Simple One: ಸಿಂಪಲ್ ಸ್ಕೂಟರ್ ಪರಿಚಯಿಸಿದ ಸಿಂಪಲ್ ಎನರ್ಜಿ: ಮೈಲೇಜ್ ಬರೋಬ್ಬರಿ 240 ಕಿ.ಮೀ

| Updated By: ಝಾಹಿರ್ ಯೂಸುಫ್

Updated on: Aug 16, 2021 | 8:03 PM

Simple One electric scooter: ಸಿಂಪಲ್ ಲೂಪ್ ಚಾರ್ಜರ್​ನಲ್ಲಿ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳ ಚಾರ್ಜ್​ನಲ್ಲಿ 2.5 ಕಿ.ಮೀ ಕ್ರಮಿಸಬಹುದು. ಹಾಗೆಯೇ 30 ನಿಮಿಷಗಳ ಚಾರ್ಜ್ ಮಾಡಿದ್ರೆ 75 ಕಿ.ಮೀ ದೂರ ಚಲಿಸಬಹುದು.

Simple One: ಸಿಂಪಲ್ ಸ್ಕೂಟರ್ ಪರಿಚಯಿಸಿದ ಸಿಂಪಲ್ ಎನರ್ಜಿ: ಮೈಲೇಜ್ ಬರೋಬ್ಬರಿ 240 ಕಿ.ಮೀ
Simple One electric scooter
Follow us on

ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಕಂಪೆನಿಯು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂಪಲ್ ಒನ್​ ಅನ್ನು ಬಿಡುಗಡೆ ಮಾಡಿದೆ. ಅತ್ತ ಓಲಾ ಕಂಪೆನಿಯು ಎಸ್​1 ಸ್ಕೂಟರ್ ಅನಾವರಣಗೊಳಿಸಿದ ಬೆನ್ನಲ್ಲೇ ಇತ್ತ ಸಿಂಪಲ್ ಒನ್ ಕೂಡ ಬಿಡುಗಡೆಯಾಗಿದೆ. ಕಂಪೆನಿಯು ಶೀಘ್ರದಲ್ಲೇ ಬೃಹತ್ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸ್ಥಾಪಿಸಲಿದೆ. ಇದಕ್ಕಾಗಿ ಆಯಾ ನಗರಗಳ ಪ್ರಮುಖ ರೆಸ್ಟೊರೆಂಟ್ ಹಾಗೂ ಶಾಂಪಿಂಗ್ ಮಾಲ್​ಗಳ ಜೊತೆ ಕಂಪೆನಿ ಪಾಲುದಾರಿಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಇದರಿಂದ ಚಾರ್ಜಿಂಗ್ ಸಮಸ್ಯೆ ತಪ್ಪಲಿದ್ದು, ಹಾಗೆಯೇ ನಗರಗಳ ಪ್ರದೇಶಗಳ ಎಲ್ಲೆಡೆಯು ಸಿಂಪಲ್ ಲೂಪ್ ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.

ಈ ವಿದ್ಯುತ್ ಚಾಲಿತ ಸ್ಕೂಟರ್​ನಲ್ಲಿ 4.8 kWh ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ಇದು ಮಿಡ್-ಡ್ರೈವ್ ಮೋಟಾರ್ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸ ಹೊಂದಿದ್ದು, ಅದರ ಜೊತೆಗೆ ತೆಗೆಯಬಹುದಾದ ಬ್ಯಾಟರಿ ಇದರಲ್ಲಿದೆ. ಹೀಗಾಗಿ 2 ಬ್ಯಾಟರಿ ಬಳಸಿ ದೂರದ ಪ್ರಯಾಣವನ್ನು ಕೂಡ ಮಾಡಬಹುದು. ಹಾಗೆಯೇ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 100 ಕಿಮೀ. ಇದು ಕೇವಲ 3.6 ಸೆಕೆಂಡುಗಳಲ್ಲಿ 0-50 ಕಿಲೋಮೀಟರ್‌ಗಳ ವೇಗವನ್ನು ಪಡೆಯುತ್ತದೆ.

ಸಿಂಪಲ್ ಒನ್ ಸ್ಕೂಟರ್​ 72 Nm ಟಾರ್ಕ್ ಮತ್ತು 4.5 kW ಪವರ್ ಹೊಂದಿದೆ. ಹಾಗೆಯೇ 110 ಕೆಜಿ ಕರ್ಬ್ ಮತ್ತು 30 ಲೀಟರ್ ಬೂಟ್ ಸ್ಪೇಸ್ ಇದರಲ್ಲಿ ನೀಡಲಾಗಿದೆ. ಇನ್ನು ಈ ಸ್ಕೂಟರ್​ನಲ್ಲಿ ಟಚ್ ಸ್ಕ್ರೀನ್, ಆನ್‌ಬೋರ್ಡ್ ನ್ಯಾವಿಗೇಷನ್, ಬ್ಲೂಟೂತ್ ಇತ್ಯಾದಿ ಸ್ಮಾರ್ಟ್ ಫೀಚರ್‌ಗಳನ್ನೂ ಸಹ ನೀಡಲಾಗಿದೆ.

ಸಿಂಪಲ್ ಲೂಪ್ ಚಾರ್ಜರ್​ನಲ್ಲಿ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳ ಚಾರ್ಜ್​ನಲ್ಲಿ 2.5 ಕಿ.ಮೀ ಕ್ರಮಿಸಬಹುದು. ಹಾಗೆಯೇ 30 ನಿಮಿಷಗಳ ಚಾರ್ಜ್ ಮಾಡಿದ್ರೆ 75 ಕಿ.ಮೀ ದೂರ ಚಲಿಸಬಹುದು. ಅಷ್ಟೇ ಅಲ್ಲದೆ ಒಂದು ಬಾರಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಂಡರೆ ಇಕೋ ಮೋಡ್​ನಲ್ಲಿ 240 ಕಿ.ಮೀ ಮೈಲೇಜ್ (ರೇಂಜ್) ಸಿಗಲಿದೆ. ಅಂದಹಾಗೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್​ನ ಬೆಲೆ ಆರಂಭಿಕ ಬೆಲೆ 1,10,000 ರೂ.

ಇದನ್ನೂ ಓದಿ: Jio Offer: ಜಿಯೋ ಧಮಾಕಾ ಆಫರ್: 1095 GB ಡೇಟಾ ಜೊತೆ 1 ವರ್ಷದವರೆಗೆ ಉಚಿತ ಕರೆ ಸೌಲಭ್ಯ

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