Paytm: ಇಂಡಸ್​ಇಂಡ್ ಬ್ಯಾಂಕ್ ಎಫ್​ಡಿಯ ಮೂಲಕವೂ ಪೇಟಿಎಂ ಬಳಕೆದಾರರು ತಕ್ಷಣ ಪಾವತಿ ಮಾಡಬಹುದು

| Updated By: Srinivas Mata

Updated on: Jul 19, 2021 | 11:44 PM

ಇಂಡಸ್​ಇಂಡ್​ ಬ್ಯಾಂಕ್​ನಲ್ಲಿ ಇರುವ ಫಿಕ್ಸೆಡ್ ಡೆಪಾಸಿಟ್​ ಖಾತೆಯನ್ನು ಬಳಸಿ ಡಿಜಿಟಲ್ ಪೇಮೆಂಟ್ ಅಂಡ್ ಫೈನಾನ್ಷಿಯಲ್ ಕಂಪೆನಿಯಾದ ಪೇಟಿಎಂ ಬಳಕೆದಾರರು ತಕ್ಷಣವೇ ಪಾವತಿ ಮಾಡಬಹುದು ಎಂದು ಸೋಮವಾರ ಘೋಷಣೆ ಮಾಡಲಾಗಿದೆ.

Paytm: ಇಂಡಸ್​ಇಂಡ್ ಬ್ಯಾಂಕ್ ಎಫ್​ಡಿಯ ಮೂಲಕವೂ ಪೇಟಿಎಂ ಬಳಕೆದಾರರು ತಕ್ಷಣ ಪಾವತಿ ಮಾಡಬಹುದು
ಪೇಟಿಎಮ್​ (ಪ್ರಾತಿನಿಧಿಕ ಚಿತ್ರ)
Follow us on

ಡಿಜಿಟಲ್ ಪೇಮೆಂಟ್ ಅಂಡ್ ಫೈನಾನ್ಷಿಯಲ್ ಕಂಪೆನಿಯಾದ ಪೇಟಿಎಂನಿಂದ ಸೋಮವಾರ ಮಹತ್ವವಾದ ಘೋಷಣೆ ಮಾಡಲಾಗಿದೆ. ಅದರ ಪ್ರಕಾರವಾಗಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಗ್ರಾಹಕರು ತಮ್ಮ ಫಿಕ್ಸೆಡ್ ಡೆಪಾಸಿಟ್​ನ ಬ್ಯಾಲೆನ್ಸ್​ ಅನ್ನು ಬಳಸಿ ತಕ್ಷಣವೇ ಪಾವತಿ ಮಾಡಬಹುದು. ಆದರೆ ಫಿಕ್ಸೆಡ್​ ಡೆಪಾಸಿಟ್​ ಖಾತೆಯು ಪೇಟಿಎಂನ ಸಹಭಾಗಿ ಬ್ಯಾಂಕ್​ ಆದ ಇಂಡಸ್​ ಇಂಡ್​ ಬ್ಯಾಂಕ್​ನಲ್ಲಿ ಇರಬೇಕು. ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ತನ್ನ ಗ್ರಾಹಕರಿಗೆ ಸಹಭಾಗಿ ಬ್ಯಾಂಕ್ ಆದ ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುತ್ತದೆ. “ಪೇಟಿಎಂ ಆಲ್-ಇನ್-ಒನ್ ಪೇಮೆಂಟ್ ಗೇಟ್​ ವೇ ಈಗ ಫಿಕ್ಸೆಡ್ ಡೆಪಾಸಿಟ್ (ಎಫ್​ಡಿ) ಬ್ಯಾಲೆನ್ಸ್ ಅನ್ನು ಸಹಭಾಗಿ ಪ್ಲಾಟ್​ಫಾರ್ಮ್​ನಲ್ಲಿ ಪಾವತಿ ಮಾಡಲು ಅವಕಾಶ ಮಾಡಿಕೊಡುತ್ತದೆ,” ಎಂದು ಹೇಳಿಕೆಯಲ್ಲಿ ಪೇಟಿಎಂ ತಿಳಿಸಿದೆ.

