Kia Seltos X-Line: ನೂತನ ವೈಶಿಷ್ಟ್ಯಗಳೊಂದಿಗೆ ಕಿಯಾ ಸೆಲ್ಟೋಸ್ ಎಕ್ಸ್ ಲೈನ್ ಬಿಡುಗಡೆ
TV9 Web | Updated By: ಝಾಹಿರ್ ಯೂಸುಫ್
Updated on:
Sep 01, 2021 | 5:36 PM
Kia Seltos X-Line: ಸೆಲ್ಟೋಸ್ ಒಂದು ಯಶಸ್ವಿ ಉತ್ಪನ್ನವಾಗಿದೆ ಮತ್ತು ಟಾಪ್-ಆಫ್-ಲೈನ್ ಎಕ್ಸ್ ಲೈನ್ ಟ್ರಿಮ್ ಅನ್ನು ಬಿಡುಗಡೆ ಮಾಡುವುದರೊಂದಿಗೆ, ನಾವು ಇನ್ನೊಂದು ಪ್ರೀಮಿಯಂ ಕಾರನ್ನು ಭಾರತೀಯರಿಗೆ ಪರಿಚಯಿಸುತ್ತಿದ್ದೇವೆ.
1 / 5
ನವ ದೆಹಲಿ. ಕಿಯಾ ಇಂಡಿಯಾ ತನ್ನ ಜನಪ್ರಿಯ ಎಸ್‌ಯುವಿ ಸೆಲ್ಟೋಸ್‌ನ ಹೊಸ ಕಾರನ್ನು ಪರಿಚಯಿಸಿದೆ. ಕೊರಿಯಾದ ಕಾರು ಕಂಪೆನಿಯಾಗಿರುವ ಕಿಯಾ ಬಿಡುಗಡೆ ಮಾಡಿರುವ ಹೊಸ ಕಾರಿಗೆ ಸೆಲ್ಟೋಸ್ ಎಕ್ಸ್ ಲೈನ್ ಎಂದು ಹೆಸರಿಡಲಾಗಿದ್ದು, ಈ ಹಿಂದಿನ ಸೆಲ್ಟೋಸ್ಗಿಂತ ಹೊಸ ಕಾರಿನಲ್ಲಿ ಹಲವು ಅಪ್ಗ್ರೇಡ್ಗಳನ್ನು ನೀಡಲಾಗಿದೆ.
2 / 5
ಸೆಲ್ಟೋಸ್ ಎಕ್ಸ್ ಲೈನ್ ಒಳಾಂಗಣ ವಿನ್ಯಾಸವು ಈ ಹಿಂದಿನ ಸೆಲ್ಟೋಸ್ನಲ್ಲಿ ಇರುವಂತೆಯೇ ಇದೆ. ಇದಾಗ್ಯೂ ಕಿಯಾ ಹೊಸ ಫಾಕ್ಸ್ ಲೆಥರ್ ಅಪ್‌ಹೋಲ್ಸ್ಟರಿಯೊಂದಿಗೆ ಡಾರ್ಕ್ ಥೀಮ್ ನೀಡಿದೆ. ಹಾಗೆಯೇ 10.25-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ನೀಡಿದ್ದು, ಇದು UVO ಸಂಪರ್ಕಿತ ಕಾರ್ ವ್ಯವಸ್ಥೆಯೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಕಾರ್ಯ ನಿರ್ವಹಿಸಲಿದೆ. ಇನ್ನು ಎಸಿ, ವಾಯು ಶುದ್ಧೀಕರಣ ವ್ಯವಸ್ಥೆ, ಸನ್ ರೂಫ್ ಇದರಲ್ಲೂ ನೀಡಲಾಗಿದೆ.
3 / 5
ಎಂಜಿನ್: ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 1.4-ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 138 ಬಿಎಚ್‌ಪಿ ಪವರ್ ಮತ್ತು 242 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸಿದರೆ, 1.5-ಲೀಟರ್ ಡೀಸೆಲ್ ಎಂಜಿನ್ 250 ಎನ್ಎಂ ಗರಿಷ್ಠ ಟಾರ್ಕ್ 113 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಿಯಾ ಪೆಟ್ರೋಲ್ ಎಂಜಿನ್ ಘಟಕವನ್ನು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಿದೆ. ಹಾಗೆಯೇ ಡೀಸೆಲ್ ಮಾಡೆಲ್ನಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಘಟಕವನ್ನು ನೀಡಲಾಗಿದೆ.
4 / 5
ಬೆಲೆ: ಸೆಲ್ಟೋಸ್‌ನ ಪೆಟ್ರೋಲ್ ಎಕ್ಸ್ ಲೈನ್ 7 ಡಿಸಿಟಿ ಬೆಲೆ 17.79 ಲಕ್ಷ ರೂಪಾಯಿಗಳಾಗಿದ್ದು, ಡೀಸೆಲ್ ಎಕ್ಸ್ ಲೈನ್ 6 ಎಟಿ ರೂಪಾಂತರದ ಬೆಲೆ 18.10 ಲಕ್ಷ ರೂಪಾಯಿಗಳು.
5 / 5
ಸೆಲ್ಟೋಸ್ ಒಂದು ಯಶಸ್ವಿ ಉತ್ಪನ್ನವಾಗಿದೆ ಮತ್ತು ಟಾಪ್-ಆಫ್-ಲೈನ್ ಎಕ್ಸ್ ಲೈನ್ ಟ್ರಿಮ್ ಅನ್ನು ಬಿಡುಗಡೆ ಮಾಡುವುದರೊಂದಿಗೆ, ನಾವು ಇನ್ನೊಂದು ಪ್ರೀಮಿಯಂ ಕಾರನ್ನು ಭಾರತೀಯರಿಗೆ ಪರಿಚಯಿಸುತ್ತಿದ್ದೇವೆ ಎಂದು ಕಿಯಾ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಮಾರಾಟ ಕಾರ್ಯತಂತ್ರದ ಅಧಿಕಾರಿ ಟೇ-ಜಿನ್ ಪಾರ್ಕ್ ತಿಳಿಸಿದ್ದಾರೆ.