ಮಾರುತಿ ಸುಜುಕಿಯು ಭಾರತದಲ್ಲಿ 2022- ಬಲೆನೊವನ್ನು (Maruti Suzuki Baleno) ಬಿಡುಗಡೆ ಮಾಡಿದ್ದು, ಇದರ ಸಿಗ್ಮಾ ವೇರಿಯಂಟ್ನ ಮೂಲ ಬೆಲೆ ರೂ. 6.35 ಲಕ್ಷದಿಂದ ಪ್ರಾರಂಭ ಆಗುತ್ತದೆ. ಮತ್ತು ಟಾಪ್-ಎಂಡ್ ಆಲ್ಫಾ ಸ್ವಯಂಚಾಲಿತ ಟ್ರಿಮ್ ರೂ. 9.49 ಲಕ್ಷ ಆಗುತ್ತದೆ. ಹೊಸ ಮಾರುತಿ ಸುಜುಕಿ ಬಲೆನೊ ಅದರ ಹಿಂದಿನ ಆವೃತ್ತಿಗೆ ಹೋಲಿಸಿದರೆ ವ್ಯಾಪಕವಾಗಿ ಅಪ್ಡೇಟ್ ಆದ ಮಾದರಿಯಾಗಿದೆ. ಆದರೆ ಪ್ಲಾಟ್‌ಫಾರ್ಮ್ ಮತ್ತು ಪವರ್‌ಟ್ರೇನ್ ಒಂದೇ ಆಗಿರುತ್ತದೆ. ಈಗ ಮರುವಿನ್ಯಾಸಗೊಳಿಸಲಾದ ಮುಂಭಾಗವನ್ನು ಪಡೆಯುತ್ತದೆ, ಇದು ಮೊದಲಿಗಿಂತ ಹೆಚ್ಚು ಸಮಕಾಲೀನವಾಗಿ ಕಾಣುತ್ತದೆ. ಆದರೆ ಪ್ರೊಫೈಲ್ ಮತ್ತು ಹಿಂಭಾಗವು ಹೊಸದಾಗಿ ಹಾಗೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಹೊಸ ಮಾರುತಿ ಸುಜುಕಿ ಬಲೆನೊದ ಒಟ್ಟಾರೆ ಸಿಲ್ಹೌಟ್ ಮತ್ತು ಆಯಾಮಗಳು ಬದಲಾಗದೆ ಉಳಿದಿವೆ ಎಂದು ಭಾವಿಸಲಾಗಿದೆ. ಇದು ವಿಶಾಲವಾದ ಮತ್ತು ತೆಳ್ಳಗಿನ ಗ್ರಿಲ್ ಜೊತೆಗೆ ಹೊಸ ಬಂಪರ್ ಅನ್ನು ಹೊಂದಿದೆ. ಗ್ರಿಲ್ ಕ್ರೋಮ್ ಅಲಂಕರಣವನ್ನು ಪಡೆಯುತ್ತದೆ. ಅದು ಎಲ್ಇಡಿ ಡಿಆರ್ಎಲ್ಗಳೊಂದಿಗೆ ಆ್ಯಂಗುಲರ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಗಳಿಗೆ ವಿಸ್ತರಿಸುತ್ತದೆ. ಶೋಲ್ಡರ್ ರೇಖೆಯನ್ನು ಪರಿಷ್ಕರಿಸಲಾಗಿದೆ ಮತ್ತು ಇದು ಮೊದಲಿಗಿಂತ ಹೆಚ್ಚು ಸಮಕಾಲೀನವಾಗಿ ಕಾಣುತ್ತದೆ. ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು ಮತ್ತು ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿರುವ ವಿಂಗ್ ಕನ್ನಡಿಗಳನ್ನು ಅದರ ಹಿಂದಿನ ಮಾಡೆಲ್ನಂತೆಯೇ ಬಂದಿದ್ದು, 16-ಇಂಚಿನ ಅಲಾಯ್ ವ್ಹೀಲ್ನೊಂದಿಗೆ ಬಂದಿದೆ.
