ಒಂದು ಬಾರಿ ಚಾರ್ಜ್ ಮಾಡಿದರೆ ಈ ಕಾರು 7 ತಿಂಗಳು ಓಡಾಡುತ್ತದೆ! ಯಾವುದು ಈ ಕಾರು ಗೊತ್ತಾ?
ಸೋಲಾರ್ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುವ ಕಂಪನಿಯಾದ ಲೈಟ್‌ಇಯರ್ ತನ್ನ ಮೊದಲ ಉತ್ಪಾದನಾ ವಾಹನವಾಗಿರುವ ಲೈಟ್‌ಇಯರ್ 0 ಅನ್ನು ಬಹಿರಂಗಪಡಿಸಿದೆ. ಇದರ ಅಂದಾಜು ಬೆಲೆ ಇತ್ಯಾದಿ ಮಾಹಿತಿ ಇಲ್ಲಿದೆ ನೋಡಿ.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅಟೋಮೊಬೈಲ್ (Automobile) ಕ್ಷೇತ್ರದಲ್ಲಿ ವಿವಿಧ ರೀತಿಯ ಆವಿಷ್ಕಾರಗಳು ನಡೆಯುತ್ತಿವೆ. ಅದರಂತೆ ಅನೇಕ ಎಲೆಕ್ಟ್ರಿಕ್ ವಾಹನಗಳು (Electric Vehicle-EV) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಸೋಲಾರ್ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುವ ಕಂಪನಿಯಾದ ಲೈಟ್‌ಇಯರ್(Lightyear), ತನ್ನ ಮೊದಲ ಉತ್ಪಾದನಾ ವಾಹನವಾಗಿರುವ ಲೈಟ್‌ಇಯರ್ 0 ಅನ್ನು ಬಹಿರಂಗಪಡಿಸಿದೆ. ಈ ಕಾರು ಒಂದೆರಡು ಅಚ್ಚರಿಯ ಫೀಚರ್ಗಳನ್ನು ನೀಡಲಿದ್ದು, ಸವಾರರಿಗೆ ಚಾರ್ಗಿಂಗ್ ಸಮಸ್ಯೆಯನ್ನು ತಪ್ಪಿಸುವಂತಿದೆ.
ಸೌರ ಮತ್ತು ವಿದ್ಯುತ್ ಎರಡನ್ನೂ ಒಳಗೊಂಡು ಚಲಿಸುವ ಈ ಕಾರಿನ ಮೈಲೇಜ್ 1 ಸಾವಿರ ಕಿ.ಮೀ.ಗೂ ಅಧಿಕ ಇದೆ ಎಂದು ಕಂಪನಿ ತಿಳಿಸಿದೆ. “ಆರು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ, ವಿನ್ಯಾಸ, ಎಂಜಿನಿಯರಿಂಗ್, ಮೂಲಮಾದರಿ ಮತ್ತು ಪರೀಕ್ಷೆಯ ನಂತರ ಈ ಪ್ರೀಮಿಯರ್ ಸೋಲಾರ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: BMW G310 RR ಬೈಕ್ ಪ್ರೀ-ಲಾಂಚ್ ಬುಕ್ಕಿಂಗ್ ಆರಂಭ, ಫೀಚರ್ಸ್ ಮಾಹಿತಿ ಇಲ್ಲಿದೆ ನೋಡಿ
“2016 ರಲ್ಲಿ ಕಾರಿನ ಬಗ್ಗೆ ನಾವು ಕೇವಲ ಒಂದು ಕಲ್ಪನೆಯನ್ನಷ್ಟೇ ಹೊಂದಿದ್ದೆವು. ಮೂರು ವರ್ಷಗಳ ನಂತರ ನಾವು ಒಂದು ಮಾದರಿಯನ್ನು ಕಂಡುಕೊಂಡೆವು. ಈ ಆರು ವರ್ಷಗಳ ಪರೀಕ್ಷೆ, ಮರುವಿನ್ಯಾಸ ಮತ್ತು ಲೆಕ್ಕವಿಲ್ಲದಷ್ಟು ಅಡೆತಡೆಗಳ ನಂತರ ಲೈಟ್‌ಇಯರ್ 0 ಉತ್ಪಾದಿಸಲು ನಿಜವಾಗಿಯೂ ಸಾಧ್ಯವಾಗಿದೆ” ಎಂದು ಲೈಟ್‌ಇಯರ್ ಸಿಇಒ ಲೆಕ್ಸ್ ಹೋಫ್‌ಸ್ಲೂಟ್ ಹೇಳಿದ್ದಾರೆ.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ಬಂತು ಅಚ್ಚರಿಯ ಆಯ್ಕೆ: ನೀವು ಗಮನಿಸಿದ್ರಾ?
