Electric Scooter: ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

| Updated By: ಝಾಹಿರ್ ಯೂಸುಫ್

Updated on: Feb 14, 2022 | 10:31 PM

electric scooter: ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಕಂಪನಿಯು ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ಪ್ರವೇಶಿಸಿದೆ. ಸ್ಥಳೀಯ ಮತ್ತು 'ಮೇಕ್-ಇನ್-ಇಂಡಿಯಾ' ಉಪಕ್ರಮಗಳನ್ನು ಉತ್ತೇಜಿಸಲು ಹೊಸ ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Electric Scooter: ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ
wardwizard
Follow us on

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪೆನಿ ವಾರ್ಡ್ ವಿಝಾರ್ಡ್ ಇದೀಗ ಎರಡು ಹೊಸ ‘ಮೇಡ್-ಇನ್-ಇಂಡಿಯಾ’ ಹೈಸ್ಪೀಡ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಸ್ಕೂಟರ್‌ಗಳಿಗೆ ವೋಲ್ಫ್ + (Wolf +) ಮತ್ತು ಜೆನ್ ನೆಕ್ಸ್ಟ್​ ನ್ಯಾನೋ + (Gen Next Nanu +) ಎಂದು ಹೆಸರಿಡಲಾಗಿದೆ. ಇದಲ್ಲದೆ, ಕಂಪನಿಯು ಫ್ಲೀಟ್ ಮ್ಯಾನೇಜ್‌ಮೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಡೆಲ್ ಗೋ ಲಾಂಚ್ ಅನ್ನು ಕೂಡ ಗ್ರಾಹಕರಿಗೆ ಪರಿಚಯಿಸಿದೆ.

ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಕಂಪನಿಯು ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ಪ್ರವೇಶಿಸಿದೆ. ಸ್ಥಳೀಯ ಮತ್ತು ‘ಮೇಕ್-ಇನ್-ಇಂಡಿಯಾ’ ಉಪಕ್ರಮಗಳನ್ನು ಉತ್ತೇಜಿಸಲು ಹೊಸ ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಕಂಪನಿಯು ಗುಜರಾತ್‌ನ ವಡೋದರದಲ್ಲಿರುವ ತನ್ನ ಸುಧಾರಿತ ಉತ್ಪಾದನಾ ಘಟಕದಲ್ಲಿ ಈ ಸ್ಕೂಟರ್‌ಗಳನ್ನು ನಿರ್ಮಿಸಿರುವುದಾಗಿ ವಾರ್ಡ್ ವಿಝಾರ್ಡ್ ಕಂಪೆನಿ ತಿಳಿಸಿದೆ.

ಹೊಸ Wolf +, Gen Next Nanu ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳೇನು?
ಇದು ಕೀಲೆಸ್ ಸ್ಟಾರ್ಟ್, ಸ್ಮಾರ್ಟ್ ಕನೆಕ್ಟಿವಿಟಿ, ಡ್ರೈವಿಂಗ್ ಮೋಡ್, ರಿಮೋಟ್ ಅಪ್ಲಿಕೇಶನ್, ರಿವರ್ಸ್ ಮೋಡ್, ಆಂಟಿ-ಥೆಫ್ಟ್ ಮತ್ತು GPS ಸಕ್ರಿಯಗೊಳಿಸಿದಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಕೂಟರ್. ಈ ಸ್ಕೂಟರ್‌ಗಳಲ್ಲಿ 1500W ಮೋಟಾರ್‌ ಅಳವಡಿಸಲಾಗಿದೆ. ಇದು 20 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಇದು 55 kmph ಗರಿಷ್ಠ ವೇಗ ಹೊಂದಿದೆ. ಈ ಸ್ಕೂಟರ್ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 100 ಕಿಮೀ ವರೆಗೂ ಚಲಿಸಬಹುದು.

ಅಂದಹಾಗೆ ವೋಲ್ಫ್ + ಬೆಲೆ 1.10 ಲಕ್ಷ (ಎಕ್ಸ್ ಶೋ ರೂಂ), ಆದರೆ ಜೆನ್ ನೆಕ್ಸ್ಟ್ ನ್ಯಾನೋ + ಮತ್ತು ಡೆಲ್ ಗೋ ಕ್ರಮವಾಗಿ 1.06 ಲಕ್ಷ ಮತ್ತು ರೂ 1,14,500 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಸಬಹುದು.

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(wardwizard launches high speed electric scooter)