ಆದರೆ, ಹೊಸ ಬಲೆನೊದಲ್ಲಿ ಅತಿ ದೊಡ್ಡ ಅಪ್‌ಗ್ರೇಡ್ ಒಳಭಾಗದಲ್ಲಿದೆ. ಮತ್ತು ಈ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ತಯಾರಿಕೆಯಲ್ಲಿ ತಂತ್ರಜ್ಞಾನದ ಬದಲಾವಣೆ ಮೇಲೆ ಹೆಚ್ಚು ಗಮನ ಹರಿಸಲಾಗಿದ್ದು, ಕ್ಯಾಬಿನ್ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ. ಹೊಸ ಡ್ಯಾಶ್‌ಬೋರ್ಡ್ ದೊಡ್ಡದಾದ ಮತ್ತು ಸುಧಾರಿತ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಸ್ವತಂತ್ರ ಟಚ್‌ಸ್ಕ್ರೀನ್ ಘಟಕವನ್ನು ಮುಖ್ಯವಾಗಿ ತೆಗೆದುಕೊಳ್ಳುತ್ತದೆ. ಇದು ಹೆಚ್ಚು ತೀಕ್ಷ್ಣವಾದ ಮತ್ತು ಕ್ರಿಸ್ಪರ್ ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಎಲ್ಲ ರೀತಿಯಿಂದಲೂ ಹೊಸ ಇಂಟರ್ಫೇಸ್ ಅನ್ನು ಪಡೆಯುತ್ತದೆ.
ಹೊಸ ಮಾರುತಿ ಸುಜುಕಿ ಬಲೆನೊ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 40ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಹೊಸ ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್‌ನಲ್ಲಿ ಮಾರುತಿ ಇನ್ಬಿಲ್ಟ್ ನೇವಿಗೇಷನ್ ವ್ಯವಸ್ಥೆಯನ್ನು ಸಹ ನೀಡುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ವೈಶಿಷ್ಟ್ಯಗಳ ಪಟ್ಟಿಯು ಅಲೆಕ್ಸಾ ಅಸಿಸ್ಟೆನ್ಸ್, ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜಿಂಗ್, ARKAMYS ಟ್ಯೂನಿಂಗ್‌ನೊಂದಿಗೆ ಹೊಸ ಧ್ವನಿ ವ್ಯವಸ್ಥೆ ಮತ್ತು ಇತರವುಗಳಲ್ಲಿ 360-ಡಿಗ್ರಿ ಕ್ಯಾಮೆರಾ ವೀಕ್ಷಣೆಯನ್ನು ಒಳಗೊಂಡಿದೆ. ಪ್ರಮುಖ ಅಪ್ಡೇಟ್ ಆಗಿ ಒಳಭಾಗದಲ್ಲಿ ಆರು-ಏರ್‌ಬ್ಯಾಗ್‌ಗಳು ಇರಲಿವೆ. ಮತ್ತು ಈಗ ಬಲೆನೊ ಹಿಂಭಾಗದ ಎಸಿ ವೆಂಟ್ಗಳೊಂದಿಗೆ ಬರುತ್ತದೆ.
ಮಾರುತಿ ಸುಜುಕಿ ಬಲೆನೊ ಇದೀಗ 1.2-ಲೀಟರ್ VVT ಮೋಟಾರ್‌ನೊಂದಿಗೆ ಬರುತ್ತದೆ. ಇದು ಐದು-ವೇಗದ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸಲ್ಪಟ್ಟಿದೆ ಮತ್ತು ಐದು-ವೇಗದ AMT ಯೂನಿಟ್ ಆಪ್ಷನಲ್ ಆಗಿದೆ. ಹೊಸ ಮಾರುತಿ ಸುಜುಕಿ ಬಲೆನೊ ಕಾರು ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಹೋಂಡಾ ಜಾಝ್ ಮತ್ತು ಫೋಕ್ಸ್‌ವ್ಯಾಗನ್ ಪೋಲೋಗೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನೂ ಓದಿ: Maruti Suzuki Car Price: ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಜ. 15ರಿಂದ ಏರಿಕೆ
Published On - 7:05 pm, Wed, 23 February 22