ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುವ ಟಾಟಾ ಟಿಯಾಗೋ ಇವಿ ಕಾರಿಗೆ ಭಾರೀ ಡಿಮ್ಯಾಂಡ್

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 12, 2022 | 1:24 PM

ಮೋಟಾರ್ಸ್ ಟಾಟಾಕಂಪನಿಯು ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಹೊಸ ಇವಿ ಕಾರಿಗೆ ಅತಿ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಬೇಡಿಕೆ ದಾಖಲಾಗಿದೆ.

ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುವ ಟಾಟಾ ಟಿಯಾಗೋ ಇವಿ ಕಾರಿಗೆ ಭಾರೀ ಡಿಮ್ಯಾಂಡ್
Newly Launched Tata Tiago Electric Hachback Rceived 10,000 Bookings In Just One Day
Follow us on

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು  ( Tiago Electric) ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬುಕಿಂಗ್ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಕಳೆದ ತಿಂಗಳು 28ರಂದು ಬಿಡುಗಡೆ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ನಿನ್ನೆಯಷ್ಟೇ ರೂ. 21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿತ್ತು. ಬುಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದು, ಎಲೆಕ್ಟ್ರಿಕ್ ಕಾರು ಮಾದರಿಯೊಂದು ಒಂದೇ ದಿನದಲ್ಲಿ ಪಡೆದುಕೊಂಡ ಅತಿ ಹೆಚ್ಚು ಬೇಡಿಕೆ ಇದಾಗಿದೆ.

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಬೆಳವಣೆಯ ನೀರಿಕ್ಷೆಯಲ್ಲಿದ್ದು, ಬಜೆಟ್ ಬೆಲೆಯೊಂದಿಗೆ ಹೊಸ ಟಿಯಾಗೋ ಇವಿ ಕಾರು ಹೊಸ ಸಂಚಲನ ಮೂಡಿಸಿದೆ.

ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ

ಹೊಸ ಟಿಗೋರ್ ಇವಿ ಕಾರು ಮಾದರಿಯನ್ನು ಟಾಟಾ (Tata) ಮೋಟಾರ್ಸ್ ಕಂಪನಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯನ್ನು ರೂ. 11.79 ಲಕ್ಷಕ್ಕೆ ಮಾರಾಟ ಮಾಡಲಿದ್ದು, ಆರಂಭಿಕ ಬೆಲೆಗಳು ಮೊದಲ ಹಂತದಲ್ಲಿ ಕಾರು ಖರೀದಿಸುವ 10 ಸಾವಿರ ಗ್ರಾಹಕರಿಗೆ ಮಾತ್ರ ಅನ್ವಯಿಸಲಿದೆ.

ಮೊದಲ ಹಂತದಲ್ಲಿ ಮಾರಾಟಗೊಳ್ಳಲಿರುವ 10 ಸಾವಿರ ಯುನಿಟ್ ನಂತರ ಹೊಸ ಟಿಯಾಗೋ ಇವಿ ಖರೀದಿಸುವ ಗ್ರಾಹಕರಿಗೆ ಬೆಲೆ ಹೆಚ್ಚಿಸುವುದಾಗಿ ಹೇಳಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ದರ ಹೆಚ್ಚಿಸಲಿದ್ದು, ಈ ಹಿನ್ನಲೆಯಲ್ಲಿ ಗ್ರಾಹಕರು ಆರಂಭಿಕ ಬೆಲೆಯಲ್ಲಿ ಹೊಸ ಕಾರು ಖರೀದಿಸಲು ಮುಗಿಬಿದ್ದಿದ್ದಾರೆ.

ಮುಂಬರುವ ಜನವರಿಯಿಂದ ಹೊಸ ಕಾರಿನ ವಿತರಣೆಯು ಆರಂಭವಾಗಲಿದ್ದು, ಟಿಯಾಗೋ ಇವಿ ಕಾರು ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಆಧರಿಸಿ ಎಕ್ಸ್ಇ, ಎಕ್ಸ್ ಟಿ, ಎಕ್ಸ್ ಜೆಡ್ ಪ್ಲಸ್, ಎಕ್ಸ್ ಜೆಡ್ ಪ್ಲಸ್ ಟೆಕ್ ಲಕ್ಸ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.

ಬ್ಯಾಟರಿ ಮತ್ತು ಮೈಲೇಜ್

ಆರಂಭಿಕ ಮಾದರಿಗಳು 19.2kWh ಬ್ಯಾಟರಿ ಪ್ಯಾಕ್ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳು 24kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಹೊಸ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿವೆ.

19.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ ಇವಿ ಕಾರು ಮಾದರಿಯು ಪ್ರತಿ ಚಾರ್ಜ್ ಗೆ 250 ಕಿ.ಮೀ ಮೈಲೇಜ್ ನೀಡಲಿದ್ದರೆ 24kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುತ್ತದೆ.

ಸುರಕ್ಷಾ ಸೌಲಭ್ಯಗಳು

IP67 ಮಾನದಂಡಗಳನ್ನು ಪೂರೈಸಿರುವ ಹೊಸ ಟಿಯಾಗೋ ಇವಿ ಕಾರಿನಲ್ಲಿರುವ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಮೋಟಾರ್ ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿದ್ದು, ಬ್ಯಾಟರಿ ಮತ್ತು ಮೋಟಾರ್ ಮೇಲೆ ಕಂಪನಿಯು 1.60 ಲಕ್ಷ ಕಿ.ಮೀ ಇಲ್ಲವೇ 8 ವರ್ಷಗಳಿಗೆ ಅನ್ವಯಿಸುವಂತೆ ಗರಿಷ್ಠ ವಾರಂಟಿ ನೀಡುತ್ತದೆ.

ಇದನ್ನು ಓದಿ: ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ರವಿ ಕುಮಾರ್ ಎಸ್ ರಾಜೀನಾಮೆ

ಇನ್ನು ಹೊಸ ಇವಿ ಕಾರು ಮಾದರಿಯ ವಿನ್ಯಾಸವು ಸಾಮಾನ್ಯ ಟಿಯಾಗೋ ಮಾದರಿಯಂತೆ ನೀಡಲಾಗಿದ್ದರೂ ಕೆಲವು ಹೊಸ ಫೀಚರ್ಸ್ ಗಳು ಪೆಟ್ರೋಲ್ ಮಾದರಿಗಿಂತಲೂ ವಿಭಿನ್ನವಾಗಿಸಲು ಸಹಕಾರಿಯಾಗಿದ್ದು, ಹಲವಾರು ಸುರಕ್ಷಾ ಸೌಲಭ್ಯಗಳು ಈ ಕಾರಿನಲ್ಲಿವೆ.

ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಮಲ್ಟಿ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯಲ್ ಪಾರ್ಕಿಂಗ್ ಕ್ಯಾಮೆರಾ, ಸೀಟ್ ಬೇಲ್ಟ್ ರಿಮೆಂಡರ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

Published On - 1:20 pm, Wed, 12 October 22