Afghanistan Update: ತಾಲಿಬಾನ್ ಹಿಡಿತದಲ್ಲಿ 2ನೇ ದಿನ; ಪಂಜಶಿರ್​ ಸಂಘರ್ಷ, ಅಲ್​ಖೈದಾ ಅಭಿನಂದನೆ, ಬೈಡೆನ್ ಸಮರ್ಥನೆ

ಅಫ್ಘಾನಿಸ್ತಾನದಿಂದ ಆಮೆರಿಕಾವನ್ನು ಓಡಿಸಿದ ತಾಲಿಬಾನಿಗಳನ್ನು ಅಭಿನಂದಿಸಿರುವ ಆಲ್​ಖೈದಾ ಉಗ್ರಗಾಮಿ ಸಂಘಟನೆ, ಕಾಶ್ಮೀರವನ್ನು ಸ್ವತಂತ್ರಗೊಳಿಸಬೇಕೆಂದು ತಾಕೀತು ಮಾಡಿದೆ.

Afghanistan Update: ತಾಲಿಬಾನ್ ಹಿಡಿತದಲ್ಲಿ 2ನೇ ದಿನ; ಪಂಜಶಿರ್​ ಸಂಘರ್ಷ, ಅಲ್​ಖೈದಾ ಅಭಿನಂದನೆ, ಬೈಡೆನ್ ಸಮರ್ಥನೆ
ಪಂಜ್​ಶೀರ್​ನಲ್ಲಿ ತಾಲಿಬಾನ್ ಪಡೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 01, 2021 | 9:29 PM

ಕಾಬೂಲ್: ಅಫ್ಘಾನಿಸ್ತಾನವು ತಾಲಿಬಾನ್ ಹಿಡಿತಕ್ಕೆ ಸಿಲುಕಿ ಎರಡು ದಿನ ಕಳೆದಿದೆ. ತಾಲಿಬಾನ್ ಆಳ್ವಿಕೆಯಲ್ಲಿ ಯಾವಾಗ ಏನಾದೀತೋ ಎಂಬ ಆತಂಕದ ಅನಿಶ್ಚಿತತೆ ಮುಂದುವರಿದಿದೆ. ಹೊಸ ಸರ್ಕಾರ ರಚನೆಗೆ ಮಾತುಕತೆ ನಡೆಸುತ್ತಿರುವ ತಾಲಿಬಾನಿಗಳು, ಮತ್ತೊಂದೆಡೆ ಪಂಜಶಿರ್ ಪ್ರಾಂತ್ಯದ ಮೇಲೆ ದಾಳಿಯನ್ನೂ ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನದಿಂದ ಆಮೆರಿಕಾವನ್ನು ಓಡಿಸಿದ ತಾಲಿಬಾನಿಗಳನ್ನು ಅಭಿನಂದಿಸಿರುವ ಆಲ್​ಖೈದಾ ಉಗ್ರಗಾಮಿ ಸಂಘಟನೆ, ಕಾಶ್ಮೀರವನ್ನು ಸ್ವತಂತ್ರಗೊಳಿಸಬೇಕೆಂದು ತಾಕೀತು ಮಾಡಿದೆ.

