AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ತೆರಿಗೆ ಇ-ಫೈಲಿಂಗ್​ಗೆ ಹತ್ತಾರು ವಿಘ್ನ: ಹಣಕಾಸು ಇಲಾಖೆಯಿಂದ ಇನ್​ಫೋಸಿಸ್ ಸಿಇಒ ಸಲಿಲ್​ ಪಾರೇಖ್​ಗೆ ಬುಲಾವ್

ಆಗಸ್ಟ್ 21ರಿಂದ ಬಳಕೆದಾರರಿಗೆ ಆದಾಯ ತೆರಿಗೆ ಪೋರ್ಟಲ್ ಆಕ್ಸೆಸ್ ಮಾಡಲು ಆಗುತ್ತಿಲ್ಲ. ತೆರಿಗೆ ಪಾವತಿದಾರರು ಈ ಸಮಸ್ಯೆಯ ಬಗ್ಗೆ ಸಾಮಾಜಿಕ ಮಾಧ್ಯಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆದಾಯ ತೆರಿಗೆ ಇ-ಫೈಲಿಂಗ್​ಗೆ ಹತ್ತಾರು ವಿಘ್ನ: ಹಣಕಾಸು ಇಲಾಖೆಯಿಂದ ಇನ್​ಫೋಸಿಸ್ ಸಿಇಒ ಸಲಿಲ್​ ಪಾರೇಖ್​ಗೆ ಬುಲಾವ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇನ್​ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಿಲ್ ಪಾರೇಖ್
TV9 Web
| Edited By: |

Updated on:Aug 22, 2021 | 6:01 PM

Share

ಬೆಂಗಳೂರು: ಆದಾಯ ತೆರಿಗೆ ಪೋರ್ಟಲ್​ ಚಾಲು ಆದ 2.5 ತಿಂಗಳ ನಂತರವೂ ದೋಷಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆಯು ಇನ್​ಫೋಸಿಸ್​ ಮುಖ್ಯ ನಿರ್ವಹಣಾಧಿಕಾರಿ ಸಲಿಲ್ ಪಾರೇಖ್ ಅವರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದೆ. ಆಗಸ್ಟ್ 21ರಿಂದ ಬಳಕೆದಾರರಿಗೆ ಆದಾಯ ತೆರಿಗೆ ಪೋರ್ಟಲ್ ಆಕ್ಸೆಸ್ ಮಾಡಲು ಆಗುತ್ತಿಲ್ಲ.

ಆಗಸ್ಟ್ 23ರಂದು ಖುದ್ದು ಹಾಜರಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಣೆ ನೀಡಬೇಕು ಎಂದು ಹಣಕಾಸು ಇಲಾಖೆ ಸೂಚಿಸಿದೆ. ಆರಂಭವಾದ 2.5 ತಿಂಗಳ ನಂತರವೂ ಹೊಸ ಇ-ಫೈಲಿಂಗ್ ಪೋರ್ಟಲ್​ನಲ್ಲಿ ದೋಷಗಳು ಮುಂದುವರಿದಿರುವುದು ಏಕೆ? ಲೋಪಗಳನ್ನು ಸರಿಪಡಿಸಿಲ್ಲ ಏಕೆ ಎಂದು ಹಣಕಾಸು ಇಲಾಖೆ ಟ್ವೀಟ್​ ಮೂಲಕ ಪ್ರಶ್ನಿಸಿದೆ. ಐಟಿ ಪೋರ್ಟಲ್ ಸಮಸ್ಯೆಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಅವರನ್ನು ಇನ್​ಫೋಸಿಸ್​ನ ಉನ್ನತ ಹಂತದ ಆಡಳಿತ ವರ್ಗದ ಪ್ರತಿನಿಧಿ ಭೇಟಿಯಾಗುತ್ತಿರುವುದು ಇದು 2ನೇ ಬಾರಿ.

ಪೋರ್ಟಲ್ ಆಕ್ಸೆಸ್ ಮಾಡಲು ಆಗುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡಿರುವ ಇನ್​ಫೋಸಿಸ್, ಆಗಸ್ಟ್ 21ರಂದು ಈ ಸಂಬಂಧ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಮೊದಲೇ ಘೋಷಿಸಿದ್ದಂತೆ ಆದಾಯ ತೆರಿಗೆ ಪೋರ್ಟಲ್​ ನಿರ್ವಹಣೆ ಕೆಲಸಗಳು ಆರಂಭವಾಗಿವೆ. ಪೋರ್ಟಲ್ ಮತ್ತೆ ಕಾರ್ಯಾರಂಭ ಮಾಡಿದ ನಂತರ ಈ ಕುರಿತು ಮಾಹಿತಿ ನೀಡುತ್ತೇವೆ. ತೊಂದರೆಗಾಗಿ ವಿಷಾದಿಸುತ್ತೇವೆ ಎಂದು ಸ್ಪಷ್ಟನೆ ನೀಡಿತ್ತು.

