Hyundai cars: ಹುಂಡೈ ಕಾರುಗಳ ಖರೀದಿ ಮೇಲೆ ಜೂನ್ ತಿಂಗಳ ಆಫರ್ ನಗದು ರಿಯಾಯಿತಿ ವಿನಿಮಯ ಬೋನಸ್ ಎಷ್ಟೆಲ್ಲ ಇವೆ!

| Updated By: Srinivas Mata

Updated on: Jun 10, 2021 | 2:42 PM

ಹುಂಡೈ ಕಾರುಗಳಿಗೆ ಜೂನ್ ತಿಂಗಳಲ್ಲಿ ಇರುವಂಥ ಆಫರ್​ಗಳ ಬಗ್ಗೆ ಇಲ್ಲಿದೆ ವಿಸ್ತೃತವಾದ ಮಾಹಿತಿ, ಎಲ್ಲ ಮಾಡೆಲ್, ವೇರಿಯಂಟ್​ಗಳ ಮೇಲೆ ಇರುವ ನಗದು ರಿಯಾಯಿತಿ ಮತ್ತಿತರ ಆಫರ್​ಗಳಿವು.

Hyundai cars: ಹುಂಡೈ ಕಾರುಗಳ ಖರೀದಿ ಮೇಲೆ ಜೂನ್ ತಿಂಗಳ ಆಫರ್ ನಗದು ರಿಯಾಯಿತಿ ವಿನಿಮಯ ಬೋನಸ್ ಎಷ್ಟೆಲ್ಲ ಇವೆ!
ಪ್ರಾತಿನಿಧಿಕ ಚಿತ್ರ
Follow us on

ಹುಂಡೈ ಕಂಪೆನಿಯಿಂದ ಕಾರುಗಳ ಮೇಲೆ ಜೂನ್ ತಿಂಗಳಿಗೆ ಆಫರ್​ಗಳನ್ನು ನೀಡಲಾಗುತ್ತಿದೆ. i20 ಈ ಆಫರ್​ನ ಭಾಗವಾಗಿ ಇರಲಿದೆ. ವಿಸ್ತೃತ ವಾರಂಟಿ ಸಿಗುವ ಏಕೈಕ ಮಾಡೆಲ್ ಇದು (ಆಯ್ದ ವೇರಿಯಂಟ್​ಗಳಿಗೆ ಅನ್ವಯಿಸುತ್ತದೆ). ಇದರ ಜತೆಗೆ ವಿನಿಮಯ ಬೋನಸ್ ಹಾಗೂ ಕಾರ್ಪೊರೇಟ್ ರಿಯಾಯಿತಿ ದೊರೆಯಲಿದೆ. ಇತರ ಹುಂಡೈ ಕಾರುಗಳಿಗೆ ನಗದು ರಿಯಾಯಿತಿಗಳೂ ದೊರೆಯಲಿದೆ. ಜೂನ್ 30, 2021ರ ತನಕ ಅನ್ವಯ ಆಗುವಂತೆ ಹುಂಡೈ ಕಾರುಗಳ ಮೇಲೆ ಇರುವ ಆಫರ್​ಗಳು ಮಾಡೆಲ್​ಗಳ ಆಧಾರದಲ್ಲಿ ಈ ಲೇಖನದಲ್ಲಿ ಇದೆ.

ಹುಂಡೈ ಸ್ಯಾಂಟ್ರೋ
Era (ಬೇಸ್ ಸ್ಪೆಸಿಫಿಕೇಷನ್) ಮತ್ತು ಸಿಎನ್​ಜಿ ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 10,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 25,000 ತನಕ ಬೆನಿಫಿಟ್​ಗಳು.

ಇತರ ವೇರಿಯಂಟ್​ಗಳಿಗೆ: ನಗದು ರಿಯಾಯಿತಿ ರೂ. 25,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 40,000 ತನಕ ಬೆನಿಫಿಟ್​ಗಳು.

ಹುಂಡೈ ಸ್ಯಾಂಟ್ರೋ ಕಾರಿನ ಬೆಲೆ ರೂ. 4.73 ಲಕ್ಷದಿಂದ ರೂ. 6.41 ಲಕ್ಷ ಇದೆ.

ಹುಂಡೈ ಗ್ರ್ಯಾಂಡ್ i10 ನಿಯೋಸ್
ಟರ್ಬೋ ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 35,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 50,000 ತನಕ ಬೆನಿಫಿಟ್​ಗಳು.

ಮ್ಯಾಗ್ನಾ MT ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 25,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 40,000 ತನಕ ಬೆನಿಫಿಟ್​ಗಳು.

ಇತರ MT ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 15,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 30,000 ತನಕ ಬೆನಿಫಿಟ್​ಗಳು.

AMT ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 10,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 25,000 ತನಕ ಬೆನಿಫಿಟ್​ಗಳು.

ಹ್ಯಾಚ್​ ಬ್ಯಾಕ್ ಸಿಎನ್​ಜಿ ವೇರಿಯಂಟ್​ಗಳ ಮೇಲೆ 15 ಸಾವಿರ ರೂಪಾಯಿ ತನಕ ರಿಯಾಯಿತಿ ದೊರೆಯುತ್ತದೆ. ಅದಕ್ಕೆ ಯಾವ ನಗದು ರಿಯಾಯಿತಿಯೂ ಇಲ್ಲ.

