ಭಾರತದಲ್ಲಿ ಮಾರುತಿಯ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಮಾರುತಿ ಆಲ್ಟೊ 800 ಮುಂಚೂಣಿಯಲ್ಲಿದೆ. ಇದೀಗ ಕಂಪನಿಯು ಈ ಕಾರನ್ನು ಹೊಸ ಶೈಲಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕೂ ಮುನ್ನ ಆಲ್ಟೋ ಕಾರನ್ನು ಹಲವು ವಿನ್ಯಾಸ, ಕೆಲವು ವಿಶೇಷತೆಗಳನ್ನು ಅಳವಡಿಸುವ ಮೂಲಕ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಯಾವುದೇ ರೀತಿಯಲ್ಲಿ ಅದರ ಜನಪ್ರಿಯತೆಯಲ್ಲಿ ಕುಸಿತ ಕಂಡುಬಂದಿರಲಿಲ್ಲ. ಇದೀಗ ಹೊಸ ಆಲ್ಟೋ ಕೂಡ ಹಳೆಯ ಮಾದರಿಯಲ್ಲೇ ಇರಲಿದ್ದು, ಆದರೆ ಈ ಬಾರಿ ಪೆಟ್ರೋಲ್ ಹಾಗೂ CNG ರೂಪಾಂತರದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ 5 ಲಕ್ಷ ರೂಪಾಯಿಗಿಂತ ಕಡಿಮೆ ಇರಲಿದೆ. ಹಾಗಿದ್ರೆ ಈ ಕಾರಿನ 5 ವೈಶಿಷ್ಟ್ಯಗಳನ್ನು ತಿಳಿಯೋಣ.
1. ಹೊಸ ಆಲ್ಟೋ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಸಾಧ್ಯತೆಯಿದೆ. ಇದು ಮಾರುತಿಯ ಎಸ್-ಪ್ರೆಸ್ಸೊ ಲುಕ್‌ನೊಂದಿಗೆ ಕಂಡು ಬರಲಿದೆ. ಏಕೆಂದರೆ ರಸ್ತೆ ಪರೀಕ್ಷೆಯ ಸಮಯದಲ್ಲಿ ಕಂಡು ಬಂದಿರುವ ನ್ಯೂ ಜೆನ್ ಆಲ್ಟೋ ಎಸ್-ಪ್ರೆಸ್ಸೊ ಕಾರಿನ ವಿನ್ಯಾಸವನ್ನು ಹೆಚ್ಚಾಗಿ ಹೋಲುತ್ತಿದೆ.
2. ಹೊಸ ತಲೆಮಾರಿನ ಆಲ್ಟೊ 796 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಈ ಎಂಜಿನ್ 48 ಪಿಎಸ್ ಪವರ್ ಮತ್ತು 69 ಎನ್ಎಂ ಪೀಕ್ ಟಾರ್ಕ್ ಅನ್ನು ಪಡೆಯುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರಲಿದೆ. ಇದರಲ್ಲಿ ಮಾರುತಿ ಸುಜುಕಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡುವ ಸಾಧ್ಯತೆಯಿದೆ.
3. ಕಂಪನಿಯು ಈ ಕಾರಿನ ಬೆಲೆಯನ್ನು ಕೈಗೆಟುಕುವ ವಿಭಾಗದಲ್ಲಿ ನಿರ್ವಹಿಸಲು ಬಯಸುತ್ತದೆ. ಹಾಗೆಯೇ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಈ ಸರಣಿಯ ಟಾಪ್ ಎಂಡ್ ರೂಪಾಂತರದಲ್ಲಿ ಲಭ್ಯವಿರುತ್ತದೆ. ಈ ವ್ಯವಸ್ಥೆಯು ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಇರಲಿದೆ.
4. ಪವರ್ ವಿಂಡೋ, ಎಲ್ಇಡಿ ಡಿಆರ್ಎಲ್ಗಳು, ವೀಲ್ ಕ್ಯಾಪ್ಗಳು, ಡ್ಯುಯಲ್ ಏರ್ಬ್ಯಾಗ್ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿವರ್ಸ್ ಪಾರ್ಕಿಂಗ್ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿ ಲಭ್ಯವಿರುತ್ತವೆ.
5. ಈ ವರ್ಷದ ಅಂತ್ಯದ ವೇಳೆಗೆ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದಾಗ್ಯೂ, ಇಲ್ಲಿಯವರೆಗೆ ಕಂಪನಿಯು ತನ್ನ ಬಿಡುಗಡೆಯ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
(Next Gen Maruti Suzuki Alto 800 launch this year)