Updated on: Aug 26, 2021 | 8:48 PM
eBikeGo ಕಂಪೆನಿಯು ಭಾರತೀಯ ಮಾರುಕಟ್ಟೆಗೆ ರಗಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಜಿ 1 ಮತ್ತು ಜಿ 1+ ಹೆಸರಿನ ಈ ಸ್ಕೂಟರ್ಗಳು ಫೇಮ್ II ಸಬ್ಸಿಡಿಯನ್ನು ಒಳಗೊಂಡಿರುವುದು ವಿಶೇಷ. ಹಾಗೆಯೇ ರಾಜ್ಯ ಮಟ್ಟದ ಸಬ್ಸಿಡಿ ದೊರೆತರೆ, ಈ ಸ್ಕೂಟರ್ ಕಡಿಮೆ ಬೆಲೆಗೆ ಗ್ರಾಹಕರ ಕೈಗೆಟುಕಲಿದೆ ಎಂದು ಕಂಪೆನಿ ತಿಳಿಸಿದೆ.
ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು 2 kWh ಬ್ಯಾಟರಿಗಳನ್ನು ಹೊಂದಿದ್ದು, ಈ ಬ್ಯಾಟರಿಯನ್ನು 3.5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದು. ಇದರಲ್ಲಿ 3kW ಮೋಟಾರ್ ನೀಡಲಾಗಿದ್ದು, ಇದನ್ನು 70 kmph ಗರಿಷ್ಠ ವೇಗದವರೆಗೆ ಚಲಾಯಿಸಬಹುದು.
ರಗಡ್ ಎಲೆಕ್ಟ್ರಿಕ್ ಸ್ಕೂಟರ್ 30 ಲೀಟರ್ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು, ಅದರ ಜೊತೆಗೆ ಆ್ಯಂಟಿ ಥೆಫ್ಟ್ ವೈಶಿಷ್ಟ್ಯವನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೇ, ಇ-ಸ್ಕೂಟರ್ ಅನ್ನು ರಿಮೋಟ್ ಅನ್‌ಲಾಕ್ ಮಾಡಲು ಮತ್ತು ಚಾಲನೆ ಮಾಡಲು ರಗಡ್ ಆಪ್ ಅನ್ನು ಬಳಸಬಹುದು.
ಈ ಸ್ಕೂಟರ್ ಕೂಡ 12 ಸೆನ್ಸರ್‌ಗಳನ್ನು ಹೊಂದಿದೆ. 4G, BLE, CAN ಬಸ್, GPS/IRNSS,ಸೀರಿಯಲ್ ಪೋರ್ಟ್‌ಗಳು ಮತ್ತು ಸಮಗ್ರ ಮಾಡ್ಯುಲರ್ ಸೆನ್ಸರ್ ಸೂಟ್‌ನೊಂದಿಗೆ, ಇದು ವಿಶ್ವದ ಅತ್ಯಂತ ಮುಂದುವರಿದ 2W IoT ಸಿಸ್ಟಮ್ ಹೊಂದಿರುವ ಸ್ಕೂಟರ್ ಎಂದು ಹೇಳಿಕೊಂಡಿದೆ.
ಭಾರತದಲ್ಲಿ ನಿರ್ಮಾಣವಾಗಿರುವ ebikeGo ತನ್ನ ಹೆಸರಿನಂತೆ ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶದ ರಸ್ತೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿದೆ. ಕಂಪನಿಯು ತನ್ನ ಕ್ಲೇಮ್ ಅನ್ನು ಬ್ಯಾಕಪ್ ಮಾಡಲು ಚಾಸಿಸ್ ಮೇಲೆ ಏಳು ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ.
ಈ ವಿದ್ಯುತ್ ಚಾಲಿತ್ ಸ್ಕೂಟರ್ನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 160 ಕಿಮೀ ವ್ಯಾಪ್ತಿಯವರೆಗೆ ಚಲಾಯಿಸಬಹುದು ಎಂದು eBikeGo ಹೇಳಿಕೊಂಡಿದೆ.
ಅಂದಹಾಗೆ ಈ ಸ್ಕೂಟರ್ನ G1 ಮಾಡೆಲ್ ಬೆಲೆ 79,999 ರೂ. ಮತ್ತು G1+ 99,999 ರೂ. ಆಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ರಾಜ್ಯ ಮಟ್ಟದ ಸಬ್ಸಿಡಿ ದೊರೆತರೆ, ಸ್ಕೂಟರ್ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.