ಅಫ್ಘಾನಿಸ್ತಾನದಿಂದ ಆಮೆರಿಕ ಸೇನೆ ಹೊರನಡೆದು ಎರಡು ದಿನ ಕಳೆದಿದೆ. ಅಫ್ಘಾನಿಸ್ತಾನದ ಜನರಲ್ಲಿ ಈಗ ಆತಂಕ, ಭಯ, ಅನಿಶ್ಚಿತತೆ ಮನೆ ಮಾಡಿದೆ. ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಮುಂದೇನಾಗುತ್ತೋ ಎಂಬ ಆತಂಕ ತಾಲಿಬಾನಿಗಳಲ್ಲಿದೆ. ಇದರ ಮಧ್ಯೆಯೂ ಕಾಬೂಲ್ ಏರ್​ಪೋರ್ಟ್ ಹೊರಭಾಗದಲ್ಲಿ ದೇಶ ಬಿಟ್ಟು ಹೋಗುವ ಉದ್ದೇಶದಿಂದ ಜನರು ಜಮಾಯಿಸುತ್ತಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣ ಹಾಗೂ ಕಂದಹಾರ್​ನಲ್ಲಿರುವ ವಿಮಾನ, ಹೆಲಿಕಾಪ್ಟರ್​ಗಳಲ್ಲಿ ಈಗ ತಾಲಿಬಾನಿ ಪೈಲಟ್​ಗಳು ಹಾರಾಟ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್​ಗಳಲ್ಲಿ ತಾಲಿಬಾನ್​ನ ಬಿಳಿಧ್ವಜ ಹಾರಿಸಿದ್ದಾರೆ. ನಿನ್ನೆ ಕಂದಹಾರ್​ನಲ್ಲಿ ಹೆಲಿಕಾಪ್ಟರ್​ನಲ್ಲಿ ಓರ್ವ ವ್ಯಕ್ತಿ ನೇತಾಡಿದ್ದ ವಿಡಿಯೋ ಹರದಾಡಿತ್ತು. ಅಫ್ಘಾನ್ ಭಾಷಾಂತರಕಾರನನ್ನು ತಾಲಿಬಾನಿಗಳು ಹೆಲಿಕಾಪ್ಟರ್ ಮೂಲಕ ನೇಣು ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಕೆಲ ನ್ಯೂಸ್ ಏಜೆನ್ಸಿಗಳು ಫ್ಯಾಕ್ಟ್ ಚೆಕ್ ಮಾಡಿವೆ. ಯಾರನ್ನೂ ಹೆಲಿಕಾಪ್ಟರ್​ನಲ್ಲಿ ನೇಣು ಹಾಕಿಲ್ಲ. ತಾಲಿಬಾನ್ ಉಗ್ರನೇ ಹೆಲಿಕಾಪ್ಟರ್ ಮೂಲಕ ಹೋಗಿ ಕಟ್ಟಡವೊಂದರ ಮೇಲೆ ತಾಲಿಬಾನ್ ಧ್ವಜ ಹಾರಿಸಲು ಯತ್ನಿಸಿದ್ದಾನೆ. ಆದರಎ, ಕೆಲ ಕಾರಣಗಳಿಂದ ಕಟ್ಟಡದ ಮೇಲೆ ಹೋಗಿ ಧ್ವಜ ಹಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೆಲಿಕಾಪ್ಟರ್​ನಲ್ಲಿ ನೇತಾಡಿದ್ದಾನೆ. ಆತ ಸತ್ತಿಲ್ಲ. ವಿಡಿಯೋದಲ್ಲೂ ಸೂಕ್ಷ್ಮವಾಗಿ ಗಮನಿಸಿದರೇ, ಆ ವ್ಯಕ್ತಿ ಕೈಗಳನ್ನು ಆಡಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿವೆ.

ಪಂಜಶೀರ್ ಪ್ರಾಂತ್ಯದ ಮೇಲೆ ಮುಂದುವರಿದ ದಾಳಿ ತಾಲಿಬಾನ್ ಉಗ್ರರು ಪಂಜಶಿರ್ ಪ್ರಾಂತ್ಯದ ಮೇಲೆ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ. ಖಾವಕ್, ಪರ್ಯನ್ ಜಿಲ್ಲೆಗಳ ಕಡೆಯಿಂದ ಪಂಜಶೀರ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದ್ದಾರೆ. ನಾರ್ದರ್ನ್ ಅಲೈಯನ್ಸ್ ಪ್ರತಿದಾಳಿ ನಡೆಸಿದೆ. ಈ ವೇಳೆ 41 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. 20 ಮಂದಿ ತಾಲಿಬಾನಿಗಳು ಸೆರೆ ಸಿಕ್ಕಿದ್ದಾರೆ. ನಿನ್ನೆಯಿಂದ ಪಂಜಶೀರ್ ಪ್ರಾಂತ್ಯದ ಮೇಲೆ ದಾಳಿ ನಡೆಸುತ್ತಿದ್ದರೂ, ಆಕ್ರಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಬೆಟ್ಟಗಳ ಮೇಲ್ಭಾಗದಲ್ಲಿರುವ ನಾರ್ದರ್ನ್ ಅಲೈಯನ್ಸ್ ಪಡೆಗಳು ಕೆಳಭಾಗದಲ್ಲಿರುವ ತಾಲಿಬಾನಿಗಳ ಮೇಲೆ ದಾಳಿ ನಡೆಸುತ್ತಿವೆ.

