ಹೊಸ ಮೈಕ್ರೋ ಎಸ್​ಯುವಿ ಬಿಡುಗಡೆ ಆಗಲಿದೆ. 2022ರ ಮೊದಲಾರ್ಧದಲ್ಲಿ ಭಾರತದ ಮಾರುಕಟ್ಟೆಗೆ ಬರಬಹುದು. ಟಾಟಾ ಎಚ್​ಬಿಎಕ್ಸ್, ಮಾರುತಿ ಸುಜುಕಿ ಇಗ್ನೀಸ್, ಮಹೀಂದ್ರಾ ಕೆಯುವಿ100 ಎನ್​ಎಕ್ಸ್​ಟಿ ಇಂತವುಗಳಿಗೆ ಸಡ್ಡು ಹೊಡೆಯಲು ಬರುತ್ತಿದೆ. ಗ್ರಾಂಡ್​ i10 ನಿಯೋಸ್​ನಲ್ಲಿ ಕೆ1 ಪ್ಲಾಟ್​ಫಾರ್ಮ್ ಅನ್ನು AX1ನಲ್ಲೂ ಬಳಸುವ ಸಾಧ್ಯತೆ ಇದೆ. 68 bhp ಮತ್ತು 96 Nm ಟಾರ್ಕ್​ನೊಂದಿಗೆ ಬರುತ್ತದೆ. ಟ್ರಾನ್ಸ್​ಮಿಷನ್ ಆಯ್ಕೆಯಲ್ಲಿ 5- ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಎಎಂಟಿ ಬರುತ್ತದೆ. ಇದರ ಜತೆಗೆ ಕಂಪೆನಿಯಿಂದ 82 ಬಿಎಚ್​ಪಿ, 1.2 ಲೀಟರ್ ಪೆಟ್ರೋಲ್ ಎಂಜಿನ್ ಕೂಡ ಸೇರ್ಪಡೆ ಆಗಲಿದೆ. ಸದ್ಯಕ್ಕೆ ಗ್ರಾಂಡ್ i10 ನಿಯೋಸ್​ನಲ್ಲಿ ಬಳಕೆ ಆಗುತ್ತಿರುವುದು ಇದೇ ಎಂಜಿನ್.

ಮಾರುತಿ ಜಿಮ್ನಿ
ಮಾರುತಿಯಿಂದ 5 ಡೋರ್​ಗಳ ಆಫ್​ರೋಡ್ ವರ್ಷನ್ ಜಿಮ್ನಿ ಬಿಡುಗಡೆಗೂ ಕೆಲಸ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ 2022ರ ಆರಂಭದಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 300ಎಂಎಂ ದೊಡ್ಡದಾದ ವ್ಹೀಲ್​ಬೇಸ್​ ಇರುವ ವಾಹ ಇದೆ. ಉದ್ದವನ್ನು 300ಎಂಎಂ ಹೆಚ್ಚಿಸಲಾಗಿದೆ. ಈ ಹೊಸ ಮಾಡೆಲ್ ಬೆಲೆಯನ್ನು 10 ಲಕ್ಷ ರೂಪಾಯಿಯೊಳಗೆ ಇಡುವುದಕ್ಕೆ ಮಾರುತಿ ಗುರಿ ಹಾಕಿಕೊಂಡಿದೆ ಎನ್ನಲಾಗಿದೆ. ಹೊಸ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಜತೆಗೆ ಮ್ಯಾನ್ಯುಯೆಲ್ ಮತ್ತು ಆಟೋಮೆಟಿಕ್ ಗೇರ್ ಬಾಕ್ಸ್ ಜತೆಗೆ ಬರುತ್ತದೆ ಎನ್ನಲಾಗುತ್ತಿದೆ. ಭಾರತದ ಮಾಡೆಲ್ ಹೊಸ 1.5 ಲೀಟರ್ ಎನ್​ಎ ಪೆಟ್ರೋಲ್ ಎಂಜಿನ್ ಜತೆಗೆ ಬರುತ್ತದೆ.

