Honda Amaze Facelift: ಹೊಸ ಅಮೇಜ್ ಪರಿಚಯಿಸಿದ ಹೋಂಡಾ: ಕಡಿಮೆ ಬೆಲೆಗೆ ಅತ್ಯುತ್ತಮ ಕಾರು
TV9 Web | Updated By: ಝಾಹಿರ್ ಯೂಸುಫ್
Updated on:
Aug 18, 2021 | 4:50 PM
Honda Amaze Facelift 2021: ಹೋಂಡಾ ಅಮೇಜ್ನ ಈ ಕಾರಿನಲ್ಲಿ ಹೊಸ ವಿನ್ಯಾಸದ ಗ್ರಿಲ್, ಪ್ರೊಜೆಕ್ಟರ್ ಲೆನ್ಸ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಹೊಸ ಸಿಗ್ನೇಚರ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸಿ-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ನೀಡಲಾಗಿದೆ.
1 / 8
ಹೋಂಡಾ ಕಾರ್ಸ್ ಇಂಡಿಯಾ (Honda Cars India) ಹೊಸ ಹೋಂಡಾ ಅಮೇಜ್ ಕಾರನ್ನು ಮತ್ತೊಮ್ಮೆ ಬಿಡುಗಡೆ ಮಾಡಿದೆ. ಈ ಹಿಂದಿನ ಅಮೇಜ್ ಕಾರಿಗೆ ಹೋಲಿಸಿದರೆ ಈ ಬಾರಿ ಕಂಪೆನಿಯು ಕಾರನ್ನು ಮತ್ತಷ್ಟು ಅಪ್‌ಗ್ರೇಡ್ ಮಾಡಿರುವುದು ವಿಶೇಷ. ನೂತನ ಮಾಡೆಲ್ನಲ್ಲಿ ವಿನ್ಯಾಸಕ್ಕೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರ ಹೊರತಾಗಿ, ವೈಶಿಷ್ಟ್ಯಗಳನ್ನು ಸಹ ಅಪ್‌ಗ್ರೇಡ್ ಮಾಡಲಾಗಿದೆ.
2 / 8
ಹೋಂಡಾ ಅಮೇಜ್ ಫೇಸ್ ಲಿಫ್ಟ್ ಮೂರು ಮಾಡೆಲ್ಗಳಲ್ಲಿ ಬಿಡುಗಡೆಯಾಗಿದ್ದು, ಅದರಂತೆ ಹೊಂಡಾ ಅಮೇಜ್ ಇ, ಹೊಂಡಾ ಅಮೇಜ್ ಎಸ್ ಮತ್ತು ಹೊಂಡಾ ಅಮೇಜ್ ವಿಎಕ್ಸ್ ಮಾದರಿಯಲ್ಲಿ ಕಾರುಗಳು ಲಭ್ಯವಿದೆ. ಇದಾಗ್ಯೂ ಎಲ್ಲಾ ಮೂರು ಮಾದರಿಯಲ್ಲೂ CVT (ಕನ್ಸಿಟೆನ್ಸಿ ವೇರಿಯಬಲ್ ಟ್ರಾನ್ಸ್‌ಮಿಷನ್) ಆಟೋಮ್ಯಾಟಿಕ್ ಆಯ್ಕೆ ನೀಡಲಾಗಿದೆ. ಪೆಟ್ರೋಲ್ ಆವೃತ್ತಿಯ ಎಸ್ ಮತ್ತು ವಿಎಕ್ಸ್ ರೂಪಾಂತರಗಳಲ್ಲಿ ಸಿವಿಟಿ ಆಟೋಮ್ಯಾಟಿಕ್ ಆಯ್ಕೆ ಇರಲಿದೆ. ಹಾಗೆಯೇ ವಿಎಕ್ಸ್ ಡೀಸೆಲ್‌ನಲ್ಲಿ ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯಿದೆ.
3 / 8
ಹೊರನೋಟ: 2021 ಹೋಂಡಾ ಅಮೇಜ್ನ ಈ ಕಾರಿನಲ್ಲಿ ಹೊಸ ವಿನ್ಯಾಸದ ಗ್ರಿಲ್, ಪ್ರೊಜೆಕ್ಟರ್ ಲೆನ್ಸ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಹೊಸ ಸಿಗ್ನೇಚರ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸಿ-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ನೀಡಲಾಗಿದೆ.
4 / 8
ಎಂಜಿನ್: ಹೋಂಡಾ ಅಮೇಜ್ನ ಎರಡು ಎಂಜಿನ್ ಆಯ್ಕೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಅದರಂತೆ ಗ್ರಾಹಕರಿಗೆ 1.2-ಲೀಟರ್ i-VTEC ಪೆಟ್ರೋಲ್ ಮತ್ತು 1.5-ಲೀಟರ್ i-DTEC ಡೀಸೆಲ್ ಇಂಜಿನ್ ಆಯ್ಕೆಗಳಿರಲಿವೆ.
5 / 8
ಕಾರ್ಯಕ್ಷಮತೆ: 1.2-ಲೀಟರ್ i-VTEC ಪೆಟ್ರೋಲ್ ಎಂಜಿನ್ 6000 rpm ನಲ್ಲಿ 90 PS ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಅದೇ ಸಮಯದಲ್ಲಿ, 1.5-ಲೀಟರ್ i-DTEC ಡೀಸೆಲ್ ಎಂಜಿನ್ 3600 rpm ನಲ್ಲಿ 80 PS ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.
6 / 8
ಮೈಲೇಜ್: 1.2-ಲೀಟರ್ i-VTEC ಪೆಟ್ರೋಲ್ ಎಂಜಿನ್ 18.6 kmpl ಮೈಲೇಜ್ ನೀಡಲಿದೆ. ಅದೇ ಸಮಯದಲ್ಲಿ, 1.5-ಲೀಟರ್ i-DTEC ಡೀಸೆಲ್ ಎಂಜಿನ್ ಕಾರಿನಲ್ಲಿ 24.7 kmpl ಮೈಲೇಜ್ ಸಿಗಲಿದೆ.
7 / 8
ಕಲರ್ ಆಯ್ಕೆಗಳು: ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಸೆಡಾನ್ ಅನ್ನು ಐದು ಬಣ್ಣಗಳಲ್ಲಿ ಪರಿಚಯಿಸಿದೆ. ಇವುಗಳಲ್ಲಿ ಮೆಟ್ರಾಯ್ಡ್ ಗ್ರೇ, ಪ್ಲಾಟಿನಂ ಪರ್ಲ್ ವೈಟ್, ರೇಡಿಯಂಟ್ ರೆಡ್, ಲೂನಾರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಸೇರಿವೆ.
8 / 8
ಬೆಲೆ: ಭಾರತೀಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 6.32 ಲಕ್ಷ ರೂ (ದೆಹಲಿ ಎಕ್ಸ್ ಶೋರೂಂ). ಇನ್ನು ವಿನ್ಯಾಸಕ್ಕೆ ಹಾಗೂ ಅಪ್ಗ್ರೇಡ್ಗೆ ಅನುಸಾರ ಈ ಕಾರನ್ನು 6.32 ಲಕ್ಷದಿಂದ 11.15 ಲಕ್ಷ ರೂ. ಒಳಗೆ ಖರೀದಿಸಬಹುದು.