ಚಾರ್ಜ್ ಮಾಡಿ 7 ತಿಂಗಳು ಓಡಾಡಿ
ಹೆಚ್ಚು ಬಿಸಿಲಿರುವ ಪ್ರದೇಶಗಳಲ್ಲಿ ಚಾರ್ಜರ್‌ಗೆ ಪ್ಲಗ್ ಮಾಡದೆಯೇ ಕಾರು 7 ತಿಂಗಳವರೆಗೆ ಓಡಬಹುದು ಎಂದು ಲೈಟ್‌ಇಯರ್ ಹೇಳುತ್ತದೆ. ಬಿಸಿಲಿನ ವಾತಾವರಣದೊಂದಿಗೆ ಪ್ರಯಾಣವು ಸರಿಸುಮಾರು 35 ಕಿ.ಮೀ.ಗಳವರೆಗೆ ಇರುತ್ತದೆ. ಕಡಿಮೆ ಸೂರ್ಯನ ಬೆಳಕನ್ನು ಹೊಂದಿರುವ ಪ್ರದೇಶಗಳಲ್ಲಿ, ಉದಾಹರಣೆಗೆ: ನೆದರ್ಲ್ಯಾಂಡ್ಸ್ನಲ್ಲಿ 2 ತಿಂಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳುತ್ತದೆ.
ಇದನ್ನೂ ಓದಿ: Galaxy S20FE 5G: ನೀವು ಸ್ಯಾಮ್ಸಂಗ್ ಪ್ರಿಯರಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮತ್ತೆ ಸಿಗಲ್ಲ
ಕಾರಿನ ಮೈಲೇಜ್ ಹೇಗಿದೆ?
ಸೋಲಾರ್ ಪ್ಯಾನೆಲ್‌ಗಳ ಹೊರತಾಗಿ ಕಾರು ನಾಲ್ಕು ಇನ್-ವೀಲ್ ಮೋಟಾರ್‌ಗಳಿಂದ ಶಕ್ತಿಯನ್ನು ಬಳಸುತ್ತದೆ. ಅದು ಒಂದೇ ಚಾರ್ಜ್‌ನಲ್ಲಿ 625 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಯ ವೇಗದಲ್ಲಿ (ಗಂಟೆಗೆ ಸುಮಾರು 110 ಕಿ.ಮೀ.) ಓಡಿಸಿದರೆ ಸಂಪೂರ್ಣವಾಗಿ ಚಾರ್ಜ್ ಮಾಡಿದ ಕಾರನ್ನು ಇನ್ನೂ 560 ಕಿಲೋಮೀಟರ್ ಓಡಿಸಬಹುದು.
ಕಂಪನಿಯ ಪ್ರಕಾರ, ಲೈಟ್‌ಇಯರ್ 0 ಕಾರನ್ನು ಸರಿಸುಮಾರು 2 ಕೋಟಿ ವೆಚ್ಚದಲ್ಲಿ ತಯಾರಿಸಲಾಗುತ್ತದೆ, ಇದನ್ನು ಅನುಸರಿಸಿ ಕಂಪನಿಯು ಮುಂದಿನ ಮಾದರಿಯ ಲೈಟ್‌ಇಯರ್‌ಗೆ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ. ಅದರ ಬೆಲೆ ಸರಿಸುಮಾರು 27 ಲಕ್ಷ ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ.
ಉದ್ಯಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