ಈ ಕಾರಿನ ಬೆಲೆ ರೂ. 5.23 ಲಕ್ಷದಿಂದ ಆರಂಭವಾಗಿ ರೂ. 8.45 ಲಕ್ಷ ಇದೆ.

ಹುಂಡೈ i20
iMT ಟರ್ಬೋ ವೇರಿಯಂಟ್​ಗಳು: 5 ವರ್ಷ/60 ಸಾವಿರ ಕಿ.ಮೀ. ವಿಸ್ತೃತ ವಾರಂಟಿ (12,999 ಮೌಲ್ಯದ್ದು), ವಿನಿಮಯ ಬೋನಸ್ ರೂ. 5000, ಕಾರ್ಪೊರೇಟ್ ರಿಯಾಯಿತಿ ರೂ. 5000. ಒಟ್ಟಾರೆ ಬೆನಿಫಿಟ್ 15,000 ರೂಪಾಯಿ ತನಕ ದೊರೆಯುತ್ತದೆ.

ಡೀಸೆಲ್ ವೇರಿಯಂಟ್​ಗಳು: ವಿನಿಮಯ ಬೋನಸ್ ರೂ. 10,000 ಹಾಗೂ ಕಾರ್ಪೊರೇಟ್ ರಿಯಾಯಿತಿ ರೂ. 5000 ಸೇರಿ ಒಟ್ಟಾರೆ 15 ಸಾವಿರ ರೂಪಾಯಿ ತನಕ ಬೆನಿಫಿಟ್ ದೊರೆಯುತ್ತದೆ.

ಈ ಕಾರಿನ ಬೆಲೆ ರೂ. 6.85 ಲಕ್ಷದಿಂದ 11.34 ಲಕ್ಷ ಇದೆ.

ಹುಂಡೈ ಔರಾ
ಟರ್ಬೋ ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 35,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 50,000 ತನಕ ಬೆನಿಫಿಟ್​ಗಳು.

MT ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 15,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 30,000 ತನಕ ಬೆನಿಫಿಟ್​ಗಳು.

AMT ವೇರಿಯಂಟ್​ಗಳು: ನಗದು ರಿಯಾಯಿತಿ ರೂ. 10,000, ವಿನಿಮಯ ಬೋನಸ್ ರೂ. 10,000, ಕಾರ್ಪೊರೇಟ್ ರಿಯಾಯಿತಿ ರೂ. 5,000 ಒಟ್ಟಾರೆ ರೂ. 25,000 ತನಕ ಬೆನಿಫಿಟ್​ಗಳು.

ಔರಾ ಸಿಎನ್​ಜಿ ಮೇಲೆ ಇದೇ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ಇದೆ. ಯಾವುದೇ ನಗದು ರಿಯಾಯಿತಿ ಆಫರ್ ಇಲ್ಲ.

ಔರಾ ಕಾರಿನ ಬೆಲೆ ರೂ. 5.97 ಲಕ್ಷದಿಂದ ರೂ. 9.35 ಲಕ್ಷ ಇದೆ.

ಹುಂಡೈ ಕೋನಾ ಎಲೆಕ್ಟ್ರಿಕ್
ನಗದು ರಿಯಾಯಿತಿ ರೂ. 1.5 ಲಕ್ಷ ದೊರೆಯುತ್ತದೆ. ಹುಂಡೈ ಎಲೆಕ್ಟ್ರಿಕ್ ವಾಹನಕ್ಕೆ ನಗದು ರಿಯಾಯಿತಿ ರೂ, 1.5 ಲಕ್ಷ ಮಾತ್ರ ಸಿಗುತ್ತದೆ.

ಕೋನಾ ಎಲೆಕ್ಟ್ರಿಕ್ ವಾಹನದ ಬೆಲೆ ರೂ. 23.77 ಲಕ್ಷದಿಂದ 23.96 ಲಕ್ಷ ಇದೆ.

ಗಮನದಲ್ಲಿರಲಿ: ಈ ಎಲ್ಲ ಆಫರ್​ಗಳು ಆಯಾ ರಾಜ್ಯದ ಮೇಲೆ ಹಾಗೂ ವೇರಿಯಂಟ್ ಮೇಲೆ ಅನ್ವಯ ಆಗುತ್ತದೆ. ಆದ್ದರಿಂದ ಹತ್ತಿರದ ಹುಂಡೈ ಡೀಲರ್​ಗಳ ಬಳಿ ತೆರಳಿ ಮತ್ತೊಮ್ಮೆ ಬೆಲೆಯನ್ನು ಖಾತ್ರಿ ಮಾಡಿಕೊಳ್ಳಬೇಕು. ಅಂದಹಾಗೆ ಈ ಎಲ್ಲ ಕಾರುಗಳ ಬೆಲೆಯು ಎಕ್ಸ್ ಶೋ- ರೂಮ್ ದೆಹಲಿಯದ್ದಾಗಿವೆ.

ಇದನ್ನೂ ಓದಿ: Honda car offers: ಹೋಂಡಾ ಕಾರುಗಳ ಮೇಲೆ ಜೂನ್​ನಲ್ಲಿ ಇರುವ ಆಫರ್​ ಮತ್ತು ರಿಯಾಯಿತಿಗಳ ಮಾಹಿತಿ ಇಲ್ಲಿದೆ

(Hyundai company cars June month offers here. It includes cash discount, exchange bonus and corporate discount

Published On - 2:40 pm, Thu, 10 June 21