ಟಾಟಾ ಎಚ್​ಬಿಎಕ್ಸ್
ಟಾಟಾ ಮೋಟಾರ್ಸ್​ನಿಂದ 2021ರ ಅಕ್ಟೋಬರ್ ಹೊತ್ತಿಗೆ ಪ್ರೊಡಕ್ಷನ್ ವರ್ಷನ್​ನ ಎಚ್​ಬಿಎಕ್ಸ್​ ಮೈಕ್ರೋ ಎಸ್​ಯುವಿ ಬಿಡುಗಡೆ ಆಗಲಿದೆ. ಇದನ್ನು ಟಾಟಾ ಟಿಮೆರೊ ಎಂದು ಕರೆಯುವ ಸಾಧ್ಯತೆ ಇದೆ. ಮಾರುತಿಯ ಇಗ್ನೀಸ್ ಹಾಗೂ ಮಹೀಂದ್ರಾದ ಕೆಯುವಿ100ಎನ್​ಎಕ್ಸ್​ಟಿಗೆ ಪ್ರತಿಸ್ಪರ್ಧಿ ಆಗಲಿದೆ. ALFA ಮಾಡ್ಯುಲಾರ್ ಪ್ಲಾಟ್​ಫಾರ್ಮ್​ನಲ್ಲಿ ಇದು ಅಲ್ಟ್ರೋಜ್ ನಂತರ ಎರಡನೇ ಮಾಡೆಲ್. 1.2 ಲೀಟರ್, 3 ಸಿಲಿಂಡರ್​ ಪೆಟ್ರೋಲ್ ಎಂಜಿನ್. 86 ಬಿಎಚ್​ಪಿ ಪವರ್ ಮತ್ತು 113 ಎನ್​ಎಂ ಟಾರ್ಕ್ ಸೃಷ್ಟಿಸಬಲ್ಲದು. ಈ ಸಣ್ಣ ಯುವಿ 1.2 ಲೀಟರ್ ಟರ್ಬೋ ಚಾರ್ಜ್ಡ್​ ಪೆಟ್ರೋಲ್ ಎಂಜಿನ್ 100 ಬಿಎಚ್​ಪಿ ಔಟ್​ಪುಟ್​ನೊಂದಿಗೆ ಬರುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು 5- ಸ್ಪೀಡ್ ಆಟೋಮೆಟೆಡ್ ಮ್ಯಾನ್ಯುಯೆಲ್ ಟ್ರಾನ್ಸ್​ಮಿಷನ್ ಇದೆ.

ಮಹೀಂದ್ರಾ ಟಿಯುವಿ300 ಫೇಸ್​ಲಿಫ್ಟ್ (ಬೊಲೆರೋ ನಿಯೋ)
ಮಹೀಂದ್ರಾದಿಂದ ಟಿಯುವಿ300 ಫೇಸ್​ಲಿಫ್ಟ್​ ಅನ್ನು ಬೇರೆ ಹೆಸರಿನಿಂದ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಅದನ್ನು ಮಹೀಂದ್ರಾ ಬೊಲೆರೊ ನಿಯೋ ಎಂದು ಕರೆಯುವ ಸಾಧ್ಯತೆ ಇದೆ. ಹಳೆ ಟಿಯುವಿ300 ರೀತಿಯಲ್ಲೇ ಮಹೀಂದ್ರಾ ಬೊಲೆರೋ ನಿಯೋ ಕೂಡ ಇರಲಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಇರಲಿದ್ದು, ಬಿಎಸ್​6 ಎಮಿಷನ್​ ಕೂಡ ಅಳವಡಿಕೆ ಆಗಿರುತ್ತದೆ. ಅಂದಹಾಗೆ ಇದು ಬಿಎಸ್​4 ಇದ್ದಾಗ 100 ಬಿಎಚ್​ಪಿ ಮತ್ತು 240ಎನ್​ಎಂ ಟಾರ್ಕ್ ಸೃಷ್ಟಿಸುತ್ತಿತ್ತು. ಟ್ರಾನ್ಸ್​ಮಿಷನ್ 5- ಸ್ಪೀಡ್ ಮ್ಯಾನ್ಯುಯೆಲ್ ಮತ್ತು ಎಎಂಟಿ ಇರಲಿದೆ.

ಇದನ್ನೂ ಓದಿ: Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು

( Here are some of the cars within Rs 10 lakhs expected to be launch in India during 2021 and 2022)