AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಪ್ಪಳ ಮತ್ತು ಜಿಎಸ್​ಟಿ: ವೈರಲ್ ಆಯ್ತು ಉದ್ಯಮಿ ಹರ್ಷ್ ಗೋಯೆಂಕ ಟ್ವೀಟ್, ಫ್ಯಾಕ್ಟ್​ಚೆಕ್ ಮಾಡಿದ ತೆರಿಗೆ ಇಲಾಖೆ

ದೇಶದ ಮುಂಚೂಣಿ ಉದ್ಯಮ ಸಮೂಹ ಆರ್​ಪಿಜಿ ಎಂಟರ್​ಪ್ರೈಸಸ್​ನ ಅಧ್ಯಕ್ಷ ಹರ್ಷ್​ ಗೋಯೆಂಂಕ ತಮ್ಮ ಟ್ವೀಟ್​ನಲ್ಲಿ ಎರಡು ಹಪ್ಪಳಗಳ ಚಿತ್ರವನ್ನು ಟ್ವೀಟ್ ಮಾಡಿದ್ದರು.

ಹಪ್ಪಳ ಮತ್ತು ಜಿಎಸ್​ಟಿ: ವೈರಲ್ ಆಯ್ತು ಉದ್ಯಮಿ ಹರ್ಷ್ ಗೋಯೆಂಕ ಟ್ವೀಟ್, ಫ್ಯಾಕ್ಟ್​ಚೆಕ್ ಮಾಡಿದ ತೆರಿಗೆ ಇಲಾಖೆ
ಹರ್ಷ್​ ಗೊಯೆಂಕಾ ಟ್ವೀಟ್ ಮಾಡಿರುವ ವೃತ್ತಾಕಾರ ಮತ್ತು ಚಚೌಕದ ಹಪ್ಪಳಗಳು
TV9 Web
| Edited By: |

Updated on: Sep 01, 2021 | 10:27 PM

Share

ಹಪ್ಪಳ ಮತ್ತು ಸರಕು ಸೇವಾ ಸುಂಕದ (ಜಿಎಸ್​ಟಿ) ಬಗ್ಗೆ ಉದ್ಯಮಿ ಹರ್ಷ್​ ಗೋಯೆಂಕ ಮಾಡಿದ ಟ್ವೀಟ್​ ಬುಧವಾರ ವೈರಲ್ ಆಗಿತ್ತು. ಈ ಟ್ವೀಟ್​ನಲ್ಲಿ ವ್ಯಕ್ತವಾದ ಮಾಹಿತಿಯ ಸತ್ಯಪರಿಶೀಲನೆ ಮಾಡಿದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆಯು (Central Board of Indirect Taxes Customs – CBIC) ಗೋಯೆಂಕ ಟ್ವೀಟ್​ನಲ್ಲಿ ಪ್ರಸ್ತಾಪಿಸಿದ್ದ ಮಾಹಿತಿ ತಪ್ಪು ಎಂದು ಹೇಳಿತು.

ಅಕ್ಕಿ ಸೇರಿದಂತೆ ವಿವಿಧ ಧಾನ್ಯಗಳ ಬೆಂದ ಹಿಟ್ಟನ್ನು ಹದವಾಗಿ ಬಿಸಿಲಿನಲ್ಲಿ ಒಣಗಿಸಿ ಹಪ್ಪಳ ತಯಾರಿಸಲಾಗುತ್ತದೆ. ಇದನ್ನು ಬಿಸಿ ಎಣ್ಣೆಯಲ್ಲಿ ಕರಿದು ಅಥವಾ ಸುಟ್ಟು ಗರಿಗರಿ ಇರುವಾಗಲೇ ತಿನ್ನುವುದು ರೂಢಿ.

