ಬಡವರಿಗೆ ಸಹಾಯಕವಾಗುವ ಅಗತ್ಯ ಸಂಶೋಧನೆಗೆ ವಾಹನ ಉದ್ಯಮ ಮುಂದಾಗಬೇಕು: ನಿತಿನ್ ಗಡ್ಕರಿ

| Updated By: Rakesh Nayak Manchi

Updated on: Jun 19, 2022 | 3:08 PM

ವಾಹನ ಉದ್ಯಮವು ಬಡವರಿಗೆ ಸಹಾಯಕವಾಗುವ ಅಗತ್ಯ ಆಧಾರಿತ ಸಂಶೋಧನೆಗೆ ಮುಂದಾಗುವ ಅವಶ್ಯಕತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬಡವರಿಗೆ ಸಹಾಯಕವಾಗುವ ಅಗತ್ಯ ಸಂಶೋಧನೆಗೆ ವಾಹನ ಉದ್ಯಮ ಮುಂದಾಗಬೇಕು: ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
Follow us on

ವಾಹನ ಉದ್ಯಮವು ಬಡವರಿಗೆ ಸಹಾಯಕವಾಗುವ ಅಗತ್ಯ ಆಧಾರಿತ ಸಂಶೋಧನೆಗೆ ಮುಂದಾಗುವ ಅವಶ್ಯಕತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಪುಣೆಯಲ್ಲಿ ನಡೆದ ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ ಇಂಡಿಯಾ (SAEINDIA) ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಟೋಮೊಬೈಲ್ ಉದ್ಯಮವು ದೇಶದ ಅಗತ್ಯತೆಗಳ ತಿಳಿವಳಿಕೆಯೊಂದಿಗೆ ಇಂಧನದಿಂದ ಇಂಜಿನಿಯರಿಂಗ್ ವಲಯದ ಅಗತ್ಯ ಆಧಾರಿತ ಸಂಶೋಧನೆಯವರೆಗಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ರಾಯಲ್ ಎನ್ ಫೀಲ್ಡ್ ಹಂಟರ್ 350 ಬೈಕ್ ಗಾಗಿ ಕಾಯುತ್ತಿರುವಿರಾ? ನಿಮ್ಮ ಕಾಯುವಿಕೆ ಆಗಸ್ಟ್​ನಲ್ಲಿ ಅಂತ್ಯ ಕಾಣಲಿದೆ!

ಆಟೋಮೊಬೈಲ್ ಉದ್ಯಮವು ಯಾವಾಗಲೂ ದೇಶವು ಸ್ವಾವಲಂಬಿಯಾಗಲು ಸಹಾಯ ಮಾಡುವ ದೃಷ್ಟಿಕೋನವನ್ನು ಹೊಂದುವುದರ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು. 7.5 ಲಕ್ಷ ಕೋಟಿ ರೂಪಾಯಿಗಳ ವಹಿವಾಟು, 3.5 ಲಕ್ಷ ಕೋಟಿ ರೂಪಾಯಿಗಳ ರಫ್ತು, ಶೇಕಡಾ 7.1 ರ ಜಿಡಿಪಿ ಕೊಡುಗೆ, ಶೇಕಡಾ 49ರ ಉತ್ಪಾದನಾ ಜಿಡಿಪಿ ಮತ್ತು 4.5 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗಗಳನ್ನು ಒದಗಿಸುವ ಮೂಲಕ ಈ ಉದ್ಯಮವು ದೇಶದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ ಎಂದರು.

ಇದನ್ನೂ ಓದಿ: ಒಂದು ಬಾರಿ ಚಾರ್ಜ್ ಮಾಡಿದರೆ ಈ ಕಾರು 7 ತಿಂಗಳು ಓಡಾಡುತ್ತದೆ! ಯಾವುದು ಈ ಕಾರು ಗೊತ್ತಾ?

2025 ರ ಅಂತ್ಯದ ವೇಳಗೆ ನಮ್ಮ ಆಟೋಮೊಬೈಲ್ ಕ್ಷೇತ್ರವು ವಿಶ್ವದ ನಂ.1 ಉತ್ಪಾದನಾ ಕೇಂದ್ರವಾಗಲಿದೆ ಮತ್ತು ನಾವು ಇಡೀ ಜಗತ್ತಿಗೆ ರಫ್ತು ಮಾಡುತ್ತೇವೆ ಎಂದು ನಾನು ನಂಬುತ್ತೇನೆ ಎಂದರು. ವಾಹನಗಳ ಸ್ಕ್ರ್ಯಾಪೇಜ್ ನೀತಿ-2021 ಆಟೋಮೊಬೈಲ್ ಉದ್ಯಮದಲ್ಲಿ ಸುಮಾರು 30 ಪ್ರತಿಶತದಷ್ಟು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗಾಗಲೇ ಶೇ.30ರಷ್ಟು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಹೇಳಿದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