AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ರವಿ ಕುಮಾರ್ ಎಸ್ ರಾಜೀನಾಮೆ

ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯವನ್ನು ಘೋಷಿಸುವ ಕೆಲವೇ ದಿನಗಳಷ್ಟು ಮೊದಲು ರವಿಕುಮಾರ್ ಅವರು ರಾಜೀನಾಮೆ ಸಲ್ಲಿಸಿದ್ದು ಅವರು ರಾಜೀನಾಮೆ ಸಲ್ಲಿಸುವ ಹಿಂದಿನ ಕಾರಣದ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಸಂಸ್ಥೆ ನೀಡಿಲ್ಲ.

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ರವಿ ಕುಮಾರ್ ಎಸ್ ರಾಜೀನಾಮೆ
ಇನ್ಫೋಸಿಸ್
TV9 Web
| Edited By: |

Updated on:Oct 12, 2022 | 11:39 AM

Share

ಮಾಹಿತಿ ತಂತ್ರಜ್ಞಾನ ಸೇವೆಗಳ ಪ್ರಮುಖ ಸಂಸ್ಥೆ ಇನ್ಫೋಸಿಸ್ (Infosys) ಮಂಗಳವಾರ ಸಾಯಂಕಾಲ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿ ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಎಸ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆಂದು ಹೇಳಿದೆ. ಸಂಸ್ಥೆ ಬೋರ್ಡ್ ನಿರ್ದೇಶಕರು ರವಿಕುಮಾರ್ ಎಸ್ (Ravikumar S ) ಅವರ ಸೇವೆಯನ್ನು ಪ್ರಶಂಸಿಸಿ ಸಂಸ್ಥೆಗೆ ನೀಡಿದ ಕಾಣಿಕೆಯನ್ನು (contribution) ಕೊಂಡಾಡಿದ್ದಾರೆ, ಎಂದು ಇನ್ಫೋಸಿಸ್ ಸಂಸ್ಥೆಯು ತನ್ನ ಆಡಳಿತಾತ್ಮಕ ಪ್ರಕಣಣೆಯೊಂದರಲ್ಲಿ ಹೇಳಿದೆ.

ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯವನ್ನು ಘೋಷಿಸುವ ಕೆಲವೇ ದಿನಗಳಷ್ಟು ಮೊದಲು ರವಿಕುಮಾರ್ ಅವರು ರಾಜೀನಾಮೆ ಸಲ್ಲಿಸಿದ್ದು ಅವರು ರಾಜೀನಾಮೆ ಸಲ್ಲಿಸುವ ಹಿಂದಿನ ಕಾರಣದ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಸಂಸ್ಥೆ ನೀಡಿಲ್ಲ.

ಅಧ್ಯಕ್ಷನ ಸಾಮರ್ಥ್ಯದಲ್ಲಿ ರವಿಕುಮಾರ ಅವರು ಇನ್ಫೋಸಿಸ್ ಗ್ಲೋಬಲ್ ಸರ್ವಿಸಸ್ ಸಂಸ್ಥೆಯ ಅಧೀನದಲ್ಲಿರುವ ಎಲ್ಲ ಉದ್ಯಮಗಳ ಮುಂದಾಳತ್ವ ವಹಿಸಿದ್ದರು. ಇನ್ಫೋಸಿಸ್ ಸಂಸ್ಥೆ ಒದಗಿಸುವ ಸೇವೆಗಳ ಭಾಗವಾಗಿರುವ ಡಿಜಿಟಲ್ ಸೇಲ್ಸ್, ತಂತ್ರಜ್ಞಾನ, ಇನ್ಫ್ರಾಸ್ಟ್ರಕ್ಚರ್ (ಮೂಲಸೌಕರ್ಯ), ಎಂಜಿನೀಯರಿಂಗ್ ಮತ್ತು ಪ್ರೊಸೆಸ್ ವರ್ಟಿಕಲ್ಸ್ ಮೊದಲಾದವುಗಳನ್ನು ಅವರು ಮುನ್ನಡೆಸಿದರು.

ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಪರಮಾಣು ವಿಜ್ಞಾನಿಯಾಗಿ ತಮ್ಮ ವೃತ್ತಿಬದುಕನ್ನು ಆರಂಭಿಸಿದ ರವಿಕುಮಾರ 2002 ರಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸೇರಿದ್ದರು.

2017 ರಲ್ಲಿ ಅವರಿಗೆ ಸಂಸ್ಥೆಯ ಉಪ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಬಡ್ತಿ ನೀಡಿದಾಗ ಮುಂದಿನ ಸಿಒಒ ಅವರೇ ಆಗಲಿದ್ದಾರೆಂದು ಹೇಳಲಾಗಿತ್ತು. ಅದರೆ ಆ ಸ್ಥಾನದಲ್ಲಿದ್ದ ಯುಬಿ ಪ್ರವೀಣ್ ರಾವ್ ನಿವೃತ್ತಿಯ ನಂತರ ಇನ್ಫೋಸಿಸ್ ಆ ಹುದ್ದೆಯನ್ನೇ ರದ್ದು ಮಾಡಿತು.

ಇನ್ಫೋಸಿಸ್ ಸಂಸ್ಥೆಯ 2021-22 ವಾರ್ಷಿಕ ವರದಿತ ಪ್ರಕಾರ ರವಿಕುಮಾರ ಅವರು ಸಂಸ್ಥೆಯ ಸಿಇಒ ಸಲೀಲ್ ಪಾರೆಖ್ ಮತ್ತು ಮಾಜಿ ಸಿಒಒ ಯುಬಿ ಪ್ರವೀಣ್ ರಾವ್ ಅವರ ನಂತರ ಸಂಸ್ಥೆಯಲ್ಲಿ ಅತಿಹೆಚ್ಚು ವೇತನ ಪಡೆಯುತ್ತಿದ್ದ ಹಿರಿಯ ಎಕ್ಸಿಕ್ಯೂಟಿವ್ ಎನಿಸಿದ್ದರು.

ಅಕ್ಟೋಬರ್ 13 ರಂದು ತನ್ನ ಎರಡನೇ ತ್ರೈಮಾಸಿಕದ ಆದಾಯವನ್ನು ಘೋಷಿಸಲಿರುವ ಇನ್ಫೋಸಿಸ್ ಕಂಪನಿಯ ಪ್ರತಿ ಶೇರು ಬಿಎಸ್ ನಲ್ಲಿ ಶೇಕಡ 2.65ರಷ್ಟಿ ತಗ್ಗಿ ರೂ. 1423.90 ರ ಮೇಲೆ ಕೊನೆಗೊಂಡಿತು. ಅಕ್ಟೋಬರ್ 13 ರಂದೇ ನಡೆಯಲಿರುವ ಬೋರ್ಡ್ ಮೀಟಿಂಗ್ ನಲ್ಲಿ ಸಂಸ್ಥೆಯು ಶೇರುಗಳನ್ನು ವಾಪಸ್ಸು ಖರೀದಿಸುವ ಬಗ್ಗೆ ಪರಾಮರ್ಶೆ ನಡೆಸಲಿದೆ.

Published On - 11:36 am, Wed, 12 October 22