Fact Check: ಹೆಲಿಕಾಪ್ಟರ್​ನಲ್ಲಿ ನೇತಾಡಿದ್ದು ಹೆಣವಲ್ಲ; ಸಂಭ್ರಮಾಚರಣೆ ಸಂದರ್ಭದಲ್ಲಿ ತಾಲಿಬಾನ್​ ಉಗ್ರನೇ ಜೋತುಬಿದ್ದಿದ್ದ

Fact Check: ಹೆಲಿಕಾಪ್ಟರ್​ನಲ್ಲಿ ನೇತಾಡಿದ್ದು ಹೆಣವಲ್ಲ; ಸಂಭ್ರಮಾಚರಣೆ ಸಂದರ್ಭದಲ್ಲಿ ತಾಲಿಬಾನ್​ ಉಗ್ರನೇ ಜೋತುಬಿದ್ದಿದ್ದ
ವೈರಲ್​ ವಿಡಿಯೋದಲ್ಲಿ ಕಂಡುಬಂದ ದೃಶ್ಯ

ಈಗ ಲಭ್ಯವಾಗಿರುವ ಸ್ಪಷ್ಟೀಕರಣದಲ್ಲಿ ಅಮೆರಿಕಾದ ಸೇನೆ ದೇಶ ತೊರೆದಿದ್ದಕ್ಕೆ ವಿಜಯೋತ್ಸವ ಆಚರಿಸುವ ಸಲುವಾಗಿ ಕಟ್ಟಡದ ಮೇಲೆ ತಾಲಿಬಾನ್ ಧ್ವಜ ಹಾರಿಸಲು ಯತ್ನಿಸಲಾಗಿತ್ತು. ಕೆಲ ಕಾರಣಗಳಿಂದ ಕಟ್ಟಡದ ಮೇಲೆ ಹೆಲಿಕಾಪ್ಟರ್ ಮೂಲಕ ಹೋಗಿ ಧ್ವಜ ಹಾರಿಸಲು ಸಾಧ್ಯವಾಗಿಲ್ಲ, ಹೀಗಾಗಿ ಹೆಲಿಕಾಪ್ಟರ್​ನಲ್ಲಿ ತಾಲಿಬಾನ್ ಉಗ್ರ ನೇತಾಡಿದ್ದಾನೆ ಎನ್ನಲಾಗಿದೆ.

TV9kannada Web Team

| Edited By: Skanda

Sep 01, 2021 | 12:30 PM

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಆಡಿದ್ದೇ ಆಟ, ಹೇಳಿದ್ದೇ ವೇದ ವಾಕ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅವರ ಪ್ರತಿಯೊಂದು ನಡೆಯನ್ನೂ ಅನುಮಾನದ ದೃಷ್ಟಿಯಿಂದಲೇ ನೋಡಲಾಗುತ್ತಿದೆ. ಅದರ ಪರಿಣಾಮವಾಗಿಯೇ ನಿನ್ನೆಯಷ್ಟೇ ಒಂದು ವಿಡಿಯೋ ಕುರಿತು ಭಾರೀ ಸಂಚಲನ ಸೃಷ್ಟಿಯಾಗಿತ್ತು. ತಾಲಿಬಾನಿಗಳು ತಮ್ಮ ಮಾತು ಕೇಳದ ವ್ಯಕ್ತಿಯೊಬ್ಬನನ್ನು ಕೊಂದು ಹೆಲಿಕಾಪ್ಟರ್​ಗೆ ನೇತು ಹಾಕಿ ಹಾರಾಡಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ, ಇಂದು ಆ ವಿಷಯಕ್ಕೆ ಸ್ಪಷ್ಟೀಕರಣ ಲಭ್ಯವಾಗಿದ್ದು, ಅಫ್ಘನಿಸ್ತಾನದ ಕಂದಹಾರ್​ನಲ್ಲಿ ತಾಲಿಬಾನಿಗಳು ಹೆಲಿಕಾಪ್ಟರ್​ನಲ್ಲಿ ಯಾರನ್ನೂ ನೇಣು ಹಾಕಿ ಹತ್ಯೆಗೈದಿಲ್ಲ. ತಾಲಿಬಾನ್ ಉಗ್ರನೊಬ್ಬ ಹೆಲಿಕಾಪ್ಟರ್​ನಲ್ಲಿ ನೇತಾಡುತ್ತಿರುವ ದೃಶ್ಯ ಅದು ಎನ್ನಲಾಗಿದೆ.

ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗೆ ವ್ಯಕ್ತಿಯೊಬ್ಬನನ್ನು ನೇತು ಹಾಕಿ ಕಂದಹಾರ್ ಮೇಲೆ ಹಾರಾಡುತ್ತಿರುವ ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗಿನಿಂದ ಹಲವು ರೀತಿಯ ಅನುಮಾನಕ್ಕೆ ಕಾರಣವಾಗಿತ್ತು. ಕಂದಹಾರ್ ಪ್ರಾಂತ್ಯದಲ್ಲಿ ಗಸ್ತು ತಿರುಗಲು ವಶಪಡಿಸಿಕೊಂಡಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕ್ರೂರ ತಾಲಿಬಾನ್‌ಗಳು ಒಬ್ಬ ವ್ಯಕ್ತಿಯನ್ನು ಕೊಂದು ನೇತು ಹಾಕಿದ್ದಾರೆ ಎಂದು ಹಲವಾರು ಪತ್ರಕರ್ತರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಕಂದಹಾರ್ ಪ್ರಾಂತ್ಯದ ಮೇಲೆ ತಾಲಿಬಾನ್ ವಶದಲ್ಲಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್​​ಗೆ ಹಗ್ಗ ಕಟ್ಟಿ ಅದರಲ್ಲಿ ಓರ್ವ ವ್ಯಕ್ತಿ ತೂಗಾಡುತ್ತಿರುವುದನ್ನು ಈ ದೃಶ್ಯಗಳು ವಿಡಿಯೊದಲ್ಲಿದ್ದು, ನೆಲದಿಂದ ಚಿತ್ರೀಕರಿಸಿದ ವಿಡಿಯೊದಲ್ಲಿ ಹೆಲಿಕಾಪ್ಟರ್​​ಗೆ ಕಟ್ಟಿದ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಆದರೆ ವರದಿಗಳಲ್ಲಿ ಮಾತ್ರ ತಾಲಿಬಾನಿಗಳು ಹೆಲಿಕಾಪ್ಟರ್​ಗೆ ವ್ಯಕ್ತಿಯ ಮೃತ ದೇಹವನ್ನು ಕಟ್ಟಿ ಹಾರಾಟ ನಡೆಸಿದ್ದಾರೆ ಎಂದೆನ್ನಲಾಗಿತ್ತು.

ಆದರೆ, ಈಗ ಲಭ್ಯವಾಗಿರುವ ಸ್ಪಷ್ಟೀಕರಣದಲ್ಲಿ ಅಮೆರಿಕಾದ ಸೇನೆ ದೇಶ ತೊರೆದಿದ್ದಕ್ಕೆ ವಿಜಯೋತ್ಸವ ಆಚರಿಸುವ ಸಲುವಾಗಿ ಕಟ್ಟಡದ ಮೇಲೆ ತಾಲಿಬಾನ್ ಧ್ವಜ ಹಾರಿಸಲು ಯತ್ನಿಸಲಾಗಿತ್ತು. ಕೆಲ ಕಾರಣಗಳಿಂದ ಕಟ್ಟಡದ ಮೇಲೆ ಹೆಲಿಕಾಪ್ಟರ್ ಮೂಲಕ ಹೋಗಿ ಧ್ವಜ ಹಾರಿಸಲು ಸಾಧ್ಯವಾಗಿಲ್ಲ, ಹೀಗಾಗಿ ಹೆಲಿಕಾಪ್ಟರ್​ನಲ್ಲಿ ತಾಲಿಬಾನ್ ಉಗ್ರ ನೇತಾಡಿದ್ದಾನೆ. ನೇತಾಡಿದವನು ಸಾವನ್ನಪ್ಪಿಲ್ಲ. ನೇತಾಡುವಾಗ ಆತ ಬದುಕಿದ್ದ, ಕೈ ಬೀಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋ ಬಗ್ಗೆ ಅನೇಕರಿಂದ ಫ್ಯಾಕ್ಟ್ ಚೆಕ್ ಮಾಡಲಾಗಿದ್ದು, ಅದರಲ್ಲಿ ವ್ಯಕ್ತಿಯನ್ನು ಹತ್ಯೆಗೈದು ನೇತು ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಅಮೆರಿಕ ಪಡೆಯ ನಿರ್ಗಮನದ ನಂತರ ವ್ಯಕ್ತಿಯೊಬ್ಬನನ್ನು ಹೆಲಿಕಾಪ್ಟರ್​​ಗೆ ನೇತು ಹಾಕಿ ಹಾರಾಟ ನಡೆಸಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಸೇರಿದಂತೆ ಭದ್ರತೆ, ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ತಾಲಿಬಾನ್ ಚರ್ಚೆ

(Its not dead body man dangling from helicopter in Kandahar viral video was fixing flag says report)

Follow us on

Related Stories

Most Read Stories

Click on your DTH Provider to Add TV9 Kannada