ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ
electric Car K5: K5 ಸಣ್ಣ ಕಾರ್ ಆಗಿದ್ದರೂ ಇದರಲ್ಲಿ ಮೂವರು ಆರಾಮಾಗಿ ಕುಳಿತುಕೊಳ್ಳಬಹುದು. ಮುಂಭಾಗದಲ್ಲಿ ಡ್ರೈವರ್ ಹಾಗೂ ಹಿಂಭಾಗದಲ್ಲಿ ಇಬ್ಬರು ಕೂರಬಹುದಾಗಿದೆ.
Updated on: Aug 30, 2021 | 8:20 PM

ವಿಶ್ವದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಕೆ5 ಮಾರಾಟ ಆರಂಭಿಸಿದೆ. ಚೀನಾ ಎಲೆಕ್ಟ್ರಿಕ್ ಕಾರು ತಯಾರಕ ಕಂಪೆನಿ ರೀಗಲ್ ರಾಪ್ಟರ್ ಮೋಟಾರ್ಸ್ ಈ ನೂತನ ಕಾರನ್ನು ಪರಿಚಯಿಸಿದೆ.

K5 ಸಣ್ಣ ಕಾರ್ ಆಗಿದ್ದರೂ ಇದರಲ್ಲಿ ಮೂವರು ಆರಾಮಾಗಿ ಕುಳಿತುಕೊಳ್ಳಬಹುದು. ಮುಂಭಾಗದಲ್ಲಿ ಡ್ರೈವರ್ ಹಾಗೂ ಹಿಂಭಾಗದಲ್ಲಿ ಇಬ್ಬರು ಕೂರಬಹುದಾಗಿದೆ.

ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗೆ ಹೆಸರುವಾಸಿಯಾದ ರೀಗಲ್ ರಾಪ್ಟರ್ ಮೋಟಾರ್ಸ್ ಪರಿಚಯಿಸಿರುವ ಈ ಕಾರನ್ನು ಗಂಟೆಗೆ 55 ಕಿಮೀ ವೇಗದಲ್ಲಿ ಚಲಾಯಿಸಬಹುದು.

ಇದರಲ್ಲಿ ಸಣ್ಣ ಮಾದರಿಯ 12*38 ಬ್ಯಾಟರಿ ನೀಡಲಾಗಿದ್ದು, ಇದನ್ನು ಸಂಪೂರ್ಣ ಚಾರ್ಜ್ ಮಾಡಿಕೊಳ್ಳಲು 8 ಗಂಟೆಗಳನ್ನು ತೆಗೆದುಕೊಳ್ಳಲಿದೆ.

ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ್ರೆ 55 ರಿಂದ 66 ಕಿಮೀ ಡ್ರೈವಿಂಗ್ ಮೈಲೇಜ್ (ರೇಂಜ್) ಸಿಗಲಿದೆ ಎಂದು ರೀಗಲ್ ರಾಪ್ಟರ್ ಮೋಟಾರ್ಸ್ ಹೇಳಿಕೊಂಡಿದೆ.

ಸದ್ಯ K5 ಎಲೆಕ್ಟ್ರಿಕ್ ಕಾರನ್ನು ಆನ್‌ಲೈನ್ ಮೂಲಕ ಖರೀದಿಸಬಹುದು. ಅದರಂತೆ ಈ ಸಣ್ಣ ಎಲೆಕ್ಟ್ರಿಕ್ ಕಾರು ಚೀನಾದ ಅಲಿಬಾಬಾ ವೆಬ್ಸೈಟ್ನಲ್ಲಿ ಲಭ್ಯವಿದೆ. ಇದರ ಬೆಲೆ 2100 ಡಾಲರ್. ಅಂದರೆ ಭಾರತದ ಮೌಲ್ಯ ಸುಮಾರು 1 ಲಕ್ಷ 53 ಸಾವಿರ.
























