Tata Motors: ಇನ್​ಪುಟ್​ ವೆಚ್ಚ ಸರಿದೂಗಿಸಲು ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏರಿಕೆ

| Updated By: Srinivas Mata

Updated on: Jul 09, 2022 | 1:51 PM

ಏರುತ್ತಿರುವ ಇನ್​ಪುಟ್​ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಟಾಟಾ ಮೋಟಾರ್ಸ್​ನಿಂದ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Tata Motors: ಇನ್​ಪುಟ್​ ವೆಚ್ಚ ಸರಿದೂಗಿಸಲು ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಏರುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಭಾಗಶಃ ಸರಿದೂಗಿಸುವ ಪ್ರಯತ್ನದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಯಾಣಿಕ ವಾಹನ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸಿರುವುದಾಗಿ ಟಾಟಾ ಮೋಟಾರ್ಸ್ (Tata Motors) ಶನಿವಾರ ಪ್ರಕಟಿಸಿದೆ. ಶೇ 0.55ರಷ್ಟು ವೇಯ್ಟೆಡ್ ಸರಾಸರಿ ಹೆಚ್ಚಳವು ವೇರಿಯಂಟ್ ಮತ್ತು ಮಾಡೆಲ್ ಅನ್ನು ಅವಲಂಬಿಸಿ ಶ್ರೇಣಿಯಾದ್ಯಂತ ಶನಿವಾರದಿಂದ ಜಾರಿಗೆ ಬರಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿದ ಇನ್‌ಪುಟ್ ವೆಚ್ಚದ ಗಮನಾರ್ಹ ಭಾಗವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕಂಪೆನಿಯು ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ.

“ಆದರೆ ಇನ್‌ಪುಟ್ ವೆಚ್ಚದಲ್ಲಿ ಆದ ಹೆಚ್ಚಳದ ಸಂಗ್ರಹದಲ್ಲಿ ಪರಿಣಾಮವನ್ನು ಸರಿದೂಗಿಸಲು ಕನಿಷ್ಠ ಬೆಲೆ ಏರಿಕೆಯನ್ನು ಮಾಡಲಾಗುತ್ತಿದೆ” ಎಂದು ಅದು ಸೇರಿಸಿದೆ. ಕಂಪೆನಿಯು ದೇಶೀಯ ಮಾರುಕಟ್ಟೆಯಲ್ಲಿ ಪಂಚ್, ನೆಕ್ಸನ್, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಟಾಟಾ ಮೋಟಾರ್ಸ್ ಈಗಾಗಲೇ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಈ ತಿಂಗಳಿನಿಂದ ಶೇ 1.5ರಿಂದ ಶೇ 2.5ರಷ್ಟು ಹೆಚ್ಚಿಸಿದೆ.

ಈ ನಡುವೆ ಐಷಾರಾಮಿ ಕಾರ್ ಬ್ರಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ ವಾಹನ ಪ್ರಮುಖ ಜಾಗತಿಕ ಹೋಲ್​ಸೇಲ್​ಗಳು ಜೂನ್ 2022ರ (Q1FY23) ಅವಧಿಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಶೇ 48ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ 3,16,443 ವಾಹನಗಳಿಗೆ ತಲುಪಿದೆ. ನಿಯಂತ್ರಕ ಫೈಲಿಂಗ್ ಪ್ರಕಾರ, FY23ರ ಮೊದಲ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಎಲ್ಲ ವಾಣಿಜ್ಯ ವಾಹನಗಳು ಮತ್ತು ಟಾಟಾ ಡೇವೂ ಶ್ರೇಣಿಯ ಜಾಗತಿಕ ಹೋಲ್​ಸೇಲ್ FY22ರ ಮೊದಲ ತ್ರೈಮಾಸಿಕಕ್ಕಿಂತ ಶೇ 97ರಷ್ಟು ಹೆಚ್ಚಾಗಿದೆ. Q1FY23ರಲ್ಲಿ, ಎಲ್ಲ ಪ್ರಯಾಣಿಕ ವಾಹನಗಳ ಜಾಗತಿಕ ಹೋಲ್​ಸೇಲ್ 2,12,914 ಯೂನಿಟ್​ಗಳಾಗಿವೆ. ಅಂದರೆ FY22ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 32ರಷ್ಟು ಹೆಚ್ಚಾಗಿದೆ.

ಇಲ್ಲಿ ಗಮನಿಸಿಬೇಕಾದ ಅಂಶ ಏನೆಂದರೆ, ಅದರ ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್‌ನ ಜಾಗತಿಕ ಹೋಲ್​ಸೇಲ್ 82,587 ವಾಹನಗಳಾಗಿವೆ (Q1FY23ಗಾಗಿ JLR ಸಂಖ್ಯೆ 10,772 ಯೂನಿಟ್ CJLR ವಾಲ್ಯೂಮ್​ಗಳನ್ನು ಒಳಗೊಂಡಿದೆ). ಮಾದರಿಯ ಪ್ರಕಾರ, ತ್ರೈಮಾಸಿಕದಲ್ಲಿ ಜಾಗ್ವಾರ್ ಹೋಲ್​ಸೇಲ್ 14,596 ವಾಹನಗಳಾಗಿದ್ದರೆ, ತ್ರೈಮಾಸಿಕದಲ್ಲಿ ಲ್ಯಾಂಡ್ ರೋವರ್ ಹೋಲ್​ಸೇಲ್ ಮಾರಾಟ 67,991 ವಾಹನಗಳಾಗಿವೆ. ಈ ತಿಂಗಳ ಆರಂಭದಲ್ಲಿ ಟಾಟಾ ಮೋಟಾರ್ಸ್ ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟವನ್ನು ಹೊರತುಪಡಿಸಿ ಜೂನ್ ಮಾಸಿಕ ಮತ್ತು Q1FY23 ಮಾರಾಟದ ಡೇಟಾವನ್ನು ಪ್ರಕಟಿಸಿತು.

ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 1,07,786 ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ 2023ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಮಾರಾಟವು ಶೇ 110ರಷ್ಟು ಏರಿಕೆಯಾಗಿದೆ ಎಂದು ಜುಲೈ 1ರಂದು ಟಾಟಾ ಮೋಟಾರ್ಸ್ ಮಾಹಿತಿ ಬಹಿರಂಗಪಡಿಸಿದೆ. ಇನ್ನು ಈ ಮಧ್ಯೆ, ಒಟ್ಟು ದೇಶೀಯ ಪ್ರಯಾಣಿಕ ಕಾರುಗಳ ಮಾರಾಟವು Q1FY23ರಲ್ಲಿ ಶೇ 102ರಷ್ಟು ಏರಿಕೆಯಾಗಿ, 1,30,125 ಯೂನಿಟ್‌ಗಳಾಗಿವೆ. ಕಳೆದ ವರ್ಷದಲ್ಲಿ ಇದು 64,386 ಯೂನಿಟ್​ಗಳಾಗಿತ್ತು. ಒಟ್ಟಾರೆಯಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಾರಾಟವು 2,31,248 ವಾಹನಗಳಾಗಿದ್ದು, Q1 FY22ರಲ್ಲಿ 1,14,784 ಯೂನಿಟ್​ ಆಗಿತ್ತು.

Published On - 1:51 pm, Sat, 9 July 22