30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ

ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ದುಭಾಷಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೊಹಮದ್ ಇದೀಗ ತಮ್ಮ ಜೀವ ಉಳಿಸಿಕೊಳ್ಳಲು ಅಮೆರಿಕ ಅಧ್ಯಕ್ಷರನ್ನು ಬೇಡುತ್ತಿದ್ದಾರೆ.

30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ
ನ್ಯಾಟೊ ಪಡೆಗಳಿಗೆ ದುಭಾಷಿಗಳ ನೆರವು ಬೇಕಿತ್ತು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 01, 2021 | 3:38 PM

ಅಮೆರಿಕ ಅಧ್ಯಕ್ಷರಾಗಿರುವ ಜೋ ಬೈಡೆನ್ 13 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಬಂದಿದ್ದಾಗ ಸೆನೆಟರ್ ಆಗಿದ್ದರು. ಆಗ ಜೀವ ಕಾಪಾಡಲು ನೆರವಾಗಿದ್ದು ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ದುಭಾಷಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೊಹಮದ್. ಇದೀಗ ಅವರು ತಮ್ಮ ಜೀವ ಉಳಿಸಿಕೊಳ್ಳಲು ಅಮೆರಿಕ ಅಧ್ಯಕ್ಷರನ್ನು ಬೇಡುತ್ತಿದ್ದಾರೆ. ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಅಮೆರಿಕ ಹೊರ ನಡೆದ ನಂತರ ಜೀವಭಯದಲ್ಲಿ ಮೊಹಮದ್ ನಲುಗಿ ಹೋಗಿದ್ದಾರೆ.

‘ಮಾನ್ಯ ಅಧ್ಯಕ್ಷರೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕಾಪಾಡಿ’ ಎಂದು ಮೊಹಮದ್ ವಾಲ್​ಸ್ಟ್ರೀಟ್ ಜರ್ನಲ್ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ ಮನವಿ ಮಾಡಿದರು. ತಮ್ಮ ಸುರಕ್ಷೆಯ ದೃಷ್ಟಿಯಿಂದ ಪೂರ್ಣ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.

ಇದೀಗ ಮೊಹಮದ್ ತಮ್ಮ ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ಬಚ್ಚಿಟ್ಟುಕೊಂಡಿದ್ದಾರೆ. 2008ರಲ್ಲಿ ಸೆನೆಟರ್ ಆಗಿದ್ದಾಗ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಜೋ ಬೈಡೆನ್ ಅವರೊಂದಿಗೆ ಇತರ ಸೆನೆಟರ್​ಗಳಾದ ಚುಕ್ ಹಗೆಲ್, ನೆಬ್, ಜಾನ್ ಕೆರಿ, ಮಾಸ್ ಸಹ ಇದ್ದರು. ಹಿಮಪಾತದ ಕಾರಣದಿಂದಾಗಿ ಅವರಿದ್ದ ಹೆಲಿಕಾಪ್ಟರ್​ಗಳು ಅಫ್ಘಾನಿಸ್ತಾನದ ಬಹುದೂರದ, ಒಳನಾಡಿನ ಕಣಿವೆಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಆ ದಿನಗಳಲ್ಲಿ ಮೊಹಮದ್ ಅಮೆರಿಕ ಸೇನೆಯ ದುಭಾಷಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ.

ತನ್ನನ್ನು ರಕ್ಷಿಸುವಂತೆ ಮೊಹಮದ್ ಮಾಡಿಕೊಂಡಿರುವ ವಿನಂತಿಯು ಇದೀಗ ಅಧ್ಯಕ್ಷ ಬೈಡೆನ್ ಅವರ ಆಪ್ತವಲಯವನ್ನು ತಲುಪಿದೆ. ಮೊಹಮದ್ ಮತ್ತು ಅವರ ಕುಟುಂಬದ ಸದಸ್ಯರನ್ನು ಅಮೆರಿಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಸ್​ಕಿ ಹೇಳಿದ್ದಾರೆ.

