Global Investors Meet 2022-ಕರ್ನಾಟಕ ಈ ಬಾರಿ ರೂ. 5 ಲಕ್ಷ ಕೋಟಿ ಹೂಡಿಕೆ ಸೆಳೆಯುವ ನಿರೀಕ್ಷೆಯಿಟ್ಟುಕೊಂಡಿದೆ: ಮುರುಗೇಶ ನಿರಾಣಿ
‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ-2022 ರಲ್ಲಿ ರಾಜ್ಯವು ರೂ. 5 ಲಕ್ಷ ಕೋಟಿ ಹೂಡಿಕೆಯನ್ನು ಎದುರು ನೋಡುತ್ತಿದೆ,’ ಎಂದು ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ತಾಣ ಅಂತ ಪ್ರಮೋಟ್ ಮಾಡಲು ನವದೆಹಲಿಯಲ್ಲಿ ರೋಡ್ ಶೋ ಒಂದನ್ನು ಲಾಂಚ್ ಮಾಡಿದ ಬಳಿಕ ಸಚಿವ ನಿರಾಣಿ ಹೇಳಿದರು.
ನವದೆಹಲಿ: ಬರುವ ತಿಂಗಳು ಬೆಂಗಳೂರಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ (Global Investors Meet-2022) ದೇಶ ಮತ್ತು ವಿದೇಶೀ ಮೂಲದ ಕಂಪನಿಗಳಿಂದ ರೂ. 5 ಲಕ್ಷ ಕೋಟಿಗಳಿಗೂ ಮೀರಿದ ಹೂಡಿಕೆಯನ್ನು ಕರ್ನಾಟಕ ಸರ್ಕಾರ (Karnataka Government) ನಿರೀಕ್ಷಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ (Murugesh Nirani,) ಮಂಗಳವಾರ ಹೇಳಿದ್ದಾರೆ.ಆರು ವರ್ಷಗಳ ನಂತರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವು ಬೆಂಗಳೂರಲ್ಲಿ ನವೆಂಬರ್ 2-4 ವರೆಗೆ ನಡೆಯಲಿದೆ.
‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ-2022 ರಲ್ಲಿ ರಾಜ್ಯವು ರೂ. 5 ಲಕ್ಷ ಕೋಟಿ ಹೂಡಿಕೆಯನ್ನು ಎದುರು ನೋಡುತ್ತಿದೆ,’ ಎಂದು ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ತಾಣ ಅಂತ ಪ್ರಮೋಟ್ ಮಾಡಲು ನವದೆಹಲಿಯಲ್ಲಿ ರೋಡ್ ಶೋ ಒಂದನ್ನು ಲಾಂಚ್ ಮಾಡಿದ ಬಳಿಕ ಸಚಿವ ನಿರಾಣಿ ಹೇಳಿದರು.
ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಸಂಸ್ಥೆಗಳಿಗೆ ಜಮೀನು ಒದಗಿಸಲು ಬೆಂಗಳೂರು ಸುತ್ತಮುತ್ತ 20,000 ಎಕರೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ 30,000 ಎಕರೆ-ಒಟ್ಟು 50,000 ಎಕರೆಗಳಷ್ಟು ಭೂಮಿ ತೆಗೆದಿರಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರ ಒದಗಿಸುವ ಅತ್ಯದ್ಭುತ ಉದ್ಯಮ ಪರಿಸರ, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಉದ್ಯಮ-ಸ್ನೇಹಿ ನೀತಿಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಕರ್ನಾಟಕವು ಹೂಡಿಕೆ ಅತ್ಯಂತ ಪ್ರಶಸ್ತ ಸ್ಥಳ ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದ ನಿರಾಣಿ ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಕರ್ನಾಟಕವು ರೂ. 62,085 ಕೋಟಿಗಳಷ್ಟು ನೇರ ವಿದೇಶಿ ಹೂಡಿಕೆಯನ್ನು ಸೆಳೆದುಕೊಳ್ಳುವ ಮೂಲಕ ದೇಶದ ಒಟ್ಟಾರೆ ಎಫ್ ಡಿನ ಶೇಕಡಾ 38ರಷ್ಟು ಪಾಲನ್ನು ತನ್ನದಾಗಿಸಿಕೊಂಡಿತ್ತು.
ಕರ್ನಾನಟದವರೇ ಆಗಿರುವ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಈ ಸಂದರ್ಭದಲ್ಲಿ ಮಾತಾಡಿ, ‘ಸದೃಢ ಮತ್ತು ಸ್ಥಿರ ಆರ್ಥಿಕ ನೀತಿಯು ಹೂಡಿಕೆಗೆ ನಿರ್ಣಾಯಕ ಅಂಶವಾಗಿದ್ದು ಅದು ಕರ್ನಾಟಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ,‘ ಎಂದು ಹೇಳಿದರು.
ಸಹಭಾಗಿತ್ವದ ಹೂಡಿಕೆಗೆ ಅವಕಾಶಗಳನ್ನು ಎದುರು ನೋಡುತ್ತಿರುವ ದೇಶದ ಪ್ರಮುಖ ಕಂಪನಿಗಳ ಟಾಪ್ ಎಕ್ಸಿಕ್ಯೂಟಿವ್ ಜೊತೆ ರಾಷ್ಟ್ರದ ರಾಜಧಾನಿಯಲ್ಲಿ ಹಲವಾರು ಸಭೆಗಳನ್ನು ನಡೆಸಲಾಯಿತು ಎಂದು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಈ ವಿ ರಮಣರೆಡ್ಡಿ ಹೇಳಿದರು.
ನವದೆಹಲಿಯಲ್ಲಿ ನಡೆದ ಒಂದು-ದಿನದ ರೋಡ್ ಶೋನಲ್ಲಿ ರಾಜ್ಯದ ನಿಯೋಗವು ಐಟಿಸಿ, ಸ್ಕೇಪ್ ಇಂಡಿಯ, ರಿನ್ಯೂ ಪವರ್, ಸೆಂಬ್ ಕಾರ್ಪ್ ಎನರ್ಜಿ, ಲಿಥಿಯಾನ್ ಪವರ್, ದಾಲ್ಮಿಯ ಸಿಮೆಂಟ್, ಸ್ಟರ್ಲಿಂಗ್ ಟೂಲ್ಸ್, ನೆಸ್ಲೆ, ಜುಬಿಲಂಟ್ ಫುಡ್ ವರ್ಕ್ಸ್, ಗರುಡ ಏರೋಸ್ಪೇಸ್, ಓಸಿಯನ್ ಪರ್ಲ್ ಹೋಟೆಲ್ಸ್ , ವಿ-ಗಾರ್ಡ್ ಮತ್ತು ನಿತಿನ್ ಸಾಯಿ ರಿನ್ಯೂವೇಬಲ್ ಮೊದಲಾದ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿಯಾದರು
Published On - 1:47 pm, Wed, 12 October 22