’ಜನರ ಅಭಿಪ್ರಾಯ ಬದಲಿಸಿ‘ ಎಂದಿದ್ದ ಬೈಡೆನ್​ಗೆ ಪಾಕ್​ ಉಗ್ರರ ಬಗ್ಗೆ ಹೇಳಿದ್ದ ಅಶ್ರಫ್​ ಘನಿ !

ಅಂದು ಬೈಡನ್​ ಮತ್ತು ಘನಿ ನಡುವೆ ಮಿಲಿಟರಿ ವ್ಯವಸ್ಥೆ, ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆದರೂ ಅಷ್ಟು ಬೇಗ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತದೆ. ಸರ್ಕಾರ ಪತನವಾಗುತ್ತದೆ ಎಂಬ ಅಂದಾಜು ಇಬ್ಬರಿಗೂ ಇರಲಿಲ್ಲ ಎಂದು ರಾಯಿಟರ್ಸ್​ ವರದಿ ಮಾಡಿದೆ.

’ಜನರ ಅಭಿಪ್ರಾಯ ಬದಲಿಸಿ‘ ಎಂದಿದ್ದ ಬೈಡೆನ್​ಗೆ ಪಾಕ್​ ಉಗ್ರರ ಬಗ್ಗೆ ಹೇಳಿದ್ದ ಅಶ್ರಫ್​ ಘನಿ !
ಜೋ ಬೈಡೆನ್​ ಮತ್ತು ಅಶ್ರಫ್​ ಘನಿ
Follow us
TV9 Web
| Updated By: Lakshmi Hegde

Updated on: Sep 01, 2021 | 4:36 PM

ಅಫ್ಘಾನಿಸ್ತಾನವನ್ನು ತಾಲಿಬಾನಿ (Taliban)ಗಳು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಕ್ಕೂ ಮೊದಲು ಅಂದರೆ ಜುಲೈ 23ರಂದು ಅಫ್ಘಾನ್​ನ ಆಗಿನ ಅಧ್ಯಕ್ಷ ಅಶ್ರಫ್​ ಘನಿ (Ashraf Ghani)ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden)​ಗೆ ಫೋನ್​ ಕರೆ ಮಾಡಿ, ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ದ ಉಗ್ರರು (Pakistani Terrorists) ಆಗಮಿಸಿದ್ದಾರೆ ಎಂಬ ವಿಷಯವನ್ನು ಹೇಳಿದ್ದರು ಎಂಬುದು ಇದೀಗ ಗೊತ್ತಾಗಿದೆ. ಅಂದು ದೂರವಾಣಿ ಕರೆ ಮಾಡಿದ್ದ ಅಶ್ರಫ್​ ಘನಿ, ಈಗಾಗಲೇ ತಾಲಿಬಾನಿಗಳು ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಅಫ್ಘಾನ್ (Afghanistan)​​ನನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು 10-15ಸಾವಿರ ಪಾಕಿಸ್ತಾನಿ ಉಗ್ರರು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಎಲ್ಲ ರೀತಿಯ ಸಂಚಾರ, ಹಣಕಾಸು ವ್ಯವಸ್ಥೆಯೂ ಆಗುತ್ತಿದೆ. ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ವಿಚಾರವನ್ನು ತಿಳಿಸಿದ್ದರು ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ಇದೀಗ ವರದಿ ಮಾಡಿದೆ. ಹಾಗೇ, ಅಂದು ಬೈಡನ್​ ಮತ್ತು ಘನಿ ಮಧ್ಯೆ 14 ನಿಮಿಷಗಳ ಮಾತುಕತೆ ನಡೆದಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಅಂದು ಬೈಡನ್​ ಮತ್ತು ಘನಿ ನಡುವೆ ಮಿಲಿಟರಿ ವ್ಯವಸ್ಥೆ, ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆದರೂ ಅಷ್ಟು ಬೇಗ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತದೆ. ಸರ್ಕಾರ ಪತನವಾಗುತ್ತದೆ ಎಂಬ ಅಂದಾಜು ಇಬ್ಬರಿಗೂ ಇರಲಿಲ್ಲ ಎಂದು ರಾಯಿಟರ್ಸ್ ಹೇಳಿದೆ. ಅವತ್ತು ಫೋನ್​ನಲ್ಲಿ ಮಾತುಕತೆ ನಡೆಯುವ ವೇಳೆ, ಅಫ್ಘಾನಿಸ್ತಾನದಲ್ಲಿ ಇದೀಗ ಉಂಟಾಗಿರುವ ಪರಿಸ್ಥಿತಿಯ ನಿಯಂತ್ರಣಕ್ಕೆ ನೀವು ಸಾರ್ವಜನಿಕವಾಗಿ ಮುಂದಾದರೆ, ನಾವದಕ್ಕೆ ಯಾವುದೇ ಬೆಂಬಲ ನೀಡುತ್ತೇವೆ ಎಂದು ಬೈಡನ್​​, ಘನಿಗೆ ಹೇಳಿದ್ದರು ಎನ್ನಲಾಗಿದೆ.

