ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದಿರುವ ಮಹೀಂದ್ರಾ ಎಕ್ಸ್ ಯುವಿ300 ಟರ್ಬೊಸ್ಪೋರ್ಟ್ ವಿಶೇಷತೆಗಳಿವು!
ಮಹೀಂದ್ರಾ ಕಂಪನಿಯು ತನ್ನ ಹೊಸ ಜನಪ್ರಿಯ ಕಂಪ್ಯಾಕ್ಟ್ ಎಸ್ ಯುವಿ ಎಕ್ಸ್ ಯುವಿ300 ಮಾದರಿಯಲ್ಲಿ ಟರ್ಬೊಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.35 ಲಕ್ಷ ಆರಂಭಿಕ ಬೆಲೆ ಹೊಂದಿದೆ.
ಹೊಸ ಎಕ್ಸ್ ಯುವಿ300 ಟರ್ಬೊಸ್ಪೋರ್ಟ್ (XUV300 Turbo) ಆವೃತ್ತಿಯನ್ನು ಮಹೀಂದ್ರಾ (Mahindra)ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯ ಡಬ್ಲ್ಯು6, ಡಬ್ಲ್ಯು8 ಮತ್ತು ಡಬ್ಲ್ಯು6 ಆಪ್ಷನ್ ವೆರಿಯೆಂಟ್ ಗಳನ್ನು ಆಧರಿಸಿ ಮಾರಾಟ ಮಾಡಲಿದ್ದು, ಆರಂಭಿಕ ವೆರಿಯೆಂಟ್ ರೂ. 10.35 ಲಕ್ಷ ಬೆಲೆ ಹೊಂದಿದ್ದರೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಹೊಂದಿರುವ ಟಾಪ್ ಎಂಡ್ ವೆರಿಯೆಂಟ್ ರೂ. 12.90 ಲಕ್ಷ ಬೆಲೆ ಹೊಂದಿದೆ.
ಹೊಸ ಕಾರಿನ ಆರಂಭಿಕ ವೆರಿಯೆಂಟ್ ನಲ್ಲಿ ಕಂಪನಿಯು ಸಿಂಗಲ್ ಟೋನ್ ಬಣ್ಣದ ಆಯ್ಕೆ ನೀಡಿದ್ದರೆ ನಂತರ ಎರಡು ವೆರಿಯೆಂಟ್ ಗಳಲ್ಲಿ ಸಿಂಗಲ್ ಟೋನ್ ಜೊತೆಗೆ ಡ್ಯುಯಲ್ ಬಣ್ಣದ ಆಯ್ಕೆ ನೀಡಿದೆ. ಡ್ಯುಯಲ್ ಟೋನ್ ಮಾದರಿಗಳು ಸಿಂಗಲ್ ಟೋನ್ ಬಣ್ಣದ ಮಾದರಿಗಳಿಂತಲೂ ತುಸು ಹೆಚ್ಚುವರಿ ದರ ಹೊಂದಿರಲಿದ್ದು, ಡ್ಯುಯಲ್ ಟೋನ್ ಇಷ್ಟಪಡುವ ಗ್ರಾಹಕರು ರೂ. 15 ಸಾವಿರ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ಎಕ್ಸ್ ಯುವಿ300 ಟರ್ಬೊಸ್ಪೋರ್ಟ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖವಾಗಿ ಆರು ಬಣ್ಣಗಳ ಆಯ್ಕೆ ಹೊಂದಿದ್ದು, ಇದರಲ್ಲಿ ಹೊಸ ಆವೃತ್ತಿಗೆ ವಿಶೇಷವಾಗಿ ನ್ಯೂ ಬ್ಲೆಜಿಂಗ್ ಬ್ರೋನ್ಜ್ ಪರಿಚಯಿಸಲಾಗಿದೆ. ಡ್ಯುಯಲ್ ಟೋನ್ ಮಾದರಿಗಳಲ್ಲಿ ವಿಶೇಷವಾಗಿ ಬ್ಲ್ಯಾಕ್ ರೂಫ್ ಹೊಂದಿರಲಿದ್ದು, ಹೊಸ ಬಣ್ಣದ ಆಯ್ಕೆಯು ಸ್ಪೋರ್ಟಿ ಲುಕ್ ಹೆಚ್ಚಿಸಿವೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಮಹೀಂದ್ರಾ ಕಂಪನಿಯು ಹೊಸ ಟರ್ಬೊಸ್ಪೋರ್ಟ್ ಆವೃತ್ತಿಯಲ್ಲಿ 1.2 ಲೀಟರ್ ಎಂಸ್ಟಾಲಿನ್ ಟಿಜಿಡಿಐ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 128.2 ಬಿಎಚ್ ಪಿ ಮತ್ತು 230 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಹೊಸ ಆವೃತ್ತಿಯಲ್ಲಿ ಕಂಪನಿಯು ಕೇವಲ ಮ್ಯಾನುವಲ್ ಮಾದರಿಯನ್ನು ಮಾತ್ರ ಪರಿಚಯಿಸಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೊಸ ಆವೃತ್ತಿಯು ಹೆಚ್ಚುವರಿಯಾಗಿ 19 ಬಿಎಚ್ ಪಿ, 30 ಎನ್ ಎಂ ಉತ್ಪಾದಿಸಲಿದೆ.
