AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm gas cylinder booking: ಪೇಟಿಎಂನಿಂದ ಗ್ಯಾಸ್ ಸಿಲಿಂಡರ್ 9 ರೂಪಾಯಿಗೇ ಪಡೆಯಿರಿ

809 ರೂಪಾಯಿಯ ಅಡುಗೆ ಅನಿಲ ಸಿಲಿಂಡರ್ 9 ರೂಪಾಯಿಗೇ ದೊರೆಯಬಹುದಾದಂಥ ಅವಕಾಶ ಇಲ್ಲಿದೆ. ಪೇಟಿಎಂನಿಂದ ನೀಡುತ್ತಿರುವ ಈ ಕ್ಯಾಶ್​ಬ್ಯಾಕ್ ಮೇ 31, 2021ರ ತನಕ ಮಾತ್ರ.

Paytm gas cylinder booking: ಪೇಟಿಎಂನಿಂದ ಗ್ಯಾಸ್ ಸಿಲಿಂಡರ್ 9 ರೂಪಾಯಿಗೇ ಪಡೆಯಿರಿ
ಪೇಟಿಎಮ್​ (ಪ್ರಾತಿನಿಧಿಕ ಚಿತ್ರ)
Srinivas Mata
|

Updated on: May 08, 2021 | 11:32 PM

Share

ನಿಮಗೆ ಅದೃಷ್ಟ ಇದ್ದರೆ 9 ರೂಪಾಯಿಗೇ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಸಿಗಬಹುದು. ಇಂಥದ್ದೊಂದು ಕ್ಯಾಶ್​ಬ್ಯಾಕ್ ಆಫರ್​ ಅನ್ನು ಪೇಟಿಎಂನಿಂದ ಮತ್ತೊಮ್ಮೆ ಗ್ರಾಹಕರಿಗಾಗಿ ತರಲಾಗಿದೆ. ನಿಮ್ಮ ಪೇಟಿಎಂ ಆ್ಯಪ್​ನಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ. 800 ರೂಪಾಯಿ ತನಕದ ಕ್ಯಾಶ್​ಬ್ಯಾಕ್ ಆಫರ್ ಅಂತ ಇರುತ್ತದೆ. 809 ರೂಪಾಯಿ ಮೌಲ್ಯದ ಅಡುಗೆ ಅನಿಲ ಸಿಲಿಂಡರ್ ಕೇವಲ 9 ರೂಪಾಯಿಗೆ ಈ ಪ್ರೋಮೋದಲ್ಲಿ ಸಿಗುತ್ತದೆ. ಈ ಕ್ಯಾಶ್​ಬ್ಯಾಕ್ ಆಫರ್ ಮೇ 31, 2021ರ ತನಕ ಇದೆ. ಈ ಹಿಂದೆ ಏಪ್ರಿಲ್ 30ನೇ ತಾರೀಕಿನ ತನಕ ಮಾತ್ರ ಇತ್ತು. ಯಾವ ಗ್ರಾಹಕರ ಮೊದಲ ಸಲ ಎಲ್​ಪಿಜಿ ಸಿಲಿಂಡರ್​ ಬುಕ್​ ಮಾಡುತ್ತಾರೋ ಮತ್ತು ಪೇಟಿಎಂ ಮೂಲಕ ಪಾವತಿಸುತ್ತಾರೋ ಅವರು ಈ ಆಫರ್​ಗೆ ಅರ್ಹರಾಗುತ್ತಾರೆ. ಈ ಡೀಲ್​ನಲ್ಲಿ ಸ್ಕ್ರಾಚ್​ ಕಾರ್ಡ್ ಜತೆಗೆ 800 ರೂಪಾಯಿ ಮೌಲ್ಯದ ಕ್ಯಾಶ್​ಬ್ಯಾಕ್ ಸಿಗುತ್ತದೆ.

ಮೊದಲ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿದಾಗ ಈ ಡೀಲ್ ತಾನಾಗಿಯೇ ದೊರೆಯುತ್ತದೆ. ಕನಿಷ್ಠ 500 ರೂಪಾಯಿ ಪಾವತಿಸಿದರೆ ಈ ರಿಯಾಯಿತಿ ಅನ್ವಯ ಆಗುತ್ತದೆ. ಈ ಕ್ಯಾಶ್​ಬ್ಯಾಕ್ ಪಡೆಯುವುದಕ್ಕೆ ಎಲ್​ಪಿಜಿ ಮೊತ್ತವನ್ನು ಪಾವತಿಸಿದ ಮೇಲೆ ದೊರೆಯುವ ಸ್ಕ್ರಾಚ್ ಕಾರ್ಡ್ ಅನ್ನು ಮೊದಲು ತೆರೆಯಬೇಕು. ಅದಕ್ಕೂ ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್​ನಲ್ಲಿ ಪೇಟಿಎಂ ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಆ ನಂತರ ನಿಮ್ಮ ಡೀಲರ್ ಬಳಿ ಸಿಲಿಂಡರ್ ಬುಕ್ ಮಾಡಬೇಕು. ಇದಕ್ಕಾಗಿ ಪೇಟಿಎಂ ಆ್ಯಪ್ ತೆರೆದು, Show More ಮೇಲೆ ಕ್ಲಿಕ್ ಮಾಡಿ, ಆ ನಂತರ ರೀಚಾರ್ಜ್ ಹಾಗೂ ಪೇ ಬಿಲ್ಸ್​ ವಿಭಾಗಕ್ಕೆ ತೆರಳಬೇಕು.

ಅಲ್ಲಿ ಸಿಲಿಂಡರ್ ಬುಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಡ್ರಾಪ್ ಡೌನ್ ಮೆನು ಮೂಲಕ ನಿಮ್ಮ ಡೀಲರ್ ಅನ್ನು ಆಯ್ಕೆ ಮಾಡಿಕೊಳ್ಳಿ. FIRSTLPG ಎಂಬ ಪ್ರೋಮೋ ಕೋಡ್ ಅನ್ನು ಬುಕ್ಕಿಂಗ್​ಗೂ ಮುಂಚೆ ಬಳಸಬೇಕು. ಬುಕ್ಕಿಂಗ್ ಆದ 24 ಗಂಟೆಯೊಳಗಾಗಿ ಕ್ಯಾಶ್​ಬ್ಯಾಕ್ ಸ್ಕ್ರಾಚ್ ಕಾರ್ಡ್ ದೊರೆಯುತ್ತದೆ. ಅದು ದೊರೆತ ಏಳು ದಿನಗಳ ಒಳಗಾಗಿ ಬಳಸಿಕೊಳ್ಳಬೇಕು ಎಂಬುದು ನೆನಪಿನಲ್ಲಿರಲಿ.

ಇದನ್ನೂ ಓದಿ: Best Data Plan: ಏರ್​ಟೆಲ್ Vs ಜಿಯೋ Vs ಬಿಎಸ್​ಎನ್​ಎಲ್ Vs ವೊಡಾಫೋನ್ ಐಡಿಯಾ ರೂ. 399 ಪ್ರೀಪೇಯ್ಡ್ ಪ್ಲಾನ್​ನಲ್ಲಿ ಏನೇನು ಆಫರ್?​

(Paytm offer till May 31, 2021, you can get up to 800 rupees cashback on LPG gas cylinder. Know how to avail the offer)

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