ಫೋರ್ಡ್,​ ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ

| Updated By: Vinay Bhat

Updated on: Sep 20, 2021 | 12:09 PM

ವರದಿಯ ಪ್ರಕಾರ, ತಕಾಟ ಕಂಪೆನಿಯ ಏರ್ ಬ್ಯಾಗ್ ಸಮಸ್ಯೆಯಿಂದ ಈಗಾಗಲೇ 28 ಮಂದಿ ಸಾವನ್ನಪ್ಪಿದ್ದು, ನಾನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಫೋರ್ಡ್,​ ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ
vehicles
Follow us on

ಹೈ ಎಂಡ್ ಕಾರುಗಳಾದ ಫೋರ್ಡ್ (Ford),​ ಟೊಯೋಟಾ (Toyota), ಟೆಸ್ಲಾ (Tesla) ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಅಮೆರಿಕಾ ಆದೇಶ ಹೊರಡಿಸಿದೆ. ಈ ಕಾರುಗಳಿಗೆ ತಕಾಟ ಕಂಪೆನಿಯ ಏರ್ ಬ್ಯಾಗ್ (Air Bag) ಅನ್ನು ಅವಡಿಸಲಾಗಿದೆ. ಸದ್ಯ ಈ ಏರ್ ಬ್ಯಾಗ್​ನಲ್ಲಿ ಸಮಸ್ಯೆ ಇರುವುದು ಕಂಡುಬಂದಿದ್ದು, ಹೀಗಾಗಿ 3 ಕೋಟಿಗೂ ಅಧಿಕ ಕಾರುಗಳ ತನಿಖೆಗೆ ಅಮೆರಿಕಾದ (USE) ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ ಮಂಡಳಿ ಸೂಚನೆ ನೀಡಿದೆ.

ವರದಿಯ ಪ್ರಕಾರ, ತಕಾಟ ಕಂಪೆನಿಯ ಏರ್ ಬ್ಯಾಗ್ ಸಮಸ್ಯೆಯಿಂದ ಈಗಾಗಲೇ 28 ಮಂದಿ ಸಾವನ್ನಪ್ಪಿದ್ದು, ನಾನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ಸದ್ಯ ಇತರೆ ಕಂಪೆನಿಗಳ ಏರ್​ ಬ್ಯಾಗ್ ಬಗ್ಗೆಯೂ ತನಿಖೆ ಮಾಡುವಂತೆ ಸೂಚಿಸಲಾಗಿದೆ.

ಅಚ್ಚರಿ ಎಂದರೆ ಯಾವುದೇ ಕಾರು ತಯಾರಿಕಾ ಕಂಪನಿ ಈ ಬಗ್ಗೆ ಈವರೆಗೆ ಹೇಳಿಕೆ ನೀಡಿಲ್ಲ. ಕಳೆದ 10 ವರ್ಷಗಳಲ್ಲಿ ತಕಾಟಾದಿಂದ ಸುಮಾರು 67 ಮಿಲಿಯನ್ ಏರ್ ಬ್ಯಾಗ್ ಇನ್ಫ್ಲೇಟರ್‌ಗಳನ್ನು ಯುಎಸ್‌ನಲ್ಲಿ ಮಾತ್ರ ಮರುಪಡೆಯಲಾಗಿದೆ. ಪ್ರಪಂಚದಾದ್ಯಂತ ಅಂಕಿಅಂಶಗಳನ್ನು ಗಮನಿಸಿದರೆ ಇದರ ಸಂಖ್ಯೆ 100 ಮಿಲಿಯನ್ ದಾಟುತ್ತದೆ.

Electric vs Petrol: ಮೈಲೇಜ್, ತಾಳಿಕೆ, ಪವರ್: ಎಲೆಕ್ಟ್ರಿಕ್ vs ಪೆಟ್ರೋಲ್- ಯಾವುದು ಒಳ್ಳೇದು?

Ease Of Business Doing: ಉದ್ಯಮಿಸ್ನೇಹಿ ದೇಶಗಳ ಪಟ್ಟಿ ಇನ್ನು ಬಿಡುಗಡೆ ಇಲ್ಲ ಎಂದ ವಿಶ್ವಬ್ಯಾಂಕ್, ಮೇಡ್​ ಇನ್ ಚೈನಾ ಎಫೆಕ್ಟ್!

(ford to Toyota Tesla and more US opens probe into 30 million vehicles)

Published On - 12:07 pm, Mon, 20 September 21