ಈ ಮೂಲಕ ಹೊಸ ಆವೃತ್ತಿಯು ಕೇವಲ 5 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿ ಗುರುತಿಸಲು ಹಲವಾರು ಸ್ಪೋರ್ಟಿ ಫೀಚರ್ಸ್ ನೀಡಲಾಗಿದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಟರ್ಬೊಸ್ಪೋರ್ಟ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾದ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರಿನಲ್ಲಿ ಟ್ವಿನ್ ಪ್ರಿಕ್ ಬ್ಯಾಡ್ಜ್, ರೆಡ್ ಆಕ್ಸೆಂಟ್ ಹೊಂದಿರುವ ಗ್ರಿಲ್ ಮತ್ತು ಬಂಪರ್, ಹಾಗೆಯೇ ಬ್ಲ್ಯಾಕ್ ಬಣ್ಣದ ರಿಯಲ್ ವ್ಯೂ ಮಿರರ್ ಸೌಲಭ್ಯ ಹೊಂದಿದೆ.
ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಸ್ಪೋರ್ಟಿ ಡಿಸೈನ್ ಜೊತೆ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಬ್ಲ್ಯಾಕ್ ಬಣ್ಣದ ಕ್ಯಾಬಿನ್ ಜೊತೆಗೆ ಲೆದರ್ ವ್ಯಾರ್ಪ್ ಹೊಂದಿರುವ ಸ್ಪೋರ್ಟಿ ಸ್ಟೀರಿಂಗ್ ವ್ಹೀಲ್ ಮತ್ತು ಗೇರ್ ಲಿವರ್, ಸ್ಪೋರ್ಟಿ ಕ್ರೊಮ್ ಹೊಂದಿರುವ ಪೆಡಲ್ ಮತ್ತು ಲೆದರ್ ಆಸನಗಳು ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಿವೆ.
ಇದನ್ನು ಓದಿ: Keeway SR125: ಯಮಹಾ ಆರ್ ಎಕ್ಸ್ 100 ನೆನಪಿಸುವ ಕೀವೇ ಎಸ್ಆರ್125 ಬೈಕ್ ಬಿಡುಗಡೆ
ಮುಖ್ಯವಾಗಿ ಹೊಸ ಮಾದರಿಯನ್ನು ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಪ್ರಮುಖ ಕಂಪನಿಗಳು ತಮ್ಮ ಪ್ರಮುಖ ಸಬ್ ಕಂಪ್ಯಾಕ್ಟ್ ಎಸ್ ಯುವಿಗಳಲ್ಲಿ ಟರ್ಬೊ ವರ್ಷನ್ ಬಿಡುಗಡೆ ಮಾಡಿರುವುದು ಎಕ್ಸ್ ಯುವಿ300 ಟರ್ಬೊಸ್ಪೋರ್ಟ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸಬ್ ಕಂಪ್ಯಾಕ್ಟ್ ಎಸ್ ಯುವಿಗಳ ಟರ್ಬೊ ವರ್ಷನ್ ವಿಭಾಗದಲ್ಲಿ ಹ್ಯುಂಡೈ ವೆನ್ಯೂ ಎನ್ ಲೈನ್, ಕಿಯಾ ಸೊನೆಟ್ ಎಕ್ಸ್ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಎಕ್ಸ್ ಯುವಿ300 ಟರ್ಬೊಸ್ಪೋರ್ಟ್ ಮಾದರಿಯು ಮೊದಲೆಡು ಮಾದರಿಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಮೂಲಕ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.