ನಿಮಗೆ ಅದೃಷ್ಟ ಇದ್ದರೆ 9 ರೂಪಾಯಿಗೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಗಬಹುದು. ಇಂಥದ್ದೊಂದು ಕ್ಯಾಶ್ಬ್ಯಾಕ್ ಆಫರ್ ಅನ್ನು ಪೇಟಿಎಂನಿಂದ ಮತ್ತೊಮ್ಮೆ ಗ್ರಾಹಕರಿಗಾಗಿ ತರಲಾಗಿದೆ. ನಿಮ್ಮ ಪೇಟಿಎಂ ಆ್ಯಪ್ನಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ. 800 ರೂಪಾಯಿ ತನಕದ ಕ್ಯಾಶ್ಬ್ಯಾಕ್ ಆಫರ್ ಅಂತ ಇರುತ್ತದೆ. 809 ರೂಪಾಯಿ ಮೌಲ್ಯದ ಅಡುಗೆ ಅನಿಲ ಸಿಲಿಂಡರ್ ಕೇವಲ 9 ರೂಪಾಯಿಗೆ ಈ ಪ್ರೋಮೋದಲ್ಲಿ ಸಿಗುತ್ತದೆ. ಈ ಕ್ಯಾಶ್ಬ್ಯಾಕ್ ಆಫರ್ ಮೇ 31, 2021ರ ತನಕ ಇದೆ. ಈ ಹಿಂದೆ ಏಪ್ರಿಲ್ 30ನೇ ತಾರೀಕಿನ ತನಕ ಮಾತ್ರ ಇತ್ತು. ಯಾವ ಗ್ರಾಹಕರ ಮೊದಲ ಸಲ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುತ್ತಾರೋ ಮತ್ತು ಪೇಟಿಎಂ ಮೂಲಕ ಪಾವತಿಸುತ್ತಾರೋ ಅವರು ಈ ಆಫರ್ಗೆ ಅರ್ಹರಾಗುತ್ತಾರೆ. ಈ ಡೀಲ್ನಲ್ಲಿ ಸ್ಕ್ರಾಚ್ ಕಾರ್ಡ್ ಜತೆಗೆ 800 ರೂಪಾಯಿ ಮೌಲ್ಯದ ಕ್ಯಾಶ್ಬ್ಯಾಕ್ ಸಿಗುತ್ತದೆ.
ಮೊದಲ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿದಾಗ ಈ ಡೀಲ್ ತಾನಾಗಿಯೇ ದೊರೆಯುತ್ತದೆ. ಕನಿಷ್ಠ 500 ರೂಪಾಯಿ ಪಾವತಿಸಿದರೆ ಈ ರಿಯಾಯಿತಿ ಅನ್ವಯ ಆಗುತ್ತದೆ. ಈ ಕ್ಯಾಶ್ಬ್ಯಾಕ್ ಪಡೆಯುವುದಕ್ಕೆ ಎಲ್ಪಿಜಿ ಮೊತ್ತವನ್ನು ಪಾವತಿಸಿದ ಮೇಲೆ ದೊರೆಯುವ ಸ್ಕ್ರಾಚ್ ಕಾರ್ಡ್ ಅನ್ನು ಮೊದಲು ತೆರೆಯಬೇಕು. ಅದಕ್ಕೂ ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಪೇಟಿಎಂ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಆ ನಂತರ ನಿಮ್ಮ ಡೀಲರ್ ಬಳಿ ಸಿಲಿಂಡರ್ ಬುಕ್ ಮಾಡಬೇಕು. ಇದಕ್ಕಾಗಿ ಪೇಟಿಎಂ ಆ್ಯಪ್ ತೆರೆದು, Show More ಮೇಲೆ ಕ್ಲಿಕ್ ಮಾಡಿ, ಆ ನಂತರ ರೀಚಾರ್ಜ್ ಹಾಗೂ ಪೇ ಬಿಲ್ಸ್ ವಿಭಾಗಕ್ಕೆ ತೆರಳಬೇಕು.
ಅಲ್ಲಿ ಸಿಲಿಂಡರ್ ಬುಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಡ್ರಾಪ್ ಡೌನ್ ಮೆನು ಮೂಲಕ ನಿಮ್ಮ ಡೀಲರ್ ಅನ್ನು ಆಯ್ಕೆ ಮಾಡಿಕೊಳ್ಳಿ. FIRSTLPG ಎಂಬ ಪ್ರೋಮೋ ಕೋಡ್ ಅನ್ನು ಬುಕ್ಕಿಂಗ್ಗೂ ಮುಂಚೆ ಬಳಸಬೇಕು. ಬುಕ್ಕಿಂಗ್ ಆದ 24 ಗಂಟೆಯೊಳಗಾಗಿ ಕ್ಯಾಶ್ಬ್ಯಾಕ್ ಸ್ಕ್ರಾಚ್ ಕಾರ್ಡ್ ದೊರೆಯುತ್ತದೆ. ಅದು ದೊರೆತ ಏಳು ದಿನಗಳ ಒಳಗಾಗಿ ಬಳಸಿಕೊಳ್ಳಬೇಕು ಎಂಬುದು ನೆನಪಿನಲ್ಲಿರಲಿ.
(Paytm offer till May 31, 2021, you can get up to 800 rupees cashback on LPG gas cylinder. Know how to avail the offer)