ಜನರ ಗ್ರಹಿಕೆ ಬದಲಿಸುವ ಪ್ರಯತ್ನ ಮಾಡಿ ಜುಲೈ 23ರಂದು ಬೈಡನ್​ ಒಂದು ಸಲಹೆಯನ್ನು ಅಶ್ರಫ್​ ಘನಿಗೆ ನೀಡಿದ್ದರು. ಅದೇನೆಂದರೆ, ಈಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅತಿಕ್ರಮಣ ಹೆಚ್ಚಿಸಿದ್ದಾರೆ. ಅಫ್ಘಾನ್​ ತಾಲಿಬಾನಿಗಳ ವಶವಾಗುತ್ತದೆ ಎಂದೇ ಜಗತ್ತಿನಾದ್ಯಂತ ಜನರು, ಆಡಳಿತಗಳು ಭಾವಿಸಿಕೊಂಡಿವೆ. ಆದರೆ ಈಗ, ಅಫ್ಘಾನಿಸ್ತಾನ ತಾಲಿಬಾನಿಗಳನ್ನು ಎದುರಿಸಲು ಸಿದ್ಧವಾಗಿದೆ, ಸುಸಜ್ಜಿತ ವ್ಯವಸ್ಥೆ ಮಾಡಿಕೊಂಡಿದೆ ಎಂದು ನೀವು ಸಾರ್ವಜನಿಕವಾಗಿ ಘೋಷಿಸಿ. ಈ ಮೂಲಕ ಜನರ ಅಭಿಪ್ರಾಯವನ್ನು ಬದಲಿಸಿ ಎಂದು ಬೈಡನ್​ ಹೇಳಿದ್ದರು. ಆಗ ಘನಿ, ಅಫ್ಘಾನ್​ನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದರು. ಇಲ್ಲಿರುವುದು ತಾಲಿಬಾನ್​ ಮಾತ್ರವಲ್ಲ. ಪಾಕಿಸ್ತಾನದ ಉಗ್ರರೂ ಇದ್ದಾರೆ. ಈ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಬೈಡೆನ್​ ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಪಾಕಿಸ್ತಾನ ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿದೆ ಎಂಬುದನ್ನು ಈ ಹಿಂದಿನ ಸರ್ಕಾರದ ಅಧಿಕಾರಿಗಳು, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್​ ಸೇರಿ ಹಲವರು ಪದೇಪದೆ ಒತ್ತಿ ಹೇಳಿದ್ದಾರೆ. ಆದರೆ ಪಾಕ್​ನ ಮಂತ್ರಿಗಳು, ರಾಜಕೀಯ ಮುಖಂಡರು ಇದನ್ನು ಅಲ್ಲಗಳೆಯುತ್ತಲೇ ಇದ್ದಾರೆ. ಆದರೂ ತಾಲಿಬಾನಿಗಳ ಆಡಳಿತ ಬಂದ ನಂತರ ಪಾಕ್​ ಸಂಭ್ರಮಿಸಿದ್ದನ್ನು ಇಡೀ ಜಗತ್ತು ನೋಡಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ: T20 World cup: ವಿಶ್ವದ ಮುಂದೆ ಭಾರತದ ಮಾನ ತೆಗೆದಿದ್ದ ಬಾಂಗ್ಲಾ ತಂಡದ ಓಪನರ್ ಟಿ-20 ವಿಶ್ವಕಪ್​ಗೆ ಗೈರು! ಕಾರಣ ಸಿಂಪಲ್

ಪ್ರಾಯಶ್ಚಿತವಾಗಿ ಗುರುದ್ವಾರವನ್ನು ಸ್ವಚ್ಛಗೊಳಿಸುವೆ; ಪಂಜ್ ಪ್ಯಾರೆ ಪದ ಬಳಕೆಗೆ ಕ್ಷಮೆಯಾಚಿಸಿದ ಹರೀಶ್ ರಾವತ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