ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಐಟಿ ವಲಯ/ ಸಾಫ್ಟ್‌ವೇರ್ ಸೇವೆಗಳ ವಲಯವು ಜೂನ್ 2021ರಲ್ಲಿ ಗಮನಾರ್ಹವಾಗಿ ಬೆಳವಣಿಗೆ ದಾಖಲಿಸಿದೆ. ಮತ್ತು ಇದು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಕೊರೊನಾವೈರಸ್ ಕಾಣಿಸಿಕೊಂಡ ಮೇಲೆ ಭಾರತೀಯ ಸಂಸ್ಥೆಗಳು ಉದ್ಯಮದ ಸವಾಲುಗಳಿಂದ ಉಳಿದುಕೊಳ್ಳಲು ಮತ್ತು ಯಶಸ್ಸು ಸಾಧಿಸಲು ಡಿಜಿಟಲೈಸೇಷನ್ ಅನ್ನು ಹೆಚ್ಚು ಅವಲಂಬಿಸಿವೆ. ನೌಕರಿ ಕಂಪೆನಿಯ ವರದಿಯ ಪ್ರಕಾರ, 2019ರ ಜೂನ್‌ನಲ್ಲಿನ ನೇಮಕಕ್ಕೆ ಹೋಲಿಸಿದರೆ (ಭಾರತದಲ್ಲಿ ಕೊರೊನಾ ಹರಡುವ ಮೊದಲು) ಈ ವಲಯವು ಕಳೆದ ತಿಂಗಳು ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 52 ರಷ್ಟು ಹೆಚ್ಚಳ ಕಂಡಿದೆ. ಅಷ್ಟೇ ಅಲ್ಲ, ಮೇ 2021ಕ್ಕೆ ಹೋಲಿಕೆ ಮಾಡಿದರೂ ಕಳೆದ ತಿಂಗಳು ಈ ವಲಯವು ಶೇಕಡಾ 5ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಅದರ ಜತೆಗೆ ಈ ವಲಯದಲ್ಲಿನ ನೇಮಕಾತಿ ಚಟುವಟಿಕೆ ಮೇಲೆ ಸಹ ಕೊವಿಡ್-19ನಿಂದ ಹೆಚ್ಚು ಪರಿಣಾಮ ಬೀರಿಲ್ಲ.
ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಈ ವಲಯವು ಕೆಲವು ಅಡೆತಡೆಗಳನ್ನು ಕಂಡಿದೆ. ಆದರೈ 2020ರ ಜೂನ್ಗೆ ಹೋಲಿಸಿದರೆ 2021ರ ಜೂನ್ನಲ್ಲಿ ಶೇಕಡಾ 163 ರಷ್ಟು ನೇಮಕಾತಿ ಬೆಳವಣಿಗೆಯೊಂದಿಗೆ ಪುಟಿದೆದ್ದಿರುವ ಕಾರಣಕ್ಕೆ ಈ ವಲಯದ ಚೇತರಿಕೆ ತ್ವರಿತವಾಗಿದೆ. ಅನೇಕ ಐಟಿ ಕಂಪನಿಗಳು ತಮ್ಮ ನೆಲೆಯನ್ನು ಹೊಂದಿರುವ ಬೆಂಗಳೂರು, ಪುಣೆ, ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ, ನೇಮಕಾತಿ ಚಟುವಟಿಕೆಯಲ್ಲಿ ಎರಡು-ಅಂಕಿಯ ಬೆಳವಣಿಗೆಯನ್ನು ಕಂಡಿದ್ದು, ಈ ವಲಯದ ಉದ್ಯೋಗಗಳ ಏಕರೂಪದ ಪುನಶ್ಚೇತನನವನ್ನು ಸೂಚಿಸುತ್ತದೆ. ಐಟಿ ವಲಯವು ಕ್ಷೇತ್ರದೊಳಗಿನ ನುರಿತ ವ್ಯಕ್ತಿಗಳಿಗೆ ನಿರಂತರ ಬೇಡಿಕೆಯೊಂದಿಗೆ ನೇಮಕ ಚಟುವಟಿಕೆಯ ಹೆಚ್ಚಳವನ್ನು ಮಾಡುತ್ತಿದೆ.
