Tata Power- HPCL Partnership: ಟಾಟಾ ಪವರ್ ಹಾಗೂ ಎಚ್​ಪಿಸಿಎಲ್​ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್

| Updated By: Srinivas Mata

Updated on: Jul 17, 2021 | 11:13 PM

ಎಚ್​ಪಿಸಿಎಲ್​ನದು 18,000 ರೀಟೇಲ್ ಔಟ್​ಲೆಟ್​ಗಳಿವೆ. ದೇಶದ ಪ್ರಮುಖ ನಗರಗಳು ಹಾಗೂ ಮುಖ್ಯ ಹೆದ್ದಾರಿಗಳಲ್ಲಿ ಇರುವ ಸಾರ್ವಜನಿಕ ಸ್ವಾಮ್ಯದ ರೀಟೇಲ್ ಔಟ್​ಲೆಟ್​ಗಳಲ್ಲಿ ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಸ್ಟೇಷನ್​ಗಳನ್ನು ಆರಂಭಿಸಲು ಟಾಟಾ ಪವರ್ ಜತೆಯಾಗುತ್ತಿದೆ.

Tata Power- HPCL Partnership: ಟಾಟಾ ಪವರ್ ಹಾಗೂ ಎಚ್​ಪಿಸಿಎಲ್​ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್
ಪ್ರಾತಿನಿಧಿಕ ಚಿತ್ರ
Follow us on

ದೇಶದ ಪ್ರಮುಖ ನಗರಗಳು ಹಾಗೂ ಮುಖ್ಯ ಹೆದ್ದಾರಿಗಳಲ್ಲಿ ಇರುವ ಸಾರ್ವಜನಿಕ ಸ್ವಾಮ್ಯದ ರೀಟೇಲ್ ಔಟ್​ಲೆಟ್​ಗಳಲ್ಲಿ ಎಂಡ್-ಟು-ಎಂಡ್ ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜಿಂಗ್ ಸ್ಟೇಷನ್​ಗಳನ್ನು ಆರಂಭಿಸಲು ಟಾಟಾ ಪವರ್ ಕಂಪೆನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್​ಪಿಸಿಎಲ್​) ಜತೆಗೆ ಸಹಯೋಗ ವಹಿಸಲಿದೆ. ಎಲೆಕ್ಟ್ರಿಕ್ ಯುಟಿಲಿಟಿ ಕಂಪೆನಿಗಳ “ಇಝೆಡ್ ಚಾರ್ಜ್ ಮೊಬೈಲ್” ಪ್ಲಾಟ್​ಫಾರ್ಮ್​ ಮೂಲಕ ಚಾರ್ಜಿಂಗ್ ಮಾಡಲಾಗುತ್ತದೆ. ಕಂಪೆನಿಯು ಹೇಳಿಕೊಳ್ಳುವಂತೆ, ಗ್ರಾಹಕರಿಗೆ ತಡೆರಹಿತವಾದ ಅನುಭವವನ್ನು ದೊರಕಿಸುತ್ತದೆ.

ದೇಶದ ನಾನಾ ಎಚ್​ಪಿಸಿಸಿಎಲ್​ ಪೆಟ್ರೋಲ್​ ಬಂಕ್​ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್​ ಮಾಡಿಕೊಳ್ಳಲು ಅನುಕೂಲ ಆಗುವಂತೆ ಎಚ್​ಪಿಸಿಎಲ್​ ಜತೆಗೆ ಸಹಯೋಗ ವಹಿಸುತ್ತಿದ್ದೇವೆ ಎಂದು ಟಾಟಾ ಪವರ್ ಖಾತ್ರಿ ಮಾಡಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮಾಲೀಕರನ್ನು ವಾಹನ ಖರೀದಿಗೆ ಉತ್ತೇಜಿಸಿದಂತಾಗುತ್ತದೆ. ದೇಶದಾದ್ಯಂತ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡುವುದು ಹೆಚ್ಚಾಗುತ್ತದೆ ಎನ್ನಲಾಗಿದೆ.

ನಮ್ಮ ದೃಷ್ಟಿಕೋನವೂ ಆದ ಸುಸ್ಥಿರ ಸಂಚಾರವನ್ನು ಹಂಚಿಕೊಳ್ಳುವ ಎಚ್​ಪಿಸಿಎಲ್​ ಜತೆಗೆ ಸಹಭಾಗಿತ್ವ ವಹಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಈ ವ್ಯೂಹಾತ್ಮಕ ಸಹಭಾಗಿತ್ವವು ಎಚ್​ಪಿಸಿಎಲ್​ಗೆ ರೀಟೇಲ್ ಬೇಸ್, ಅದರಲ್ಲೂ ವಿಶೇಷವಾಗಿ ನಗರಗಳು ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ಒದಗಿಸುತ್ತದೆ ಎಂದು ಟಾಟಾ ಪವರ್ ಇವಿ ಚಾರ್ಜಿಂಗ್ ಪ್ರಮುಖರಾದ ಸಂದೀಪ್ ಬಂಗಿಯಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್​ (NEMMP) ತಕ್ಕಂತೆ ಈ ಸಹಭಾಗಿತ್ವ ಇದೆ ಎನ್ನಲಾಗುತ್ತಿದೆ.

ಎಚ್​ಪಿಸಿಎಲ್​ನದು 18,000 ರೀಟೇಲ್ ಔಟ್​ಲೆಟ್​ಗಳಿವೆ. ಈಗ ಟಾಟಾ ಪವರ್ ಕೂಡ ಈಗ ಜತೆಯಾಗುತ್ತಿದೆ. ಇದು ಎಲೆಕ್ಟ್ರಿಕ್ ಚಾರ್ಜಿಂಗ್ ಸೆಗ್ಮೆಂಟ್​ನಿಂದಾಗಿ ಇದರಿಂದಾಗಿ ಅಖಿಲ ಭಾರತ ಮಟ್ಟದ ಚಾರ್ಜಿಂಗ್ ಎಕೋಸಿಸ್ಟಮ್ ಮತ್ತು ಎಂಡ್-ಟು-ಎಂಡ್ ಸಲ್ಯೂಷನ್ಸ್ ಉತ್ತೇಜಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಎರಡು ತಿಂಗಳೊಳಗೆ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್​ಗಳ ಆರಂಭಿಸುವ ಯೋಜನೆ

(Electric vehicle charging stations will start throughout the country in Tata Power and HPCL collaboration. Here is the details)