ಭಾರತದ ಕಂಪೆನಿಗಳ ಒಟ್ಟಾರೆ ಆದಾಯದಲ್ಲಿ ಶೇ 72ರಷ್ಟು ದೇಶೀ ಮಾರುಕಟ್ಟೆಯಿಂದಲೇ ಬರುತ್ತದೆ ಎಂಬುದು ಈಚೆಗಿನ ಮೊರ್ಗನ್ ಸ್ಟ್ಯಾನ್ಲಿ ವರದಿಯಿಂದ ತಿಳಿದುಬಂದಿದೆ. ಇನ್ನು ಬಾಕಿ ಆದಾಯವು ಅಭಿವೃದ್ಧಿ ಹೊಂದಿದ ಮಾರುಕಟ್ಟೆ (DM) ಹಾಗೂ ಮುಂದುವರಿಯುತ್ತಿರುವ ಮಾರುಕಟ್ಟೆ (EM)ಯಿಂದ ಬರುತ್ತದೆ. ಈ ಬಗ್ಗೆ “ಗ್ಲೋಬಲ್ ಎಕ್ಸ್ಪೋಷರ್ ಗೈಡ್ 2021” ಹೆಸರಲ್ಲಿ ವರದಿ ಪ್ರಕಟವಾಗಿದೆ. ಜಾಗತಿಕ ಮಟ್ಟದಲ್ಲಿ 3,300 ಕಂಪೆನಿಗಳ ವಿಶ್ಲೇಷಣೆ ಮಾಡಲಾಗಿದೆ. ಅವುಗಳಿಗೆ 17 ವಿವಿಧ ಪ್ರಾದೇಶಿಕ ಭಾಗಗಳಲ್ಲಿ ಆದಾಯ ಬರುವುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ವರದಿಯನ್ನು ಜೊನಾಥನ್ ಎಫ್ ಗಾರ್ನರ್ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ಚೀನಾ ಕಂಪೆನಿಗಳ ಒಟ್ಟಾರೆ ಆದಾಯದಲ್ಲಿ ಶೇ 86ರಷ್ಟು ಆ ದೇಶದ ಮಾರುಕಟ್ಟೆಯಿಂದಲೇ ಬರುತ್ತದೆ. ಇನ್ನು ತಲಾ ಶೇ 7ರಷ್ಟು ಡಿಎಂ (ಮುಂದುವರಿದ ಮಾರುಕಟ್ಟೆ) ಹಾಗೂ ಇಎಂ (ಮುಂದುವರಿಯುತ್ತಿರುವ ಮಾರುಕಟ್ಟೆ) ಮೂಲಗಳಿಂದ ಬರುತ್ತವೆ.
ಚೈನೀಸ್ ಮತ್ತು ಭಾರತೀಯ ಕಂಪೆನಿಗಳ ಆದಾಯವು ಶೇಕಡಾ 9ರಷ್ಟು ಸರ್ಕಾರದ ವೆಚ್ಚದಿಂದ ಬರುತ್ತವೆ. ಮುಖ್ಯವಾಗಿ ಕ್ಯಾಪಿಟಲ್ ಗೂಡ್ಸ್ ವಾಣಿಜ್ಯ ಮತ್ತು ವೃತ್ತಿಪರ ಸೇವೆಗಳು, ಸಾಫ್ಟ್ವೇರ್ ಮತ್ತು ಇತರ ಉಪಯುಕ್ತತೆಗಳು ಇದರಲ್ಲಿ ಒಳಗೊಂಡಿದೆ. ಸರಾಸರಿಯಾಗಿ ನೋಡಿದರೆ, ಮುಂದುವರಿಯುತ್ತಿರುವ ದೇಶಗಳಲ್ಲಿ ಇರುವ ಕಂಪೆನಿಗಳ ಆದಾಯದಲ್ಲಿ ಶೇ 72ರಷ್ಟು ಅವು ಕಾರ್ಯ ನಿರ್ವಹಿಸುವ ದೇಶದಲ್ಲೇ ಬರುತ್ತದೆ. ಇನ್ನು ಬಾಕಿ ಶೇ 28ರಷ್ಟು ಆದಾಯವು ಮುಂದುವರಿದ ಹಾಗೂ ಮುಂದುವರಿಯುತ್ತಿರುವ ಮಾರುಕಟ್ಟೆಗಳಿಂದ ಸಮಾನವಾಗಿ ಬರುತ್ತಿದೆ. ಯಾವ ದೇಶಗಳಿಗೆ ಮುಂದುವರಿದ ಮಾರುಕಟ್ಟೆಯಿಂದ ಎಷ್ಟು ಹಾಗೂ ಮುಂದುವರಿಯುತ್ತಿರುವ ಮಾರುಕಟ್ಟೆಯಿಂದ ಎಷ್ಟು ಆದಾಯ ಬರುತ್ತದೆ ಎಂಬ ವಿವರ ಶೇಕಡಾವಾರು ಮಾಹಿತಿ ಇಲ್ಲಿದೆ.
ದೇಶಗಳು ಡಿಎಂ ಆದಾಯ ಇಎಂ ಆದಾಯ ದೇಶೀಯ ಮಾರುಕಟ್ಟೆ ಆದಾಯ
ತೈವಾನ್ 45 24 30
ಸೌದಿ ಅರೇಬಿಯಾ 27 36 37
ಹಾಂಕಾಂಗ್ 29 29 42
ಸಿಂಗಾಪೂರ್ 19 37 44
ದಕ್ಷಿಣ ಆಫ್ರಿಕಾ 26 27 47
ಮೆಕ್ಸಿಕೋ 25 25 49
ರಷ್ಯಾ 27 23 50
ದಕ್ಷಿಣ ಕೊರಿಯಾ 22 25 53
ಆಸ್ಟ್ರೇಲಿಯಾ 19 24 57
ಇಂಡೋನೇಷ್ಯಾ 3 37 60
ಜಪಾನ್ 22 17 61
ಬ್ರೆಜಿಲ್ 16 20 64
ಭಾರತ 19 9 72
ಥಾಯ್ಲೆಂಡ್ 5 22 73
ಮಲೇಷ್ಯಾ 1 26 73
ಟರ್ಕಿ 8 7 85
ಚೀನಾ 7 7 86
ಫಿಲಿಪೈನ್ಸ್ 4 3 92
(ಮಾಹಿತಿ ಮೂಲ: ಮೊರ್ಗನ್ ಸ್ಟ್ಯಾನ್ಲಿ ವರದಿ)
ಇದನ್ನೂ ಓದಿ: ಕೊವಿಡ್ ಸಂಕಷ್ಟದಲ್ಲಿಯೂ 4 ಲಕ್ಷ ಕಾರ್ಮಿಕರಿಗೆ ಜೀವನಾಧಾರವಾದ ಅಗರಬತ್ತಿ ಉದ್ಯಮ
(Indian companies revenue from domestic market is 72%. Remaining from developed market and emerging market. Here is the details of other countries)