ಕಳೆದ ತಿಂಗಳು ಐಟಿ ಉದ್ಯಮದ ಸಂಸ್ಥೆ ನಾಸ್ಕಾಮ್ ಹೇಳಿರುವ ಪ್ರಕಾರ, ಈ ವಲಯವು ನುರಿತ ಪ್ರತಿಭೆಗಳ ನಿವ್ವಳ ನೇಮಕದಾರರಾಗಿ ಉಳಿದಿವೆ. ಅಗ್ರ 5 ಭಾರತೀಯ ಐಟಿ ಕಂಪನಿಗಳು 2021-22ರ ಅವಧಿಯಲ್ಲಿ ಹೆಚ್ಚುವರಿ 96,000 ಉದ್ಯೋಗಿಗಳನ್ನು ನೇಮಕ ಮಾಡಲು ಯೋಜಿಸಿವೆ. “ತಂತ್ರಜ್ಞಾನದ ವಿಕಸನ ಮತ್ತು ಆಟೋಮೆಷನ್ ಆಗುವುದರೊಂದಿಗೆ ಸಾಂಪ್ರದಾಯಿಕ ಐಟಿ ಉದ್ಯೋಗಗಳು ಮತ್ತು ಜವಾಬ್ದಾರಿಗ ಸ್ವರೂಪವು ಒಟ್ಟಾರೆಯಾಗಿ ವಿಕಸನಗೊಂಡು ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಉದ್ಯಮವು ನುರಿತ ಪ್ರತಿಭೆಗಳ ನಿವ್ವಳ ನೇಮಕಾತಿದಾರನಾಗಿ ಮುಂದುವರೆದಿದೆ, ಕೌಶಲವುಳ್ಳ ಉದ್ಯೋಗಿಗಳನ್ನು 2021ರ ಹಣಕಾಸು ವರ್ಷದಲ್ಲಿ 1,38,000 ಜನರನ್ನು ಸೇರಿಸಿದೆ,” ಎಂದು ನಾಸ್ಕಾಮ್ 2021ರ ಜೂನ್ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಐ.ಟಿ. ಉದ್ಯಮವು ಪ್ರಸ್ತುತ 2,50,000ಕ್ಕೂ ಹೆಚ್ಚು ಉದ್ಯೋಗಿಗಳ ಡಿಜಿಟಲ್ ಕೌಶಲವನ್ನು ಹೆಚ್ಚಿಸುತ್ತಿದೆ ಎಂದು ಉದ್ಯಮ ಸಂಸ್ಥೆ ನಾಸ್ಕಾಂ ತೋರಿಸುತ್ತಿದೆ. 40,000ಕ್ಕೂ ಹೆಚ್ಚು ಹೊಸ ಡಿಜಿಟಲ್ ತರಬೇತಿ ಪಡೆದ ಪ್ರತಿಭೆಗಳನ್ನು ಸಹ ನೇಮಿಸಿಕೊಳ್ಳಲಾಗಿದೆ. ನಿರಂತರ ನೇಮಕಾತಿ ಮತ್ತು ಉನ್ನತೀಕರಣದ ಹಿನ್ನಲೆಯಲ್ಲಿ, ನಾಸ್ಕಾಮ್ ಪ್ರಕಾರ, ಈ ವಲಯವು ಬಲವಾದ ಉದ್ಯಮದ ದೃಷ್ಟಿಕೋನವನ್ನು ಎದುರು ನೋಡುತ್ತಿದೆ ಮತ್ತು “2025ರ ವೇಳೆಗೆ 300-350 ಶತಕೋಟಿ ಡಾಲರ್ ಆದಾಯದ ತನ್ನ ದೃಷ್ಟಿಕೋನವನ್ನು ಪೂರೈಸುವ ನಿರೀಕ್ಷೆಯಲ್ಲಿದೆ.”
(According to Nasscom, IT and software services hiring increased by 52% in 2021 June compared to previous year)