“ಇದು ಪೇಟಿಎಂ ಪೇಮೆಂಟ್​ ಬ್ಯಾಂಕ್​ ಲಿಮಿಟೆಡ್​ ಜತೆಗಿನ ಸಹಯೋಗವಾಗಿದೆ. ಅದರ ಖಾತೆದಾರರಾಗಿದ್ದು, ಇಂಡಸ್​ಇಂಡ್​ ಬ್ಯಾಂಕ್​ನಲ್ಲಿ ಇರುವ ಅವರ ಫಿಕ್ಸೆಡ್ ಡೆಪಾಸಿಟ್​ ಖಾತೆಯನ್ನು ಬಳಸಿ, ಎಲ್ಲ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲೂ ತಕ್ಷಣವೇ ಪಾವತಿ ಮಾಡಬಹುದು. ಈ ಆವಿಷ್ಕಾರದ ಮೂಲಕವಾಗಿ ಗ್ರಾಹಕರು ತಮ್ಮ ಲಿಕ್ವಿಡಿಟಿಯನ್ನು ರಿಯಲ್​ ಟೈಮ್​ನಲ್ಲಿ ನಿರ್ವಹಿಸಿ, ಯಾವುದೇ ಅಡೆತಡೆ ಇಲ್ಲದೆ ಪಾವತಿ ಮಾಡಬಹುದು,” ಎಂದು ಸಂಸ್ಥೆಯು ಹೇಳಿದೆ. ಇನ್ನು ಗ್ರಾಹಕರು ಇಂಡಸ್​ಇಂಡ್ ಬ್ಯಾಂಕ್​ನಲ್ಲಿನ ಎಫ್​ಡಿಯನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್ ಅಕೌಂಟ್​ಗೆ ರೀಡಿಮ್​ ಮಾಡಬಹುದು. ರಿಯಲ್​ ಟೈಮ್​ನಲ್ಲಿ ಮಾಡಬಹುದು ಹಾಗೂ ಆ ಹಣವನ್ನು ಬಳಸಿ, ಪಾವತಿ ಸಹ ಮಾಡಬಹುದು.

ಪೇಟಿಎಂ ಪೇಮೆಂಟ್ಸ್ ಗೇಟ್​ವೇ ಜತೆಗೆ ಈ ರೀತಿ ಸಹಭಾಗಿತ್ವ ಮಾಡಿ, ಫಿಕ್ಸೆಡ್ ಡೆಪಾಸಿಟ್ ಬಾಕಿಯನ್ನು ಪಾವತಿ ಮೂಲಕ್ಕೆ ಅಂತ ಬಳಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಗ್ರಾಹಕರಿಗೆ ತಮ್ಮ ಬಾಕಿಯನ್ನು ಲಿಕ್ಚಿಡೇಟ್ ಮಾಡಲು ಅನುಕೂಲವಾಗಿ, ರಿಯಲ್ ಟೈಮ್​ನಲ್ಲಿ ಸುಲಭವಾಗಿ ಪಾವತಿಸಬಹುದು ಎಂದು ಪೇಟಿಎಂ ಬ್ಯಾಂಕ್ ವಕ್ತಾರರು ತಿಳಿಸಿದ್ದಾರೆ. ಈ ವರ್ಷದ ಮಾರ್ಚ್ ಕೊನೆಯ 31ನೇ ತಾರೀಕಿನ ಹೊತ್ತಿಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮತ್ತು ಇಂಡಸ್​ಇಂಡ್ ಬ್ಯಾಂಕ್​ನ ವ್ಯವಸ್ಥೆ ಅಡಿಯಲ್ಲಿ 1750 ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇತ್ತು. ಇದಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಗ್ರಾಹಕರಿಗೆ ಯಾವುದೇ ಶುಲ್ಕವನ್ನಾಗಲಿ ಅಥವಾ ದಂಡವನ್ನಾಗಲಿ ವಿಧಿಸುವುದಿಲ್ಲ. ನೆನಪಿನಲ್ಲಿಡಿ, ಇಂಡಸ್​ಇಂಡ್ ಬ್ಯಾಂಕ್ ಸಹಯೋಗದಲ್ಲಿ ಎಫ್​ಡಿ ಖಾತೆ ತೆರೆದಿದ್ದು, ಅವಧಿಗೆ ಪೂರ್ವವಾಗಿ ತೆರೆದಿದ್ದರೂ ಯಾವುದೇ ಮೊತ್ತ ಕಡಿತ ಆಗುವುದಿಲ್ಲ. ಅಂದ ಹಾಗೆ ಮಾರ್ಚ್ 31, 2021ರ ಕೊನೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ 6.4 ಕೋಟಿ ಉಳಿತಾಯ ಖಾತೆಗಳಿದ್ದವು.

ಇದನ್ನೂ ಓದಿ: Paytm Postpaid Mini: ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಿದ ಪೇಟಿಎಂ; ರೂ. 1000 ತನಕ ಸಾಲ ನೀಡುವ ಹೊಸ ಯೋಜನೆ

(Paytm users can pay money instantly through IndusInd Bank fixed deposits)