‘ನಿಮ್ಮನ್ನು ಪಂಜಶಿರ್ ಪ್ರಾಂತ್ಯದೊಳಕ್ಕೆ ಬಿಟ್ಟುಕೊಳ್ಳುತ್ತೇವೆ. ಆದರೆ ಹೊರಹೋಗಲು ಅವಕಾಶ ಕೊಡುವುದಿಲ್ಲ’ ಎಂದು ನಾರ್ದರ್ನ್ ಅಲೈಯನ್ಸ್ ಕಮ್ಯಾಂಡರ್ ಹಸೀಬ್ ಹೇಳಿದ್ದಾರೆ. ತಾಲಿಬಾನಿಗಳು ಈಗಾಗಲೇ ಪಂಜಶಿರ್ ಪ್ರಾಂತ್ಯಕ್ಕೆ ಆಹಾರ, ಇಂಧನ ಸೇರಿದಂತೆ ಅಗತ್ಯ ಸಾಮಗ್ರಿಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಪಂಜಶಿರ್ ಪ್ರಾಂತ್ಯದಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಸಾಮಗ್ರಿಗಳ ದಾಸ್ತಾನು ಇದೆ.

ಕಾಶ್ಮೀರದತ್ತ ಕೈ ತೋರಿದ ಅಲ್​ಖೈದಾ ಅಫ್ಘಾನಿಸ್ತಾನದಿಂದ ಆಮೆರಿಕಾವನ್ನು ಓಡಿಸಿದ ತಾಲಿಬಾನಿಗಳನ್ನು ಅಭಿನಂದಿಸಿರುವ ಅಲ್​ಖೈದಾ ಉಗ್ರಗಾಮಿ ಸಂಘಟನೆಯು ಕಾಶ್ಮೀರವನ್ನು ಇಸ್ಲಾಂ ವೈರಿಗಳಿಂದ ಸ್ವತಂತ್ರಗೊಳಿಸಿ ಎಂದು ಪತ್ರಬರೆದಿದೆ. ಇದರಿಂದ ಆಲ್​ಖೈದಾ ಸಂಘಟನೆಗೂ-ತಾಲಿಬಾನ್‌ಗೂ ನಂಟಿರುವುದು ಸ್ಪಷ್ಟವಾಗಿದೆ. ತಾಲಿಬಾನ್​ನ ಸುಪ್ರೀಂಲೀಡರ್ ಹೇಬಿತುಲ್ಲಾ ಅಖುಂದಾಜಾನನ್ನು ಅಲ್ಲಾ ರಕ್ಷಣೆ ಮಾಡಲಿ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯ ಆರಂಭವು ಯೂರೋಪ್, ಪೂರ್ವ ಏಷ್ಯಾ ರಾಷ್ಟ್ರಗಳಿಗೆ ಆಮೆರಿಕಾದ ಅಧಿಪತ್ಯದಿಂದ ಹೊರಬರಲು ಅವಕಾಶ ಎಂದು ಆಲ್​ಖೈದಾ ಹೇಳಿದೆ.

ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ತಾಲಿಬಾನ್ ನಾಯಕರು ಮೂರು ದಿನಗಳ ಕಾಲ ಸಭೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜಕೀಯ, ಭದ್ರತೆ, ಸಾಮಾಜಿಕ ವಿಷಯಗಳ ಬಗ್ಗೆ ಪ್ರಸ್ತಾಪವಾಗಿವೆ. ತಾಲಿಬಾನ್ ಸುಪ್ರೀಂ ಲೀಡರ್ ಹೇಬಿತುಲ್ಲಾ ಅಖುಂದಾಜಾ ನೇತೃತ್ವದಲ್ಲಿ ಈ ಸಭೆ ನಡೆದಿದೆ ಎಂದು ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ಕೊಟ್ಟಿದ್ದಾನೆ.