ಆಗಸ್ಟ್ 22ರಂದು ಮತ್ತೊಂದು ಸ್ಪಷ್ಟನೆ ನೀಡಿದ್ದ ಇನ್​ಫೋಸಿಸ್, ಇನ್​ಕಮ್​ಟ್ಯಾಕ್ಸ್​ ಇಂಡಿಯಾ ಪೋರ್ಟಲ್​ನಲ್ಲಿ​ ತುರ್ತು ನಿರ್ವಹಣೆ ಕಾರ್ಯಗಳು ನಡೆಯುತ್ತಿವೆ. ಪೋರ್ಟಲ್ ಸರಿಯಾದಾಗ ಮತ್ತೆ ತೆರಿಗೆದಾರರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿತ್ತು. ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್ ಜೂನ್ 7ರಿಂದ ಕಾರ್ಯಾರಂಭ ಮಾಡಿತ್ತು. ಆದರೆ ಮಾರನೇ ದಿನದಿಂದಲೇ ದೋಷಗಳು ಪತ್ತೆಯಾಗಿದ್ದವು. ಜೂನ್ 22ರಂದು ಇನ್​ಫೋಸಿಸ್ ಪ್ರತಿನಿಧಿಗಳನ್ನು ಭೇಟಿಯಾಗಿದ್ದ ನಿರ್ಮಲಾ ಸೀತಾರಾಮನ್ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸರಿಪಡಿಸುವಂತೆ ಸೂಚಿಸಿದ್ದರು.

ಹೊಸ ತಲೆಮಾರಿನ ಆದಾಯ ತೆರಿಗೆ ಪೋರ್ಟಲ್ ರೂಪಿಸಲು ಇನ್​ಫೋಸಿಸ್​ಗೆ 2019ರಲ್ಲಿ ₹ 4,242 ಕೋಟಿ ಮೊತ್ತದ ಗುತ್ತಿಗೆ ನೀಡಲಾಗಿತ್ತು. ಆದಾಯ ತೆರಿಗೆ ರಿಟರ್ನ್ಸ್​ ಅರ್ಜಿಯ ಪ್ರಕ್ರಿಯೆಗೆ ಇದ್ದ 63 ದಿನಗಳ ಅವಧಿಯ ಗಡುವನ್ನು ಒಂದು ದಿನಕ್ಕೆ ಇಳಿಸಲು ಮತ್ತು ಒಂದೇ ದಿನದಲ್ಲಿ ಹೆಚ್ಚುವರಿ ಪಾವತಿಯನ್ನು ತೆರಿಗೆ ಪಾವತಿದಾರರಿಗೆ ಮರಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು.

‘ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಹಾರ್ಡ್​ವೇರ್, ಸಾಫ್ಟ್​ವೇರ್ ಮತ್ತು ಮಾನವ ಸಂಪನ್ಮೂಲ ನಮ್ಮಲ್ಲಿದೆ. ಈ ಮೊದಲೂ ಹಲವು ಲೋಪಗಳನ್ನು ಗುರುತಿಸಿ ಸರಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ದೋಷಗಳನ್ನೂ ಸರಿಪಡಿಸಲಾಗುವುದು’ ಎಂದು ಇನ್​ಫೋಸಿಸ್ ಪ್ರತಿನಿಧಿಗಳು ಹಣಕಾಸು ಸಚಿವರಿಗೆ ಭರವಸೆ ನೀಡಿದ್ದರು.

ಸಾರ್ವಜನಿಕರ ಬಳಕೆಗೆ ಹೊಸ ಪೋರ್ಟಲ್​ ಮುಕ್ತಗೊಳಿಸಿದ ನಂತರ ಈವರೆಗೆ 10 ಲಕ್ಷ ಆದಾಯ ತೆರಿಗೆ ರಿಟರ್ನ್​ಗಳು ಫೈಲ್ ಆಗಿವೆ. ಕಾರ್ಯಕ್ಷಮತೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಯು.ಬಿ.ಪ್ರವೀಣ್ ರಾವ್ ಜುಲೈ 14ರಂದು ಹೇಳಿದ್ದರು.

(Glitches in Income Tax E Filing Portal Finance Ministry summons Infosys CEO Salil Parekh)

ಇದನ್ನೂ ಓದಿ: Income Tax Return: ಯಾಮಾರಿದ್ರೆ ಬೀಳುತ್ತೆ ಹೊರೆ: ಐಟಿ ರಿಟರ್ನ್​, ಟಿಡಿಎಸ್​ನಲ್ಲಿ ಏನಿದು ಹೊಸ ನಿಯಮ? ಐಟಿ ಇಲಾಖೆ ಹೇಗೆ ಚೆಕ್ ಮಾಡುತ್ತೆ?

ಇದನ್ನೂ ಓದಿ: Income Tax: ಹೆಚ್ಚುವರಿಯಾಗಿ ಪಾವತಿಸಿದ ಬಡ್ಡಿ, ವಿಳಂಬ ಶುಲ್ಕ ಹಿಂತಿರುಗಿಸಲಿದೆ ಆದಾಯ ತೆರಿಗೆ ಇಲಾಖೆ

Published On - 5:54 pm, Sun, 22 August 21

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