ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರೋ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಆಡಳಿತ ಮಂಡಳಿ, ಎರಡನೇ ಬಾರಿಗೆ ಕಂಪನಿಗೆ ಲಾಕ್‌ಔಟ್ ಘೋಷಣೆ ಮಾಡಿದೆ. ಅತ್ತ ಕಂಪನಿಯ ಆಡಳಿತ ಮಂಡಳಿಯ ನಡೆಯನ್ನ ವಿರೋಧಿಸಿ ಕಾರ್ಮಿಕರು ಸಹ ಪ್ರತಿಭಟನೆ ಮುಂದುವರೆಸಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರ ಸಹ ಮಧ್ಯಪ್ರವೇಶಿಸಿ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮುಖಂಡರ ಸಭೆ ನಡೆಸಿ, ರಾಜಿ ಸಂಧಾನ ಸಹ ಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು.
ಅಲ್ಲದೆ ಲಾಕ್ಔಟ್ ಹಾಗೂ ಮುಷ್ಕರ ಎರಡನ್ನೂ ನಿಷೇಧಿಸಿ ರಾಜ್ಯ ಸರ್ಕಾರ ನವೆಂಬರ್ 18ರಂದು ಆದೇಶಿಸಿತ್ತು. ಈ ನಿಟ್ಟಿನಲ್ಲಿ ಕಂಪನಿ ಲಾಕ್ಔಟ್ ತೆರವುಗೊಳಿಸಿ ನವೆಂಬರ್ 10ರಂದು ಆದೇಶಿಸಿತ್ತು.
ಈ ನಿಟ್ಟಿನಲ್ಲಿ ಕಂಪನಿ ಲಾಕ್ಔಟ್ ತೆರವುಗೊಳಿಸಿ ನವೆಂಬರ್ 19ರಿಂದ ಕೆಲಸ ಪುನಾರಂಭ ಮಾಡಿತ್ತು. ಆದ್ರೆ ಕಾರ್ಮಿಕರು ಮುಷ್ಕರ ಮುಂದುವರೆಸಿದ್ದರಿಂದ ಮತ್ತೆ ಎರಡನೇ ಬಾರಿ ಟೊಯೋಟಾ ಕಂಪನಿ ಮತ್ತೆ ಲಾಕ್ಔಟ್ ಘೋಷಣೆ ಮಾಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಆಡಳಿತ ಮಂಡಳಿ, ಕಾರ್ಮಿಕರು ಶಿಸ್ತು, ಕಂಪನಿಯ ನಿಯಮಗಳನ್ನ ಪಾಲಿಸುತ್ತಿಲ್ಲ. ಕೆಲಸಕ್ಕೆ ಬರೋ ಕಾರ್ಮಿಕರಿಗೆ, ಮುಖಂಡರು ಬೆದರಿಕೆ ಹಾಕ್ತಿದ್ದಾರೆ. ಕೆಲಸಕ್ಕೆ ಕಾರ್ಮಿಕರು ಹಾಜರಾಗಿಲ್ಲ. ಹೀಗಾಗಿ ನಾವು ಎರಡನೇ ಬಾರಿ ಲಾಕ್ಔಟ್ ಮಾಡಿದ್ದೇವೆ ಎಂದಿದೆ.
ಒಟ್ನಲ್ಲಿ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಆರೋಪ ಪ್ರತ್ಯಾರೋಪದಿಂದ ಕಂಪನಿ ಲಾಕ್‌ಔಟ್ ಆಗಿದ್ರೆ ಕಾರ್ಮಿಕರು ಹೋರಾಟ ಮುಂದುವರೆಸಿದ್ದಾರೆ. ಹೀಗಾಗಿ ಸರ್ಕಾರ ಈ ವಿಚಾರವಾಗಿ ಮತ್ತೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸೋ ಕೆಲ್ಸ ಮಾಡ್ಬೇಕಿದೆ.
Published On - 6:40 am, Thu, 26 November 20