ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಸಿಎನ್ ಜಿ ಕಾರು ಮಾದರಿಯು ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಎನ್ನುವ ಎರಡು ವೆರಿಯೆಂಟ್ ಗಳನ್ನು ಹೊಂದಿದ್ದು, ಎಲ್ಎಕ್ಸ್ಐ ವೆರಿಯೆಂಟ್ ರೂ. 5.90 ಲಕ್ಷ ಬೆಲೆ ಹೊಂದಿದ್ದರೆ ವಿಎಕ್ಸ್ಐ ಮಾದರಿಯು ರೂ. 6.10 ಲಕ್ಷ ಬೆಲೆ ಹೊಂದಿದೆ. ಎಸ್-ಪ್ರೆಸ್ಸೊ ಸಿಎನ್ ಜಿ ಕಾರು ಮಾದರಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತಲೂ ರೂ. 95 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ. ಹೊಸ ಸಿಎನ್ ಜಿ ಕಾರಿನಲ್ಲಿ ಕಂಪನಿಯು 1.0 ಲೀಟರ್ ಡ್ಯುಯಲ್ ಜೆಟ್ ಜೊತೆ ಡ್ಯುಯಲ್ ವಿವಿಟಿ ಕೆ10ಸಿ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಸಿಎನ್ ಜಿ ತಂತ್ರಜ್ಞಾದೊಂದಿಗೆ ಹೊಸ ಕಾರು ಪ್ರತಿ ಕೆಜಿಗೆ ಗರಿಷ್ಠ 32.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಹೊಸ ಕಾರಿನಲ್ಲಿ ಸಿಎನ್ ಜಿ ತಂತ್ರಜ್ಞಾನ ಜೋಡಣೆ ಹೊರತುಪಡಿಸಿ ಸಾಮಾನ್ಯ ಮಾದರಿಯಲ್ಲಿರುವಂತೆ ಫೀಚರ್ಸ್ ಹೊಂದಿರಲಿದ್ದು, ಹೆಚ್ಚಿನ ಮೈಲೇಜ್ ಕಾರುಗಳನ್ನು ಖರೀದಿ ಬಯಸುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ. ದುಬಾರಿ ಇಂಧನಗಳ ಪರಿಣಾಮ ಹೊಸ ಕಾರು ಖರೀದಿದಾರರು ಹೆಚ್ಚು ಮೈಲೇಜ್ ಪ್ರೇರಿತ ಸಿಎನ್ ಜಿ ಕಾರುಗಳತ್ತ ಮುಖ ಮಾಡುತ್ತಿದ್ದು, ಸಿಎನ್‌ಜಿ ಕಾರಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದೆ.
ಸಂಕುಚಿತ ನೈಸರ್ಗಿಕ ಅನಿಲವು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಪೆಟ್ರೋಲ್ ಮಾದರಿಗಳಿಂದಲೂ ಸಾಕಷ್ಟು ಕಡಿಮೆಯಾಗಿರಲಿದ್ದು, ಇದು ಇಂಧನ ಮಿತವ್ಯಯವೆನಿಸಿಕೊಂಡಿದೆ. ಆದರೆ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್ ಜಿ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರಲಿದ್ದು, ಆದರೆ ಇಂಧನ ದಕ್ಷತೆ ಹೆಚ್ಚಿರುತ್ತದೆ.
ಹೀಗಾಗಿ ಮಾರುತಿ ಸುಜುಕಿಯು ಸಿಎನ್ ಜಿ ಮಾದರಿಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್ ನೀಡಿದರೆ ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ ಗರಿಷ್ಠ 32.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಮತ್ತಷ್ಟು ಉದ್ಯಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.