ಈಗ ತಾಲಿಬಾನ್ ಸಂಘಟನೆಯಲ್ಲಿ ಅಂತರಿಕವಾಗಿ ಎರಡು ಬಣಗಳಾಗಿವೆ. ತಾಲಿಬಾನ್ ಸ್ಥಾಪಕ ಮುಲ್ಲಾ ಓಮರ್ ಪುತ್ರ ಯಾಕೂಬ್ ಮುಲ್ಲಾ ಓಮರ್ ಹಾಗೂ ಹಕ್ಕಾನಿ ನೆಟ್ ವರ್ಕ್​ನ ಅನಾಸ್ ಹಕ್ಕಾನಿ ನಡುವೆ ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ನಿಯಂತ್ರಣ ಸಾಧಿಸಲು ಪೈಪೋಟಿ ಶುರುವಾಗಿದೆ. ಈ ಇಬ್ಬರಲ್ಲಿ ಯಾರ ಕೈ ಮೇಲಾಗುತ್ತೆ ಎನ್ನುವುದೇ ಈಗ ಕುತೂಹಲಕ್ಕೂ ಕಾರಣವಾಗಿದೆ.

ಸೇನೆ ಹಿಂತೆಗೆತಕ್ಕೆ ಜೋ ಬೈಡೆನ್ ಸಮರ್ಥನೆ ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡ ಕ್ರಮವನ್ನು ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಸೋಮವಾರ ಏರ್ ಲಿಫ್ಟ್ ಮುಗಿಯುವ ಮುನ್ನವೇ 5,500 ಆಮೆರಿಕನ್ನರು ಅಫ್ಘಾನಿಸ್ತಾನದಿಂದ ಹೊರ ಬಂದಿದ್ದಾರೆ. ಉಳಿದ ಆಮೆರಿಕನ್ನರು ವಾಪಸ್ ಬರಲು ಬಯಸಿದರೇ, ವ್ಯವಸ್ಥೆ ಮಾಡಲಾಗುವುದು ಎಂದು ಜೋ ಬೈಡೆನ್ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ನಮ್ಮ ಸಮರವು ಅಫ್ಘಾನಿಸ್ತಾನ ಮತ್ತು ಇತರ ದೇಶಗಳಲ್ಲಿ ಮುಂದುವರಿಯಲಿದೆ. ಐಸಿಎಸ್ ಖೊರಸನಾ ವಿರುದ್ಧದ ಹೋರಾಟವೂ ಇನ್ನೂ ಮುಗಿದಿಲ್ಲ. ಇದು ಅಫ್ಘಾನಿಸ್ತಾನದಲ್ಲಿ ಯುದ್ಧ ಅಂತ್ಯಗೊಳ್ಳುತ್ತಿರುವ ಕಾಲ. ಇದು ಈಗ ಭವಿಷ್ಯದ ಕಡೆ ನೋಡುವ ಸಮಯ, ಭೂತಕಾಲವನ್ನು ನೋಡುವ ಸಮಯವಲ್ಲ. ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡದ್ದು ತೀರ್ಮಾನ ಸರಿಯಾದ, ಬುದ್ಧಿವಂತಿಕೆಯ ತೀರ್ಮಾನ. ಯಾವುದೇ ಯುದ್ದಗಳಲ್ಲಿ ಕಡಿಮೆ ರಿಸ್ಕ್, ಕಡಿಮೆ ಗ್ರೇಡ್, ಕಡಿಮೆ ವೆಚ್ಚ ಎಂಬುದು ಇಲ್ಲ ಎಂದು ಆಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

(Afghanistan in the hands of Taliban for second day here is the round up of days development)

ಇದನ್ನೂ ಓದಿ: 30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಸೇರಿದಂತೆ ಭದ್ರತೆ, ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ತಾಲಿಬಾನ್ ಚರ್ಚೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