ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಘೋಷಣೆ ಆತ್ಮ ನಿರ್ಭರ್ ಭಾರತ ಈಗಾಗಲೇ ವಿವಿಧ ವಲಯಗಳಲ್ಲಿ ವಿನೂತನ ಯೋಜನೆಗಳಿಗೆ ಸಾಕ್ಷಿಯಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಿಸಲ್ಪಟ್ಟ ಆತ್ಮ ನಿರ್ಭರ್ ಭಾರತ ಈಗ ಕೃಷಿ ಕ್ಷೇತ್ರದಲ್ಲೂ ವಿಶಿಷ್ಟ ಛಾಪು ಮೂಡಿಸಲು ಸನ್ನದ್ಧವಾಗಿದೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಡಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಯೋಜನೆಯ ಅನುಷ್ಠಾನದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುಕ್ಕುಟೋದ್ಯಮ, ಮೀನು ಸಾಕಾಣಿಕೆ, ಸಮುದ್ರ ಉತ್ಪನ್ನ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳಿಗೆ ಒಂದೊಂದು ನಿರ್ದಿಷ್ಟ ಜಿಲ್ಲೆಯನ್ನು ನಿಗದಿಪಡಿಸುವ ಸಲುವಾಗಿ ದೇಶಾದ್ಯಂತ ಸುಮಾರು 728 ಜಿಲ್ಲೆಗಳನ್ನು ಆರಿಸಿಕೊಂಡಿತ್ತು. ಅಲ್ಲದೇ ಆಯಾ ಜಿಲ್ಲೆಗಳಲ್ಲಿ ಒಂದೊಂದು ಪ್ರಮುಖ ಉದ್ಯಮಕ್ಕೆ ಸಂಬಂಧಿಸಿದ ಕೇಂದ್ರ ಸ್ಥಾಪಿಸುವುದಾಗಿಯೂ ಹೇಳಿತ್ತು.
ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವ ಜೊತೆಗೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಘೋಷಿತವಾಗಿರುವ ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಯಾವ ಜಿಲ್ಲೆಗಳಿಗೆ ಯಾವ ಉತ್ಪನ್ನಗಳನ್ನು ನಿಗದಿಪಡಿಸಲಾಗಿದೆ ಎಂಬ ಮಾಹಿತಿಯುಳ್ಳ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ 31 ಜಿಲ್ಲೆಗಳಿಗೂ ಒಂದೊಂದು ಬೆಳೆ ನಿಗದಿ ಮಾಡಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಒಟ್ಟು 31 ಜಿಲ್ಲೆಗಳಿಗೆ ಘೋಷಿಸಲಾಗಿರುವ ಈ ಉತ್ಪನ್ನಗಳಿಗೆ ಆತ್ಮನಿರ್ಭರ್ ಭಾರತ ಆಶಯದಲ್ಲಿ ಕೇಂದ್ರದಿಂದ ಉತ್ತೇಜನ ಸಿಗಲಿದ್ದು, ಒಂದು ಜಿಲ್ಲೆ ಒಂದು ಉತ್ಫನ್ನ ಯೋಜನೆಯಿಂದ ಈ ಉತ್ಪನ್ನಗಳನ್ನು ನಂಬಿಕೊಂಡವರಿಗೆ ಲಾಭವಾಗಲಿದೆ ಎಂದು ಕೇಂದ್ರ ಭರವಸೆ ವ್ಯಕ್ತಪಡಿಸಿದೆ.
ಇದನ್ನೂ ಓದಿ:
D Boss Darshan: ಸಂಭಾವನೆ ಪಡೆಯದೆ ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾದ ದರ್ಶನ್
Aero India 2021: ಆಗಸದಲ್ಲಿ ಆತ್ಮನಿರ್ಭರ ಪರಿಕಲ್ಪನೆ ಮೂಡಿಸಿದ ಏರ್ಕ್ರಾಫ್ಟ್!