ದೇಶದ ಮುಂಚೂಣಿ ಉದ್ಯಮ ಸಮೂಹ ಆರ್​ಪಿಜಿ ಎಂಟರ್​ಪ್ರೈಸಸ್​ನ ಅಧ್ಯಕ್ಷ ಹರ್ಷ್​ ಗೋಯೆಂಂಕ ತಮ್ಮ ಟ್ವೀಟ್​ನಲ್ಲಿ ಎರಡು ಹಪ್ಪಳಗಳ ಚಿತ್ರವನ್ನು ಟ್ವೀಟ್ ಮಾಡಿದ್ದರು. ಒಂದು ವೃತ್ತಾಕಾರದಲ್ಲಿದ್ದರೆ ಮತ್ತೊಂದು ಚಚೌಕವಾಗಿತ್ತು. ವೃತ್ತಾಕಾರದ ಹಪ್ಪಳಕ್ಕೆ ಜಿಎಸ್​ಟಿಯಿಂದ ವಿನಾಯ್ತಿಯಿದೆ. ಚಚೌಕದ ಹಪ್ಪಳಕ್ಕೆ ಜಿಎಸ್​ಟಿ ಅನ್ವಯವಾಗುತ್ತದೆ ಎಂದು ಹರ್ಷ್​ ಗೊಯೆಂಕ ಹೇಳಿದ್ದರು. ‘ಈ ತೆರಿಗೆ ವಿಧಿಸುವ ತರ್ಕದ ಬಗ್ಗೆ ಯಾರಾದರೂ ಲೆಕ್ಕ ಪರಿಶೋಧಕರು ನನಗೆ ಅರ್ಥ ಮಾಡಿಸಬಲ್ಲಿರಾ’ ಎಂದು ಹರ್ಷ್​ ಗೋಯೆಂಕಾ ವ್ಯಂಗ್ಯವಾಡಿದ್ದರು.

ಹರ್ಷ್​ ಗೊಯೆಂಕಾ ಅವರ ಪೋಸ್ಟ್​ ಇಲ್ಲಿದೆ

ಹರ್ಷ್​ ಗೊಯೆಂಕಾ ಅವರ ಟ್ವೀಟ್​ನಲ್ಲಿದ್ದ ಮಾಹಿತಿ ತಪ್ಪು ಎಂದು ಹೇಳಿದ ಸಿಬಿಐಸಿ, ಹಪ್ಪಳವು ಯಾವುದೇ ಹೆಸರಿನಲ್ಲಿದ್ದರೂ ಅದಕ್ಕೆ ಜಿಎಸ್​ಟಿ ವಿಧಿಸುವುದಿಲ್ಲ. ಈ ವಿಷಯವನ್ನು ಜಿಎಸ್​ಟಿ ಅಧಿಸೂಚನೆಯ 96ನೇ ಎಂಟ್ರಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಹಪ್ಪಳವನ್ನು ಅದರ ಆಕಾರದ ಮೇಲೆ ಪ್ರತ್ಯೇಕಿಸುವುದಿಲ್ಲ ಎಂದು ಸಿಬಿಐಸಿ ಹೇಳಿದೆ. ಈ ವಿಷಯವು ಸಿಬಿಐಸಿ ವೆಬ್​ಸೈಟ್​ನಲ್ಲಿ ಲಭ್ಯವಿದೆ ಎಂದು ಹೇಳಿದೆ.

ಸಿಬಿಐಸಿ ಮಾಡಿರುವ ಫ್ಯಾಕ್ಟ್​ಚೆಕ್​ ಇಲ್ಲಿದೆ

(Viral Tweet Harsh Goenka posts about papad and GST in viral tweet CBIC dept fact checks updates the truth)

ಇದನ್ನೂ ಓದಿ: Afghanistan Update: ತಾಲಿಬಾನ್ ಹಿಡಿತದಲ್ಲಿ 2ನೇ ದಿನ; ಪಂಜಶಿರ್​ ಸಂಘರ್ಷ, ಅಲ್​ಖೈದಾ ಅಭಿನಂದನೆ, ಬೈಡೆನ್ ಸಮರ್ಥನೆ

ಇದನ್ನೂ ಓದಿ: 30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?