TVS Apache RR 310: ರೇಸಿಂಗ್ ಬೈಕ್​​ ಲುಕ್​ನಲ್ಲಿ ಟಿವಿಎಸ್​ ಅಪಾಚೆ: ಬೆಲೆ ಎಷ್ಟು ಗೊತ್ತಾ?

TVS Apache RR 310 Price: ಹೊಸ ಅಪಾಚೆ ಆರ್‌ಆರ್ 310 ಬಿಎಂಡಬ್ಲ್ಯು ಜಿ 310 ಆರ್ ಎಂಜಿನ್ ಆಧಾರಿತ 310 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದೆ.

TVS Apache RR 310: ರೇಸಿಂಗ್ ಬೈಕ್​​ ಲುಕ್​ನಲ್ಲಿ ಟಿವಿಎಸ್​ ಅಪಾಚೆ: ಬೆಲೆ ಎಷ್ಟು ಗೊತ್ತಾ?
TVS Apache RR 310
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 31, 2021 | 7:56 PM

ಟಿವಿಎಸ್ ಮೋಟಾರ್ಸ್ (TVS Motors) ಕಂಪೆನಿ ತನ್ನ ಹೊಸ ಅಪಾಚೆ ಆರ್‌ಆರ್ 310 (TVS Apache RR 310) ಬೈಕ್ ಅನ್ನು ಬಿಡುಗಡೆ ಮಾಡಿದೆ. ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅಪಾಚೆಯನ್ನು ಅಪ್​ಗ್ರೇಡ್ ಮಾಡಲಾಗಿದ್ದು, ಅದರಂತೆ ಹೊಸ ಆರ್​ಆರ್ 310 ಈ ಹಿಂದಿಗಿಂತಲೂ ರೈಡಿಂಗ್​ಗೆ ಉತ್ತಮವಾಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಹೊಸ ಅಪಾಚೆಯ ವಿನ್ಯಾಸದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದ್ದು, ಅದರಂತೆ ಈ ಹಿಂದಿನ ಆರ್​ಆರ್ 310 ಗಿಂತ ಹೊಸ ಅಪಾಚೆಯ ಫ್ರಂಟ್ ಹಾಗೂ ಬ್ಯಾಕ್ ಸಸ್ಪೆಷನ್ಸ್ ಬದಲಾಗಿದೆ.

ಹೊಸ ವಿನ್ಯಾಸ: ಟಿವಿಎಸ್ ಇಲ್ಲಿ ಅಪಾಚೆ ಆರ್‌ಆರ್ 310 ಎರಡು ಆಯ್ಕೆಗಳಲ್ಲಿ ಲಭ್ಯವಿದೆ. ಅದರಂತೆ ಡೈನಾಮಿಕ್ ಕಿಟ್ ಅಪಾಚೆ 310ನಲ್ಲಿ ಹೊಂದಾಣಿಕೆ ಮಾಡಬಹುದಾದ KYB ಫ್ರಂಟ್ ಫೋರ್ಕ್ ನೀಡಲಾಗಿದೆ. ಅದರೊಂದಿಗೆ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಮೊನೊ ಶಾಕ್ ಮತ್ತು ಆಂಟಿ ರಸ್ಟ್ ಕೋಟೆಡ್ ಡ್ರೈವ್ ಚೈನ್ ಸಹ ಇದರಲ್ಲಿದೆ. ಹಾಗೆಯೇ ರೇಸ್ ಹ್ಯಾಂಡಲ್ ಬಾರ್, ಫೂಟ್ ಪೆಗ್ಸ್ ಮತ್ತು ರೇಸ್ ಎರ್ಗೋ ಫೂಟ್ ರೆಸ್ಟ್ ಅಸೆಂಬ್ಲಿ ರೇಸ್ ಕಿಟ್​ ಆಯ್ಕೆಯಲ್ಲಿರಲಿದೆ.

ವೈಶಿಷ್ಟ್ಯಗಳು: ಟಿವಿಎಸ್ ಅಪಾಚೆ 310 ರೇಸ್ ರೆಪ್ಲಿಕಾ ಗ್ರಾಫಿಕ್ಸ್ ಹೊಂದಿರಲಿದೆ. ಹಾಗೆಯೇ ಅಲಾಯ್ ವೀಲ್ ಕಲರ್ ಆಯ್ಕೆಗಳು ಮತ್ತು ವೈಯಕ್ತಿಕ ರೇಸ್ ನಂಬರ್​ನ್ನು ಸಹ ನೀಡಲಿದೆ. ಬೈಕಿನಲ್ಲಿ ನೀಡಿರುವ ಡಿಜಿಟಲ್ ಕ್ಲಸ್ಟರ್​ನಲ್ಲಿ ಡಿಜಿಟಲ್ ಡಾಕ್ ಇದ್ದು, ಇದರಲ್ಲಿ ನೀವು ನಿಮ್ಮ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಬಹುದು. ಇದಲ್ಲದೇ, ಡೈಲಿ ಟ್ರಿಪ್ ಮೀಟರ್, ಡೈನಾಮಿಕ್ ರೆವ್ ಲಿಮಿಟ್ ಇಂಡಿಕೇಟರ್ ಮತ್ತು ಓವರ್ ಸ್ಪೀಡ್ ಇಂಡಿಕೇಟರ್ ಇದರಲ್ಲಿ ನೀಡಲಾಗಿದೆ.

ಹೊಸ ಅಪಾಚೆ ಆರ್‌ಆರ್ 310 ಬಿಎಂಡಬ್ಲ್ಯು ಜಿ 310 ಆರ್ ಎಂಜಿನ್ ಆಧಾರಿತ 310 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಇದು ನಿಮಗೆ 34hp ಪವರ್ ಮತ್ತು 27.3Nm ಗರಿಷ್ಠ ಟಾರ್ಕ್ ನೀಡುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ವಾಹನವು ಥ್ರೊಟಲ್ ಬೈ ವೈರ್ ತಂತ್ರಜ್ಞಾನ ಹೊಂದಿದ್ದು, ನಾಲ್ಕು ರೈಡಿಂಗ್ ಮೋಡ್‌ಗಳಲ್ಲಿ ಓಡಿಸಬಹುದು. ಇನ್ನು ಇದರಲ್ಲಿ ಮೈಕೆಲಿನ್ ರೋಡ್ 5 ಟೈರ್‌ಗಳು, ಬ್ಲೂಟೂತ್ ಸಂಪರ್ಕದೊಂದಿಗೆ ಬರುವ ಹೊಸ TFT ಸ್ಕ್ರೀನ್ ಸಹ ನೀಡಲಾಗಿದೆ. 2021 ಅಪಾಚೆ ಆರ್‌ಆರ್ 310 ಕೆಟಿಎಂ ಆರ್‌ಸಿ 390, ಕವಾಸಕಿ ನಿಂಜಾ 300 ಮತ್ತು ಬೆನೆಲ್ಲಿ 302 ಆರ್‌ ಬೈಕ್​ಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಅಂದಹಾಗೆ ಹೊಸ Apache RR 310 ಆರಂಭಿಕ ಬೆಲೆ 2.59 ಲಕ್ಷ ರೂ.

ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್​: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?

ಇದನ್ನೂ ಓದಿ: Pradeep Narwal: ಪ್ರೊ ಕಬಡ್ಡಿ ಲೀಗ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್

ಇದನ್ನೂ ಓದಿ: ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

(TVS Apache RR 310 2021 Launched In India)