Honda Scooter: ಅತೀ ಕಡಿಮೆ ಬೆಲೆಗೆ ಸಿಂಗಲ್ ಸೀಟ್ ಸ್ಕೂಟರ್ ಪರಿಚಯಿಸಿದ ಹೋಂಡಾ
TV9 Web | Updated By: ಝಾಹಿರ್ ಯೂಸುಫ್
Updated on:
Aug 22, 2021 | 8:08 PM
Honda electric scooter: ಇನ್ನು ಸ್ಕೂಟರ್ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ರೆಂಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು, ಮೊನಚಿನಾಕಾರ ಟೈಲ್ ಲ್ಯಾಂಪ್ ಮತ್ತು ಕ್ವಿಲ್ಟೆಡ್ ಪ್ಯಾಟರ್ನ್ ನೀಡಲಾಗಿದೆ.
1 / 6
ಜಪಾನ್ ಮೂಲದ ವಾಹನ ಉತ್ಪಾದನಾ ಕಂಪೆನಿ ಹೋಂಡಾ ಇದೇ ಮೊದಲ ಬಾರಿ ಸಿಂಗಲ್ ಸೀಟ್ ಸ್ಕೂಟರ್ ಅನ್ನು ಪರಿಚಯಿಸಿದೆ. ಎರಡು ಮಾಡೆಲ್ಗಳಲ್ಲಿ ಲಭ್ಯವಿರುವ ಈ ಸ್ಕೂಟರ್ ವಿದ್ಯುತ್ ಚಾಲಿತ ವಾಹನ ಎಂಬುದು ವಿಶೇಷ.
2 / 6
ಸ್ಯಾಂಡರ್ಡ್ ಸ್ಕೂಟರ್ ಮಾದರಿಯಲ್ಲೇ ಇರುವ ಈ ಗಾಡಿಗೆ ಯು-ಬಿ ಎಂದು ಹೆಸರಿಡಲಾಗಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಯು ಸಿರೀಸ್ ಸ್ಕೂಟರ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡಿರುವುದು ಮತ್ತೊಂದು ವಿಶೇಷ. ಅಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಆಂಟಿ-ಥೆಫ್ಟ್ ಕೀ ಲಾಕ್ ಮತ್ತು ಯುಎಸ್‌ಬಿ ಪೋರ್ಟ್ ನೀಡಲಾಗಿದೆ.
3 / 6
ಇನ್ನು ಸ್ಕೂಟರ್ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ರೆಂಡಿ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು, ಮೊನಚಿನಾಕಾರ ಟೈಲ್ ಲ್ಯಾಂಪ್ ಮತ್ತು ಕ್ವಿಲ್ಟೆಡ್ ಪ್ಯಾಟರ್ನ್ ನೀಡಲಾಗಿದೆ. ಇನ್ನು ಇದರಲ್ಲಿ ನೀಡಲಾಗಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ನಲ್ಲಿ ಸ್ಕೂಟರ್ನ ಸ್ಪೀಡ್, ಮೈಲೇಜ್, ವೋಲ್ಟೇಜ್ ಮತ್ತು ಬ್ಯಾಟರಿ ಸ್ಟೇಟಸ್ಗಳ ಮಾಹಿತಿ ಸ್ಪಷ್ಟವಾಗಿ ಸಿಗಲಿದೆ.
4 / 6
ಹಾಗೆಯೇ ಈ ಸ್ಕೂಟರ್ ಅನ್ನು ಗ್ರಾಹಕರು ಮೂರು ಬ್ಯಾಟರಿ ಪ್ಯಾಕ್ಗಳ ಆಯ್ಕೆಯಲ್ಲಿ ಖರೀದಿಸಬಹುದು. ಅದರಂತೆ ಯು-ಬಿ ಸ್ಕೂಟರ್ 48V-15Ah, 48V-20Ah ಮತ್ತು 48V-24Ah ಬ್ಯಾಟರಿಗಳ ಆಯ್ಕೆಯಲ್ಲಿ ಲಭ್ಯವಿದೆ.
5 / 6
ಇನ್ನು ಈ ಸ್ಕೂಟರ್ ಬ್ಯಾಟರಿ ಪ್ಯಾಕ್‌ಗಳಿಗೆ ಅನುಗುಣವಾಗಿ 55 ಕಿಮೀ, 70 ಕಿಮೀ ಮತ್ತು 85 ಕಿಮೀ ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಕೇವಲ 54 ಕೆಜಿ ಭಾರ ಹೊಂದಿದ್ದು, ಇದು 25 ಕಿಮೀ ಟಾಪ್ ಸ್ಫೀಡ್ ಅನ್ನು ಹೊಂದಿರಲಿದೆ.
6 / 6
ಹೋಂಡಾ ಯು-ಬಿ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 3,099 ಸಿಎನ್‌ವೈ. ಅಂದರೆ ಭಾರತದಲ್ಲಿ ಈ ಸಿಂಗಲ್ ಸೀಟ್ ಸ್ಕೂಟರ್ 35,567 ರೂ. ನಲ್ಲಿ ಲಭ್ಯವಿರಲಿದೆ.