‘ನಿಮ್ಮ ಪರಿಶ್ರಮವನ್ನು ನಾವು ಗೌರವಿಸುತ್ತೇವೆ. ನಿಮ್ಮನ್ನು ಅಲ್ಲಿಂದ ಕರೆತರುತ್ತೇವೆ. ಈ ಕಾರ್ಯ ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ’ ಎಂದು ಪಸ್​ಕಿ ತಿಳಿಸಿದರು. ಮೊಹಮದ್ ಅವರಂತೆ 20 ವರ್ಷಗಳಿಂದ ಅಮೆರಿಕ ಸೇನೆಯನ್ನು ಬೆಂಬಲಿಸಿದ್ದ ಹಲವು ಅಫ್ಘಾನ್ ಪ್ರಜೆಗಳು ಇದೀಗ ತಾಲಿಬಾನಿಗಳಿಂದ ಪ್ರತೀಕಾರದ ಭೀತಿ ಎದುರಿಸುತ್ತಿದ್ದಾರೆ. ಅಮೆರಿಕ ಪ್ರವೇಶಿಸಲು ಬೇಕಾಗಿರುವ ವಿಶೇಷ ವಲಸಿಗರ ವಿಸಾ ಪಡೆಯುವುದೇ ದೊಡ್ಡ ಸವಾಲಾಗಿದೆ.

ವಿಶೇಷ ವಲಸಿಗರ ವಿಸಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಆಗಾಗ ಕಾಣಿಸಿಕೊಳ್ಳುತ್ತಿದೆ. ವಿವಿಧ ಅಧಿಕಾರಿಗಳ ನಡುವೆ ಕಾರ್ಯನಿರ್ವಹಣೆಯಲ್ಲಿ ಹೊಂದಾಣಿಕೆಯ ಕೊರತೆಯೂ ಇದೆ. ಒಬ್ಬ ವ್ಯಕ್ತಿ ವಿಸಾ ಪಡೆಯಲು 14 ಹಂತಗಳ ಪ್ರಕ್ರಿಯೆ ದಾಟಿಬರಬೇಕಿದೆ ಎಂದು ವಾಷಿಂಗ್​ಟನ್ ​ಪೋಸ್ಟ್​ ವರದಿ ಹೇಳಿದೆ.

ಮಾರ್ಚ್​ ತಿಂಗಳಲ್ಲಿ ವಾರಕ್ಕೆ 100 ವಿಸಾಗಳನ್ನು ನೀಡಲಾಗುತ್ತಿತ್ತು. ಆದರೆ ಈಚೆಗೆ ವಾರಕ್ಕೆ 813 ವಿಸಾಗಳನ್ನು ನೀಡಲಾಗುತ್ತಿದೆ. ಮೊಹಮದ್ ಅವರನ್ನು ಕೆಲಸಕ್ಕೆ ನಿಯೋಜಿಸಿದ್ದ ರಕ್ಷಣಾ ಗುತ್ತಿಗೆದಾರ ಮುಖ್ಯ ದಾಖಲೆಗಳನ್ನು ಕಳೆದುಕೊಂಡ ಕಾರಣ ಅವರ ವಿಸಾ ಮನವಿಗೆ ಮಾನ್ಯತೆ ಸಿಗುವುದು ತಡವಾಗುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಹೊರಡುವ ಪ್ರಯತ್ನದಲ್ಲಿದ್ದ ಮೊಹಮದ್​ ಅವರನ್ನು ಸ್ವೀಕರಿಸಲು ಅಮೆರಿಕ ಆಡಳಿತ ಸಿದ್ಧವಿತ್ತು. ಆದರೆ ಅವರ ಕುಟುಂಬವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಮೊಹಮದ್ ಸಹ ಅಫ್ಘಾನಿಸ್ತಾನದಲ್ಲಿಯೇ ಉಳಿದರು.

‘ನನಗೆ ತುಂಬಾ ಭಯವಾಗುತ್ತಿದೆ. ನಾವು ಮನೆಬಿಟ್ಟು ಹೊರಗೆ ಬರಲಾರೆ’ ಎಂದು ಹೇಳುತ್ತಿರುವ ಮೊಹಮದ್ ಅವರಿಗೆ ಇನ್ನಷ್ಟು ದಿನ ಕಾಯುವುದು ಬಿಟ್ಟರೆ ಈಗ ಬೇರೆ ಆಯ್ಕೆಯೇ ಉಳಿದಿಲ್ಲ.

(Mohammed of Afghanistan Stood to Save Joe Biden 13 Years Ago Now Waiting for Visa from America)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಸೇರಿದಂತೆ ಭದ್ರತೆ, ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ತಾಲಿಬಾನ್ ಚರ್ಚೆ

ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣ ಈಗ ತಾಲಿಬಾನ್ ಸುಪರ್ದಿಯಲ್ಲಿದೆ: ಏರ್​ಪೋರ್ಟ್​ ನಿರ್ವಹಣೆಯ ಕೌಶಲ ತಾಲಿಬಾನ್​ಗೆ ಇದೆಯೇ?

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